ಕನ್ನಡದಲ್ಲಿ ಗೂಗಲ್ ಸರ್ಚ್ - ಹಳತು ಹೊನ್ನು

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu Honnu.

ಗೂಗಲ್ ಸರ್ಚ್ ಅನ್ನು ಕನ್ನಡದಲ್ಲಿ ಬಳಸುವುದು ಅತೀ ಸುಲಭ.

ಮೊದಲ ವಿಧಾನ: ತಾತ್ಕಾಲಿಕವಾಗಿ ಕನ್ನಡ ಗೂಗಲ್ ಸರ್ಚ್ ಲೋಡ್ ಮಾಡುವುದು.

ಹಂತ ೧:
             ನಿಮ್ಮ ಆಯ್ಕೆಯ ವೆಬ್ ಬ್ರೌಸರ್ ಒಂದರಲ್ಲಿ ಹೊಸ ಟ್ಯಾಬ್ ತೆರೆಯಿರಿ. ನಾನಿಲ್ಲಿ ಮೊಜಿಲ್ಲಾ ಫೈರ್ ಫಾಕ್ಸ್ ಬಳಸುತ್ತಿದ್ದೇನೆ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu Honnu.

ಹಂತ ೨:
             ಯು ಆರ್ ಎಲ್ ಬಾರ್ ನಲ್ಲಿ ಕನ್ನಡ ಗೂಗಲ್ ನ ಈ ತಾಣವಿಳಾಸವನ್ನು ನಮೂದಿಸಿ "https://www.google.co.in/?hl=kn" ಎಂಟರ್ ಒತ್ತಿ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu Honnu.

ಹಂತ ೩:
             ಈಗ ಗೂಗಲ್ ಸರ್ಚ್ ಕನ್ನಡದಲ್ಲಿ ತೆರೆದುಕೊಳ್ಳುತ್ತದೆ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu Honnu.

ಹಂತ ೪:
             ಒಂದುವೇಳೆ ನೀವು ಈಗಾಗಲೇ ಗೂಗಲ್ ನ ಆಂಗ್ಲ ಅಥವಾ ಬೇರೆ ಭಾಷೆಯ ತಾಣವನ್ನು ತೆರೆದಿದ್ದರೆ, ಆ ಪರದೆಯಲ್ಲಿ ಕೆಳಗಡೆ ಕಾಣುವ "ಕನ್ನಡ" ಲಿಂಕ್ ಮೇಲೆ ಒತ್ತುವುದರ ಮೂಲಕವೂ ಕನ್ನಡ ಗೂಗಲ್ ಸರ್ಚ್ ತೆರೆಯಬಹುದು.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu Honnu.

ಎರಡನೆಯ ವಿಧಾನ: ಕನ್ನಡ ಗೂಗಲ್ ಸರ್ಚ್ ಅನ್ನು ನಿಮ್ಮ ಬ್ರೌಸರ್ ನ ಮುಖಪುಟವನ್ನಾಗಿ ಹೊಂದಿಸುವುದು.

೧. ಇಂಟರ್ನೆಟ್ ಎಕ್ಷ್ಪ್ಲೋರರ್ ನಲ್ಲಿ ಹೊಂದಿಸಲು ಇಲ್ಲಿ ಭೇಟಿ ನೀಡಿ.

೨. ಫೈರ್ ಫಾಕ್ಸ್ ನಲ್ಲಿ ಹೊಂದಿಸಲು ಇಲ್ಲಿ ಭೇಟಿ ನೀಡಿ.

೩. ಕ್ರೋಮ್ ನಲ್ಲಿ ಹೊಂದಿಸಲು ಇಲ್ಲಿ ಭೇಟಿ ನೀಡಿ.

ಕೊನೆಯಲ್ಲಿ ಪ್ರಶ್ನೆಯೊಂದು ಉಳಿದಿದೆಯೇ? ಹಾಗಿದ್ದರೆ ನಮಗೆ ತಿಳಿಸಿ.