ಮಾತೃಭೂಮಿಯ ಮೇಲಿನ ಮಮತೆ ಮುಗಿದ್ಹೋಯಿತೆ?! - ಹಳತು ಹೊನ್ನು



ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಸುಮ್ಮನೆ ಈ ದೇಶವನ್ನು ತೊರೆದು ಬೇರೊಂದು ನಾಡಿನಲ್ಲಿ ನೆಲೆಸಬೇಕು ಎಂದು ಯೋಚಿಸುವಷ್ಟು ಮಟ್ಟಿಗೆ, "ತುಂಬಾ ಭಯಾನಕ / ನಿರಾಶಾದಾಯಕ ಮನಸ್ಥಿತಿಯ ಜನರಿಂದ" ಅಥವಾ "ನಿಮ್ಮ ವಾತಾವರಣದಲ್ಲಿ ನಡೆದ ಕೆಲ ಕಹಿ ಘಟನೆಗಳಿಂದ" ನಿಮಗೆಂದಾದರೂ ಹತಾಶೆಯಾಗಿದೆಯೇ?

"ಹೀಗೇ ಆದರೆ, ಈ ದೇಶ ನಾಶವಾಗುತ್ತದೆ" ಅಥವಾ "ಇದೇ ರೀತಿ ಮುಂದುವರಿದರೆ ಭಾರತವು ಎಂದಿಗೂ ಉದ್ಧಾರವಾಗುವುದಿಲ್ಲ" ಎಂದು ಯಾವಾಗಲಾದರೂ ನಿಮಗನಿಸಿದೆಯೇ?

ನಿಮಗೆ ಯಾವಾಗಲಾದರೂ "ನಾನು ಇನ್ನುಮೇಲೆ ಮಾತೃಭೂಮಿ, ಸಂಸ್ಕೃತಿ, ಸಂಪ್ರದಾಯಗಳು, ಭಾಷೆ(ಗಳು), ಜೀವನಶೈಲಿ, ಇತ್ಯಾದಿಗಳ ಬಗ್ಗೆ ಯೋಚಿಸುವುದನ್ನು ನಿಲ್ಲಿಸಬೇಕು. ಏಕೆಂದರೆ, ಇಡೀ ಸಮಾಜವೇ ನಾನು ಕಾಳಜಿ ವಹಿಸುವ ಈ ಎಲ್ಲವನ್ನೂ ಹಾಳುಮಾಡುವ ಜನರಿಂದ ತುಂಬಿರುವಾಗ ನನ್ನ ಪ್ರಯತ್ನ ಮತ್ತು ಕಾಳಜಿ ಕೇವಲ ವ್ಯರ್ಥವಲ್ಲವೇ" ಎಂದು ಅನಿಸಿದೆಯೇ?

ಹೌದು ಎಂದಾದರೆ..,

ಯಾವುದೋ ಕೆಲಸಕ್ಕೆ ಬಾರದ ಕೆಲವು ಜನರಿಗೋಸ್ಕರ ನೀವೇಕೆ ನಿಮ್ಮ ಮಾತೃಭೂಮಿಯ ಮೇಲಿನ ಮಮತೆಯನ್ನು ತ್ಯಜಿಸಬೇಕು?!

ನಿಮ್ಮ ಹೆತ್ತ ತಾಯಿ ನಿಮ್ಮ ಕೆಲವು ಕೆಟ್ಟ ಸಹೋದರ/ಸಹೋದರಿಯರಿಗೆ ಜನ್ಮ ನೀಡಿದರು ಎನ್ನುವ ಕಾರಣಕ್ಕೆ ನೀವು ನಿಮ್ಮ ಹೆತ್ತ ತಾಯಿಯ ಬಗ್ಗೆ ಪ್ರೀತಿ ತೋರುವುದನ್ನು ಅಥವಾ ಕಾಳಜಿ ವಹಿಸುವುದನ್ನು ನಿಲ್ಲಿಸಿಬಿಡುವಿರಾ?!

ನೀವು ನಿಮ್ಮ ಸಹೋದರ/ಸಹೋದರಿಯರನ್ನು ಇಷ್ಟ ಪಡದೇ ಹೋದರು ಸಹ ನಿಮ್ಮ ಹೆತ್ತ ತಾಯಿಯ ಮೇಲಿನ ಕಾಳಜಿ ಕಡಿಮೆಯಾಗುವುದಿಲ್ಲ ಅಲ್ಲವೆ!

ಮತ್ತು ನಿಮ್ಮ ಕೆಟ್ಟ ಸಹೋದರ / ಸಹೋದರಿ ಏನಾದರು ನಿಮ್ಮ ತಾಯಿಗೆ ತೊಂದರೆ ಕೊಟ್ಟರೆ ನೀವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಅಲ್ಲವೇ? ಬದಲಿಗೆ ನೀವು ಆ ರಾಕ್ಷಸರ ಕೈಯಿಂದ ನಿಮ್ಮ ತಾಯಿಯ ರಕ್ಷಣೆಗೆ ಓಡಿಹೋಗುತ್ತೀರಿ...

ಯಾವಾಗಲೂ ನಿಮ್ಮ ತಾಯಿಯೊಂದಿಗೆ ಇದೇ ತರಹ ಜೀವಿಸಿ.
ಎಂದಿಗೂ ನಿಮ್ಮ ತಾಯಿಯ ಮೇಲಿನ ಪ್ರೀತಿ ಕಡಿಮೆಯಾಗದಿರಲಿ.
ಎಂದಿಗೂ ನಿಮ್ಮ ತಾಯಿಯ ಬಗೆಗಿನ ಕಾಳಜಿ ಮುಗಿಯದಿರಲಿ.
ನಿಮ್ಮ ತಾಯಿಯ ಬಗ್ಗೆ ಕಾಳಜಿವಹಿಸುವಂತೆ ನಿಮ್ಮ ಮಕ್ಕಳಿಗೆ ಕಲಿಸುವುದನ್ನು ಎಂದಿಗೂ ನಿಲ್ಲಿಸದಿರಿ.
ನಿಮ್ಮ ತಾಯಿ - ಮಹಾ ಭಾರತ ಮಾತೆ.

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಮತ್ತು, ಯಾವತ್ತೂ ಕುಸಿದುಹೋಗದಿರಿ. ಈ ಸಮಾಜ ನಿಮ್ಮೆಡೆಗೆ ಎಸೆಯುವ ಋಣಾತ್ಮಕ ಘಟನೆಗಳಿಂದ ನಿಮ್ಮ ಹೃದಯ ಎಂದಿಗೂ ಒಡೆದು ಹೋಗದಿರಲಿ.
ಏಕೆಂದರೆ, ಮೇಲ್ನೋಟಕ್ಕೆ ಈ ಸಮಾಜ ಕೇವಲ ಕೆಟ್ಟ ಜನರಿಂದ ತುಂಬಿಹೋಗಿದೆ ಎನ್ನುವಂತೆ ತೋರಿದರೂ ಸಹ, ಇದೇ ಸಮಾಜದಲ್ಲಿ ತಮ್ಮ ತಾಯ್ನಾಡಿಗೋಸ್ಕರ ಮಿಡಿಯುತ್ತಿರುವ ನಿಮ್ಮಂತಹ ಒಳ್ಳೆಯ ಜನರೂ ಜೀವಿಸಿದ್ದಾರೆ.
ಇದು ಕೆಲವ ಒಂದು ಕೆಟ್ಟ ಘಳಿಗೆಯಾಗಿರಬಹುದು. ಸಕಾರಾತ್ಮಕವಾಗಿರಿ ಮತ್ತು ಮುಂದುವರಿಯುತ್ತಲಿರಿ.
ಬಹುಶಃ ಇದೇ ಸಮಾಜದ ಇನ್ನೊಂದು ಮೂಲೆಯಲ್ಲಿ ನಿಮ್ಮಂತಹದೇ ಸ್ಥಿತಿಯಲ್ಲಿ, ನಿಮ್ಮ ಹಾಗೆಯೇ ಯೋಚಿಸುತ್ತಿರುವ, ನಿಮ್ಮಂತಹ ಒಳ್ಳೆಯ ಜನರೂ ಇರಬಹುದು.
ನಿಮ್ಮ ಮಾತೃಭೂಮಿಗೆ ನಿಮ್ಮಂತಹ ಒಳ್ಳೆಯ ಮಕ್ಕಳ ಅವಶ್ಯಕತೆಯಿದೆ. ಕೆಲವು ಪೆದ್ದರಿಗೋಸ್ಕರ ಅಥವಾ ಕೆಲವು ಕೆಟ್ಟ ಘಟನೆ / ಜನರಿಗೋಸ್ಕರ ನಿಮ್ಮ ಮಾತೃಭೂಮಿಯನ್ನು ಪರಿತ್ಯಜಿಸಬೇಡಿ!


ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.