ವ್ಯಾಟಿಕನ್ ದೇಶವು ನಮ್ಮ ಸಮಾಜವನ್ನು, ರಾಷ್ಟ್ರವನ್ನು ಮತ್ತು ನಮ್ಮ ಜನರ ಮನಗಳನ್ನು ಒಡೆಯುತ್ತಿದೆ.
"ಹೇಗೆ" ಎಂಬ ಆಶ್ಚರ್ಯವೇ?
ಅದಕ್ಕೆ ಉತ್ತರ ಅತೀ ಸರಳ ಹಾಗೂ ನೇರ.
"ಏನು ಮಾಡಬೇಕು" ಮತ್ತು "ಏನು ಮಾಡಬಾರದು" ಎಂದು ನಮಗೆಲ್ಲ (ಹಿಂದುಸ್ಥಾನಿ ಕ್ರೈಸ್ತರಿಗೆ/ಕೆಥೊಲಿಕರಿಗೆ) ಯಾರು ಹೇಳುತ್ತಾರೆ?
- ನಮ್ಮ ಗುರುಗಳು.
- ನಮ್ಮ ಗುರುಗಳು.
"ಏನು ಮಾಡಬೇಕು" ಮತ್ತು "ಏನು ಮಾಡಬಾರದು" ಎಂದು ನಮ್ಮ ಗುರುಗಳಿಗೆ ಯಾರು ಹೇಳುತ್ತಾರೆ?
- ನಮ್ಮ ಬಿಶೋಪರುಗಳು.
- ನಮ್ಮ ಬಿಶೋಪರುಗಳು.
"ಏನು ಮಾಡಬೇಕು" ಮತ್ತು "ಏನು ಮಾಡಬಾರದು" ಎಂದು ನಮ್ಮ ಬಿಶೋಪರುಗಳಿಗೆ ಯಾರು ಹೇಳುತ್ತಾರೆ?
- ನಮ್ಮ ಆರ್ಚ್ ಬಿಶೋಪರುಗಳು.
- ನಮ್ಮ ಆರ್ಚ್ ಬಿಶೋಪರುಗಳು.
"ಏನು ಮಾಡಬೇಕು" ಮತ್ತು "ಏನು ಮಾಡಬಾರದು" ಎಂದು ನಮ್ಮ ಆರ್ಚ್ ಬಿಶೋಪರುಗಳಿಗೆ ಯಾರು ಹೇಳುತ್ತಾರೆ?
- ನಮ್ಮ ಕಾರ್ಡಿನಲ್ಗಳು.
- ನಮ್ಮ ಕಾರ್ಡಿನಲ್ಗಳು.
"ಏನು ಮಾಡಬೇಕು" ಮತ್ತು "ಏನು ಮಾಡಬಾರದು" ಎಂದು ನಮ್ಮ ಕಾರ್ಡಿನಲ್ಗಳಿಗೆ ಯಾರು ಹೇಳುತ್ತಾರೆ?
- ಪರದೇಶಿ ಅರಸ (ಸಾಮಾನ್ಯವಾಗಿ ಈ ವಿದೇಶಿ ಅರಸನನ್ನು ಪೋಪ್ ಎಂದು ಕರೆಯುತ್ತಾರೆ).
- ಪರದೇಶಿ ಅರಸ (ಸಾಮಾನ್ಯವಾಗಿ ಈ ವಿದೇಶಿ ಅರಸನನ್ನು ಪೋಪ್ ಎಂದು ಕರೆಯುತ್ತಾರೆ).
ಇಲ್ಲಿರುವ ನಿಯಂತ್ರಣದ ರಚನೆಯು ನಿಮಗೆ ಅರ್ಥವಾಗುತ್ತಿದೆ ಎಂದು ಭಾವಿಸುವೆ. ಈ ನಿಯಂತ್ರಣ ರಚನೆಯ ಮೂಲಕ ವ್ಯಾಟಿಕನ್ನಿನ ಅರಸ ತನಗೇನು ಬೇಕೋ ಅದನ್ನು ಪ್ರಚಾರ ಮಾಡುತ್ತಾನೆ. ಮತ್ತು, ನಿಯಂತ್ರಣ ರಚನೆಯ ಮೂಲಕವೇ ನಾವು (ಹಿಂದುಸ್ಥಾನಿ ಕ್ರೈಸ್ತರು) ಈಗಾಗಲೆ ಪರದೇಶಿ ಅರಸನಿಗೆ ಗುಲಾಮರಾಗಿದ್ದೇವೆ.
ನಮ್ಮ ಧಾರ್ಮಿಕ ಮುಖಂಡರು ಯಾವುದೋ ಪರದೇಶದ ಅರಸನಿಗೆ ವರದಿ ಒಪ್ಪಿಸುವುದನ್ನು ನಾವು ಹೇಗೆ ತಾನೇ ಸಹಿಸಲು ಸಾಧ್ಯ?
ದುರದೃಷ್ಟಕರ ಸಂಗತಿ ಎಂದರೆ, ಭಾರತೀಯ ಕ್ರೈಸ್ತ(ಕಥೊಲಿಕ)ರಾದ ನಾವು ಕೇವಲ ನಮ್ಮ ರಾಷ್ಟ್ರಕ್ಕೆ ವಿಧೇಯರಾಗಿದ್ದರೆ ಸಾಕು. ಆದರೆ, ನಮಗೇ ಅರಿವಾಗದಂತೆ, ಈ ಪರದೇಶಿ ಅರಸ ಹೇಳಿದ ತಾಳಕ್ಕೆ ಕುಣಿಯುವಂತೆ ನಮ್ಮನ್ನು ಸಿಕ್ಕುಬೀಳಿಸಲಾಗಿದೆ! ಮತ್ತು, ಒಮ್ಮೆ ನಮ್ಮ ಮೇಲೆ ಹಿಡಿತ ಸಿಕ್ಕಿತೆಂದರೆ ಮುಗಿಯಿತು, ನಾವು ನಮ್ಮ ರಾಷ್ಟ್ರದ ದಾರಿಯನ್ನೇ ಬಿಟ್ಟು ಬೇರೆ ದಾರಿಯೆಡೆಗೆ ಸಾಗುವಂತೆ ಈ ಪರದೇಶಿ ಅರಸ ಮಾಡುತ್ತಾನೆ.
ಅಂತಿಮವಾಗಿ, ಅದರಿಂದ ಉದ್ಭವಿಸಿತಲ್ಲ ನಮ್ಮ ಸಮಾಜದ ಬಿರುಕು!