ಮೂಢನಂಬಿಕೆಗಳು - ಹಳತು ಹೊನ್ನು

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಅರಿತೋ/ಅರಿಯದೆಯೋ, ನಮ್ಮ ಭಾರತೀಯ ಸಮಾಜ ಇಲ್ಲಿ ಪಟ್ಟಿಮಾಡಿರುವ ಮೂಢನಂಬಿಕೆಗಳನ್ನು ಹೊಂದಿದೆ. ವಿದೇಶಗಳ ಮೂಢನಂಬಿಕೆಗಳನ್ನು ಚಿತ್ರಗಳ ಮೂಲಕ ವೀಕ್ಷಿಸಿ.

ವಿಶೇಷ ಸೂಚನೆ: ಇಲ್ಲಿರುವ ಪಟ್ಟಿಯನ್ನು ವಿವಿಧ ಭೌತಿಕ ಪ್ರದೇಶ, ಭಾಷೆ, ಜಾತಿ, ಸಂಸ್ಕೃತಿ, ಇತ್ಯಾದಿ ಹಿನ್ನೆಲೆಯುಳ್ಳ ವ್ಯಕ್ತಿಗಳಿಂದ ಆಯ್ದ ಅಂಶಗಳನ್ನು ಬಳಸಿ ನಿರ್ಮಿಸಲಾಗಿದೆ. ಇಲ್ಲಿರುವ ಅಂಶಗಳು ಯಾವುದೇ ವ್ಯಕ್ತಿಯ ಭಾವನೆಗಳಿಗೆ ಧಕ್ಕೆತರುವ ಉದ್ದೇಶದಿಂದ ಪಟ್ಟಿಮಾಡಲಾಗಿರುವುದಿಲ್ಲ. ಹೇಗೂ, ಒಂದುವೇಳೆ ಇಲ್ಲಿ ಲಭ್ಯವಿರುವ ಯಾವುದಾದರು ಮೂಢನಂಬಿಕೆ(ಗಳು) ನಿಮ್ಮಲ್ಲಿ ಇವೆಯೆಂದು ಎನಿಸಿದರೆ, ದಯವಿಟ್ಟು ದಿನೇ-ದಿನೇ ಮುಕ್ತವಾಗಿ ಯೋಚಿಸುವ ಮೂಲಕ ಅದರಿಂದ/ಅವುಗಳಿಂದ ಹೊರಬನ್ನಿ ಎಂದು ನಾವು ಶಿಫಾರಸು ಮಾಡುತ್ತೇವೆ.

ನೆನಪಿರಲಿ, ಒಂದು ಹಂತದಲ್ಲಿ "ಭೂಮಿ ವೃತ್ತಾಕಾರವಾಗಿದೆ" ಎಂದು ಹೇಳಿದವರನ್ನು ಐರೋಪ್ಯರು ವಿರೋಧಿಸಿದ್ದರು. (ಅಂದಹಾಗೆ, ಐರೋಪ್ಯರು ಭೂಮಿ ಸಮತಟ್ಟಾಗಿದೆ ಮತ್ತು ಅವರು ನಿಮ್ಮನ್ನು ಭೂಮಿಯ ಒಂದು ಅಂಚಿನಿಂದ ಕೆಳಗೆ ತಳ್ಳಿದರೆ ನೀವು ಹೋಗಿ ನರಕಕ್ಕೆ ಬೀಳುತ್ತೀರಿ ಎಂಬ ಮೂಢನಂಬಿಕೆಯನ್ನು ಹೊಂದಿದ್ದರು. ಇದನ್ನು ಕ್ರೈಸ್ತರ ಬೈಬಲ್ಲಿನ ಕೆಲ ಆವೃತ್ತಿಗಳಲ್ಲಿಯೂ ಕಾಣಬಹುದು)!

೧. ಜೀವನ ನಡೆಸಲು ಆಂಗ್ಲ ಬೇಕೇ-ಬೇಕು.

೨. ಆಂಗ್ಲ ಕಲಿಯುವುದು ಮರ್ಯಾದೆಯ ವಿಷಯ.

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೩. ಈಗ ಆಂಗ್ಲ ಅರಿಯದವರು ಯಾರಾದ್ರು ಇರೋಕೆ ಸಾಧ್ಯವೇ ಇಲ್ಲ.

೪. ಹಿಂದಿ ನಮ್ಮ ರಾಷ್ಟ್ರಭಾಷೆ.

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೫. ಹಿಂದಿಗಿಂತಲೂ ಆಂಗ್ಲ ಶ್ರೇಷ್ಠ.

೬. ವಿದೇಶಕ್ಕೆ ಹೋಗಿ ನೆಲೆಸಿದರೆ, ನಮ್ಮ ಸಂಸ್ಕೃತಿ, ಭಾಷೆ, ಉಡುಗೆ-ತೊಡುಗೆಶೈಲಿಯೇ ಮರೆತುಹೋಗುತ್ತದೆ.

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೭. ಕನ್ನಡಚಲನಚಿತ್ರಗಳೆಲ್ಲಾ ನಿರುಪಯುಕ್ತ.

೮. ಕರ್ನಾಟಕ ಅಥವಾ ಭಾರತದಲ್ಲಿ ಹೇಳಿಕೊಳ್ಳುವಂತಹ ಹೊಸದೇನೂ ಇಲ್ಲ [ಉಲ್ಲೇಖ].

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೯. ಭಾರತಕ್ಕೆ ಒಂದೇ ಭಾಷೆ ಸಾಕು.

೧೦. ವಿದೇಶಗಳಿಂದ ಆಮದಾಗಿರುವ ಜಾತಿಗಳನ್ನು ಪಾಲಿಸುವುದು ಎಂದರೆ ನಾವು ನಮ್ಮ ದೇಶದ ವಿರುದ್ಧ ತಿರುಗಿಬೀಳುವುದು ಎಂದರ್ಥ.

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೧೧. ನಾನೊಬ್ಬ ಕ್ರೈಸ್ತನಾ(ಳಾ)ದುದರಿಂದ ನಾನು ಪಾಶ್ಚಿಮಾತ್ಯರಂತೆ ಜೀವನ ನಡೆಸಬೇಕು, ಮತ್ತು ನನ್ನ ಹೆಸರು ಆಂಗ್ಲದ ಮೂಲದಿಂದ ಬಂದಿರಬೇಕು.

೧೨. ನಾನೊಬ್ಬ ಮುಸ್ಲೀಮನಾ(ಳಾ)ದುದರಿಂದ ನಾನು ಅರಬ್ಬರಂತೆ ಜೀವನ ನಡೆಸಬೇಕು, ಮತ್ತು ನನ್ನ ಹೆಸರು ಅರೇಬಿಕ್ ಭಾಷೆಯ ಮೂಲದಿಂದ ಬಂದಿರಬೇಕು.

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೧೩. ದಕ್ಷಿಣ ಭಾರತದ ಜನ ದ್ರಾವಿಡರು ಮತ್ತು ಉತ್ತರ ಭಾರತದ ಜನ ಹೊರಗಿನಿಂದ ಬಂದ ಆರ್ಯ ಜನಾಂಗದವರು.

೧೪. ನಾನೊಬ್ಬ ಕ್ರೈಸ್ತ, ಹಾಗಾಗಿ ವ್ಯಾಟಿಕನ್ ದೇಶವನ್ನು ನಾನು ಮೊದಲು ಗೌರವಿಸಬೇಕು.

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೧೫. ನಾನೊಬ್ಬ ಮುಸ್ಲಿಂ, ಹಾಗಾಗಿ ನಾನು ಸೌದಿ, ಇರಾನ್ ಗಳನ್ನು ಮೊದಲು ಗೌರವಿಸಬೇಕು.

೧೬. ಪ್ರಪಂಚದಲ್ಲಿ ದೊಡ್ಡ-ದೊಡ್ಡ ಸಾಧನೆಗಳು ಆಗಿದ್ದೆಲ್ಲಾ ವಿದೇಶಗಳಲ್ಲಿ.

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೧೭. ಗೌರವಯುತ ಬದುಕು ನಡೆಸಲು ಅಭಿಯಂತರ(ಇಂಜಿನೀಯರ್) ಅಥವಾ ವೈದ್ಯಕೀಯ(ಮೆಡಿಕಲ್) ಶಿಕ್ಷಣ ಓದಲೇ ಬೇಕು.

೧೮. ವ್ಯವಸಾಯ ಮಾಡುವುದು ಎಂದರೆ ನರಕಯಾತನೆ ಅನುಭವಿಸುವುದು ಎಂದರ್ಥ.

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೧೯. ಕೇವಲ ರೈತರಷ್ಟೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

೨೦. ಪೋಪ್ (ಅಥವಾ ಸೌದಿಯ ಧಾರ್ಮಿಕ ಮುಖಂಡರು) ದೇವರ ಸಮಾನ/ಪ್ರತಿರೂಪ.

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೨೧. ಭಾರತ ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಅಸುರಕ್ಷಿತ [ಉಲ್ಲೇಖ].

೨೨. ಕಚೇರಿಯಲ್ಲಿ/ಆಫೀಸಿನಲ್ಲಿ ಕನ್ನಡದಲ್ಲಿ ಮಾತನಾಡಬಾರದು ಏಕೆಂದರೆ ಅಲ್ಲಿ ಬಹುಭಾಷೆಯ ಜನರಿರುತ್ತಾರೆ.

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೨೩. ಸ್ಪೇನಿನ ಜನ ತಮ್ಮ ಭಾಷೆಯ ಒಂದೆರಡು ಸಾಲುಗಳನ್ನು/ಪದಗಳನ್ನು ಆಂಗ್ಲದಲ್ಲಿ ಬೆರೆಸಿ ಬಳಸಿದರೆ ಪರವಾಗಿಲ್ಲ. ಹಿಂದಿಯ ಜನ ತಮ್ಮ ಭಾಷೆಯ ಒಂದೆರಡು ಸಾಲುಗಳನ್ನು/ಪದಗಳನ್ನು ಆಂಗ್ಲದಲ್ಲಿ ಬೆರೆಸಿ ಬಳಸಿದರೆ ಪರವಾಗಿಲ್ಲ. ಆದರೆ ಕನ್ನಡಿಗರು ಆಂಗ್ಲದಲ್ಲಿ ಕನ್ನಡದ ಒಂದೆರಡು ಪದ/ವಾಕ್ಯಗಳನ್ನು ಬೆರೆಸಿ ಬಳಸಿದರೆ ಆಕಾಶವೇ ಕಳಚಿ ಬೀಳುವುದು.

೨೪. ನಾನು ಕ್ರೈಸ್ತ/ಮುಸ್ಲೀಮನಾದುದರಿಂದ ಕಾಂಗ್ರೆಸ್ ಎಂಬ ರಾಜಕೀಯ ಪಕ್ಷಕ್ಕೆ ಮತ ನೀಡಬೇಕು.

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೨೫. ಇಡೀ ಜಗತ್ತೇ ಆಂಗ್ಲಮಯವಾಗಿದೆ ಅಥವಾ ಇಡೀ ಪ್ರಪಂಚದಲ್ಲಿ ಎಲ್ಲರೂ ಆಂಗ್ಲವನ್ನು ಬಳಸುತ್ತಾರೆ. ಹಾಗಾಗಿ ನನ್ನ ಮಾತೃಭಾಷೆಗಿಂತಲೂ ಆಂಗ್ಲ ಅತೀ ಮುಖ್ಯ.

೨೬. ಜಾತಿಯಾಧಾರಿತ ಮೀಸಲಾತಿ ಇಲ್ಲದೇ ಹೋಗಿದ್ದರೆ ಇಂದು ಅಲ್ಪಸಂಖ್ಯಾತರ, ಎಸ್.ಸಿ, ಎಸ್.ಟಿ, ಇತರೆ ಜಾತಿಗಳು ಅಳಿದುಹೋಗಿರುತ್ತಿದ್ದವು.

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೨೭. ಪಾಶ್ಚಿಮಾತ್ಯ ದೇಶಗಳು ಹೇಳುವುದು/ಮಾಡುವುದೆಲ್ಲವೂ ಸತ್ಯ ಮತ್ತು ಶ್ರೇಷ್ಠ - ಅವರಿಂದ ತಪ್ಪೇ ಆಗುವುದಿಲ್ಲ ಏಕೆಂದರೆ ಅವರು ತುಂಬಾ ಮುಂದುವರಿದ ಸಮಾಜದವರು.

೨೮. ವಿದೇಶದಲ್ಲಿ ಏನೇ ವಿದ್ಯೆಯನ್ನು ಕಲಿತರೂ ಅದು ಶ್ರೇಷ್ಠ ಏಕೆಂದರೆ ನಮ್ಮ ದೇಶದಲ್ಲಿ ಶಿಕ್ಷಣದ ಗುಣಮಟ್ಟ ಯಾವ ಕ್ಷೇತ್ರದಲ್ಲೂ ಸರಿಯಾಗಿಲ್ಲ.

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೨೯. ಒಬ್ಬ ವ್ಯಕ್ತಿ ಭಾರತದಲ್ಲಿಯೇ ಇದ್ದುಕೊಂಡು ಕಲೆ(ಆರ್ಟ್ಸ್) ವಿಭಾಗದಲ್ಲಿ ಶಿಕ್ಷಣ ಪಡೆದರೆ ಅದು ಕೇವಲ ವ್ಯರ್ಥ. ಅದೇ ವ್ಯಕ್ತಿ ವಿದೇಶಕ್ಕೆ ಹೋಗಿ ಅದೇ ಕಲೆ(ಆರ್ಟ್ಸ್) ವಿಭಾಗದಲ್ಲಿ ಕೇವಲ ಒಂದು ಸರ್ಟಿಫಿಕೇಟ್ ಕೋರ್ಸನ್ನು ಮಾಡಿದರೆ ಅವನ ಜೀವನವೇ ಸಾರ್ಥಕ.

೩೦. ಬೆಂಗಳೂರು, ದೇಹಲಿಯಂತಹ ಮಹಾನಗರಗಳಲ್ಲಿರುವ ಪ್ರತಿಷ್ಠಿತ ಸಂಸ್ಥೆಯಲ್ಲಿ ಕಲಿತಿರುವವರಷ್ಟೇ ಒಳ್ಳೆಯ ವಿದ್ಯೆಯನ್ನು ಹೊಂದಿರುತ್ತಾರೆ. ಯಾವುದೋ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕಲಿತಿರುವ ವಿದ್ಯಾರ್ಥಿಗಳಿಗೆ ಏನೂ ಗೊತ್ತಿರುವುದಿಲ್ಲ.
(ನಾನು ಕೆಲಸಮಾಡುತ್ತಿದ್ದ ಕಂಪನಿಯೊಂದರಲ್ಲಿ ಆಗಷ್ಟೇ ಸಂದರ್ಶನ ತೆಗೆದುಕೊಂಡು ಬರುತ್ತಿದ್ದ ಮಾ.ಸ (ಎಚ್.ಆರ್) ಸಿಬ್ಬಂದಿಗಳು ಹೀಗೆ ಚರ್ಚಿಸುತ್ತಿರುವುದನ್ನು ಕಿವಿಯಾರೆ ಕೇಳಿದಾಗ ಅನಿಸಿತು - ಹಾಗಾದರೆ "ಹಳ್ಳಿಯ ಪ್ರತಿಭೆಗಳು" ಎನ್ನುವ ಮಾತನ್ನು ಈ ಕಲಿತಿರುವ ವ್ಯಕ್ತಿಗಳು ಕೇಳಿಯೇ ಇಲ್ಲವೆ ಅಥವಾ ಆ ಮಾತಿನ ಅರ್ಥವೇ ಇವರಿಗೆ ತಿಳಿದಿಲ್ಲವೆ ಅಥವಾ ಇವರ ಪ್ರಕಾರ ಭಾರತ ದೇಶ ಬೆಂಗಳೂರು, ದೇಹಲಿಯಂತಹ ಮಹಾನಗರಗಳಿಂದ ತುಂಬಿದ ದೇಶವೇ ಅಥವಾ ಭಾರತದಲ್ಲಿ ಹೊರಹೊಮ್ಮಿದ ಅದ್ಭುತ ಪ್ರತಿಭೆಗಳೆಲ್ಲವು ಕೇವಲ ಬೆಂಗಳೂರುದೇಹಲಿಯಂತಹ ಮಹಾನಗರಗಳಿಂದ ಬಂದಿವೆಯೇ?!)

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೩೧. ನಾನು ಕೆಲಸಕ್ಕೆ ಸಂದರ್ಶನ ತೆಗೆದುಕೊಳ್ಳುವಾಗ ವಿದೇಶಗಳಲ್ಲಿ ಓದಿ ಬಂದ ಅಭ್ಯರ್ಥಿಗಳಿಗೇ ಮೊದಲ ಆದ್ಯತೆ ನೀಡಬೇಕು. ಏಕೆಂದರೆ ವಿದೇಶದಲ್ಲಿ ಓದಿ ಬರುವುದೆಂದರೆ ದೊಡ್ಡ ಸಾಧನೆ. ಭಾರತದಲ್ಲಿ ಓದಿದ ಅಭ್ಯರ್ಥಿಗಳಿಗಿಂತ ವಿದೇಶಗಳಲ್ಲಿ ಓದಿ ಬಂದವರೇ ಶ್ರೇಷ್ಠ.

೩೨. ನಮ್ಮ ಮಗಳನ್ನು ಮದುವೆಮಾಡಿಕೊಳ್ಳುವ ಹುಡುಗ ಅಭಿಯಂತರ (ಇಂಜಿನಿಯರ್) ಅಥವಾ ವೈದ್ಯ ಅಥವಾ ಸರ್ಕಾರಿ ನೌಕರನಾಗಿದ್ದರೆ ಮಾತ್ರ ನಮ್ಮ ಮಗಳು ಸಂತೋಷದಿಂದ ಬಾಳುತ್ತಾಳೆ, ಇಲ್ಲದಿದ್ದರೆ ಮಗಳು ಮದುವೆಯಾಗಿ ಹೋದಮೇಲೆ ಸಂತೋಷದಿಂದ ಬಾಳುವುದಿಲ್ಲ.

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೩೩. ಬ್ರಿಟೀಷರಿಗೆ ಭಾರತವನ್ನು ಕ್ರೈಸ್ತ ದೇಶವಾಗಿ ಮತಾಂತರ ಮಾಡುವ ಉದ್ದೇಶವಿರಲಿಲ್ಲ, ಹಾಗಾಗಿ ಹಿಂದೂಗಳು ಇನ್ನೂ ಬಹುಸಂಖ್ಯಾತರಾಗಿದ್ದಾರೆ :-D

೩೪. ಭಾರತೀಯ ರೈಲ್ವೆ, ರಸ್ತೆ, ಇತ್ಯಾದಿಯೆಲ್ಲಾ ಬ್ರಿಟೀಷರು ಭಾರತಕ್ಕೆ ನೀಡಿದ ಕೊಡುಗೆಗಳು :-D

೩೫. ಮುಂದುವರಿದವೆಂದು ಕರೆಸಿಕೊಳ್ಳುವ ದೇಶಗಳಲ್ಲಿ ಯಾವುದೇ ಮೂಢನಂಬಿಕೆಗಳು ಇರುವುದಿಲ್ಲ, ಅವೇನಿದ್ದರೂ ನಮ್ಮ ಭಾರತದಂತಹ ದೇಶಗಳಲ್ಲಷ್ಟೆ :-D

೩೬. ಮೂಢನಂಬಿಕೆಗಳು ಯಾವುದೋ ಒಂದು ಜಾತಿ/ಮತದಲ್ಲಿ ಮಾತ್ರ ಇರುತ್ತವೆ.