ಚರ್ಚಿನಲ್ಲಿ ಅತ್ಯಾಚಾರಿ ಸಂಸ್ಕೃತಿ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

#ಬಲಾತ್ಕಾರಿಬಿಶೋಪ್
ಕ್ರೈಸ್ತನಾಗಿರುವುದಕ್ಕೆ ಅಸಹ್ಯವೆನಿಸುತ್ತಿದೆ!
"ವ್ಯಾಟಿಕನ್ ನಮ್ಮ ದೇಶವನ್ನು ಒಡೆದುಹಾಕುತ್ತಿದೆ" ಎಂದು ಹೇಳಲು ಈ ಘಟನೆ ಇತ್ತೀಚಿನ ಸಾಕ್ಷಿಯಾಗಿದೆ.
ಭಾರತದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ಈ ವ್ಯಾಟಿಕನ್ ಯಾರು?!
ಪಾದ್ರಿಯೊಬ್ಬನ ಈ ಹೇಯಕೃತ್ಯವನ್ನು ಎಷ್ಟುಜನ ಕ್ರೈಸ್ತರು ಮುಕ್ತಕಂಠದಿಂದ ಖಂಡಿಸಿದರು?
ಬಾಲಿವುಡ್ ನ ಎಷ್ಟು ಜನರು ಈ ಅಮಾಯಕ ಕನ್ಯಾಸ್ತ್ರೀಗೋಸ್ಕರ ತಮ್ಮ ಡಿಪಿಗಳನ್ನು ಬದಲಿಸಿದರು?
ಎಷ್ಟು ಜನ ಬೀದಿಗಿಳಿದು ಮೊಂಬತ್ತಿಯ ಮೆರವಣಿಗೆ ಮಾಡಿದರು?
ಸ್ವಯಂ ಘೋಷಿತ ಮೇಧಾವಿಗಳು, ಉದಾರವಾದಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಎಲ್ಲಾ ಎಲ್ಲಿ ನಾಪತ್ತೆಯಾಗಿದ್ದಾರೆ?!
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆ (ವಿಮಾಸ) ಈಗ ಎಲ್ಲಿದೆ?ಕೇವಲ ಪಾಪಕೃತ್ಯಗಳು, ಅಪರಾಧಗಳು, ಕಟ್ಟುಕತೆಗಳು ಮತ್ತು ಸುಳ್ಳು ಹಕ್ಕುಗಳಿಂದ ತುಂಬಿರುವ ಜಾತಿ - ಕ್ರೈಸ್ತ ಜಾತಿಗೆ ಸೇರಿರುವುದಕ್ಕೆ ಅಸಹ್ಯವೆನಿಸುತ್ತಿದೆ. ಓಹ್, ಅದನ್ನೆಲ್ಲ ಯೇಸುವಿನ ಹೆಸರಿನಲ್ಲಿ ಮಾಡುತ್ತಾರೆ ಅಷ್ಟೆ.

ಒಂದುವೇಳೆ ನಿಮಗೆ ಇತ್ತೀಚೆಗೆ ಸುದ್ದಿಯಾದ "ಕೇರಳ ಕ್ರೈಸ್ತ ಪಾದ್ರಿಯಿಂದ ಕ್ರೈಸ್ತ ಕನ್ಯಾಸ್ತ್ರೀಯ ಮೇಲಿನ ಅತ್ಯಾಚಾರ"ದ ಘಟನೆಯ ಬಗ್ಗೆ ಅರಿವಿಲ್ಲದಿದ್ದರೆ ಮೇಲಿನ ದೃಶ್ಯವನ್ನು ನೋಡಿ.

ಕ್ರೈಸ್ತ ಜಾತಿಯನ್ನು ಹುಟ್ಟುಹಾಕುವ ಆರಂಭದ ದಿನಗಳಲ್ಲಿ ಅಮಾಯಕ ಜೀವಗಳ ಜೊತೆ ಆಟವಾಡುತ್ತಿದ್ದ ಅವತ್ತಿನ ರೋಮನ್ ಅರಸರಿಂದ ಹಿಡಿದು ಇಂದಿನವರೆಗೂ ಚರ್ಚಿನೊಂದಿಗೆ ಬಲಾತ್ಕಾರಿ ಸಂಸ್ಕೃತಿ ಬೆಸೆದುಕೊಂಡಿರುವುದು ಆಶ್ಚರ್ಯ ಪಡುವಂತಹ ಸಂಗತಿಯೇನಲ್ಲ.

ಕ್ರೈಸ್ತರ ಚರ್ಚ್ ಈ ಬಲಾತ್ಕಾರಿ ಸಂಸ್ಕೃತಿ ಮತ್ತು ಮಕ್ಕಳಮೇಲಿನ ಲೈಂಗಿಕ ದೌರ್ಜನ್ಯದ ದಾಖಲೆಯನ್ನು ಕೇವಲ ಭಾರತದಲ್ಲಿ ಅಷ್ಟೇ ಹೊಂದಿದೆ ಎಂದು ತಪ್ಪಾಗಿ ತಿಳಿದುಕೊಳ್ಳಬೇಡಿ. ಚರ್ಚ್ ಈ ಬಲಾತ್ಕಾರಿ ಸಂಸ್ಕೃತಿ ಮತ್ತು ಮಕ್ಕಳಮೇಲಿನ ಲೈಂಗಿಕ ದೌರ್ಜನ್ಯದಿಂದ ಇಡೀ ಪ್ರಪಂಚದಲ್ಲೇ ಸಾಕಷ್ಟು ದಂಡನೆಗಳನ್ನು ಅನುಭವಿಸಿದೆ.

ಭಾರತದಲ್ಲಿಯಾದರೆ ನಾವು ಹೇಗೋ ಇದನ್ನು ಹಿಂದೂಗಳು ಅಲ್ಪಸಂಖ್ಯಾತರ ಮೇಲೆ ಮಾಡುತ್ತಿರುವ ಸುಳ್ಳು ಆರೋಪ ಎಂದು ಬೊಬ್ಬೆಹೊಡೆದು ಮುಚ್ಚಿಹಾಕಿಸಬಹುದು, ಆದರೆ ಬೇರೆ ದೇಶಗಳಲ್ಲಿ ಜನ ಭಾರತೀಯರಂತೆ ಮೂರ್ಖರಿಲ್ಲ. ಅಲ್ಲಿ ಎಲ್ಲವನ್ನೂ/ಎಲ್ಲರ ತಪ್ಪುಗಳನ್ನೂ ಬೈಲಿಗೆ ತಂದು ಛೀಮಾರಿ ಹಾಕುತ್ತಾರೆ ಮತ್ತು ಮಾಡಿದ ತಪ್ಪಿಗೆ ಶಿಕ್ಷೆಯಾಗುವಂತೆ ತಮ್ಮ-ತಮ್ಮ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಾರೆ. ಅಲ್ಲಿಯ ಜನರಿಗೆ ಜಾತಿ ಮುಖ್ಯವಲ್ಲ ಹಾಗಾಗಿ ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗುವ ನಿರೀಕ್ಷೆ ಇರುತ್ತದೆ. ಅದೇ ನಮ್ಮಲ್ಲಿ ಆದರೆ, ಬಹುಸಂಖ್ಯಾತರು ಮಾಡುವ ತಪ್ಪಿನ ಕುರಿತು ಮಾತನಾಡುವ ಅಲ್ಪಸಂಖ್ಯಾತರು ತಮ್ಮ ತಪ್ಪುಗಳು ಹೊರಗೆಬಂದಾಗ ಅದನ್ನು "ಅಲ್ಪಸಂಖ್ಯಾತರ ಮೇಲಿನ ಸುಳ್ಳು ಆರೋಪ, ಮಾನವಹಕ್ಕು, ಇತ್ಯಾದಿ ಎಂದೆಲ್ಲಾ" ಗೋಗರೆಯಲು ಆರಂಭಿಸುತ್ತಾರೆ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಪರಿಸ್ಥಿತಿ ಹೀಗಿರುವಾಗ ಭಾರತದಲ್ಲಿರುವ ಯಾವುದೇ ಸರ್ಕಾರ ಅಲ್ಪಸಂಖ್ಯಾತರಿಂದ ಆಗುವ ತಪ್ಪುಗಳಿಗೆ ಶಿಕ್ಷೆ ವಿಧಿಸಲು ಮುಂದಾದರೆ, ಅದನ್ನು ಆಕಾಶವೇ ಕಳಚಿಬಿದ್ದಿದೆಯೇನೋ ಎನ್ನುವಂತೆ ನಾಟಕಮಾಡಿ ಮುಚ್ಚಿಹಾಕಲು ಎಡಪಂಥೀಯ ತೀವ್ರವಾದಿಗಳು ಹರಸಾಹಸ ಮಾಡುತ್ತಾರೆ. ಕ್ರೈಸ್ತರ ಚರ್ಚ್ಬಲಾತ್ಕಾರಿ ಸಂಸ್ಕೃತಿ ಮತ್ತು ಮಕ್ಕಳಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ವಿಶ್ವದೆಲ್ಲೆಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಉದಾ: ಅಮೆರಿಕ ಸಂಯುಕ್ತ ಸಂಸ್ಥಾನ [ಉಲ್ಲೇಖ], ಸಂಯುಕ್ತ ಸಾಮ್ರಾಜ್ಯ [ಉಲ್ಲೇಖ], ಐರೋಪ್ಯ ಒಕ್ಕೂಟ [ಉಲ್ಲೇಖ], ದಕ್ಷಿಣ ಅಮೆರಿಕಾ ಖಂಡ [ಉಲ್ಲೇಖ], ಆಸ್ಟ್ರೇಲಿಯಾ [ಉಲ್ಲೇಖ], ಏಶಿಯಾ [ಉಲ್ಲೇಖ], ಆಫ್ರಿಕಾ [ಉಲ್ಲೇಖ], ಇತ್ಯಾದಿ.

ವ್ಯಾಟಿಕನ್ ಹೇಗೆ ಅತ್ಯಾಚಾರ ಹಾಗೂ ಮಕ್ಕಳಮೇಲಿನ ಲೈಂಗಿಕ ದೌರ್ಜನ್ಯದ ಈ ಎಲ್ಲಾ ಪ್ರಕರಣಗಳನ್ನು ಮುಚ್ಚಿಹಾಕಿಸುತ್ತದೆ ಎನ್ನುವುದು ನಿಮಗೆ ಈಗಾಗಲೇ ತಿಳಿದಿರಬಹುದು. ವ್ಯಾಟಿಕನ್ ತನ್ನ ಖರ್ಚುಗಳಲ್ಲಿ ಈ ಎರಡು ವಿಧದ ಕೆಲಸಗಳಿಗೆ ಹೆಚ್ಚಿನ ಖರ್ಚು ಮಾಡುತ್ತದೆಯೆಂದು ಹೇಳಲಾಗುತ್ತದೆ:

೧. ಮತಾಂತರಕ್ಕೆ ತಗುಲುವ ವೆಚ್ಚ
೨. ತನ್ನ ತಪ್ಪು/ಪಾಪ/ಅಪರಾಧಗಳನ್ನು ಮುಚ್ಚಿಹಾಕಲು ಆಗುವ ವೆಚ್ಚ

ಕ್ರೈಸ್ತರ ಮತಾಂತರದ ಕ್ರೂರ ಕೃತ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವ್ಯಾಟಿಕನ್ನಿನ ಪಾಪ/ಅಪರಾಧಗಳನ್ನು ಮುಚ್ಚಿಹಾಕುವುದು:


ಒಂದುವೇಳೆ ನೀವು ನಿಮ್ಮ ಸ್ವಂತ ತನಿಖೆಯನ್ನು ನಡೆಸಿ ವ್ಯಾಟಿಕನ್ನಿನ ಅತ್ಯಾಚಾರ ಹಾಗು ಮಕ್ಕಳಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಎಣಿಕೆ ಮಾಡಿದರೆ ನಿಮಗೆ "ಕ್ರೈಸ್ತ ಜಾತಿಯ ಆರಂಭದಿಂದಲೇ ಈ ಬಲಾತ್ಕಾರ ಮತ್ತು ಮಕ್ಕಳಮೇಲಿನ ಲೈಂಗಿಕ ದೌರ್ಜನ್ಯದ ಸಂಸ್ಕೃತಿ ಚರ್ಚಿನ ಬೇರ್ಪಡಿಸಲಾಗ ಅವಿಭಾಜ್ಯ ಅಂಗವಾಗಿದೆ" ಎನ್ನುವುದನ್ನು ಅರಿತು ದಂಗಾಗುವಿರಿ. ಚರ್ಚಿನ ಸದಸ್ಯರು ಬಹಿರಂಗವಾಗಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರದ ರಾಕ್ಷಸ ಕೃತ್ಯವನ್ನೆಸಗಿದ ಘಟನೆಯಾದ ಜಾತಿಯುದ್ಧ(ಕ್ರುಸೇಡ್)ಗಳಿಗಿಂತಲೂ ಮೊದಲಿನಿಂದಲೇ ಈ ಬಲಾತ್ಕಾರ ಮತ್ತು ಮಕ್ಕಳಮೇಲಿನ ಲೈಂಗಿಕ ದೌರ್ಜನ್ಯದ ಸಂಸ್ಕೃತಿ ಚರ್ಚಿನಲ್ಲಿದೆ.

ಮತಾಂತರವಾಗಲು ಒಪ್ಪಲಿಲ್ಲ ಅಥವಾ ಮತಾಂತರ ಮಾಡಿದಮೇಲೆ ಮತ್ತೇ ಮರಳಿ ತಮ್ಮ-ತಮ್ಮ ಮೂಲ ಧರ್ಮಗಳಿಗೆ ಮರಳುತ್ತಿದ್ದರು ಎನ್ನುವ ಕಾರಣಕ್ಕೆ ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರ & ಮತ್ತಿತರೆ ರಾಕ್ಷಸ ಕೃತ್ಯಗಳಿಂದ ಹಿಂಸಿಸಿದರೆ ಪುರುಷರನ್ನು ಸಾರ್ವಜನಿಕವಾಗಿ ವಿಧ-ವಿಧದ ಚಿತ್ರಹಿಂಸೆಗಳನ್ನು ನೀಡಿ ಕೊಲ್ಲಲಾಗುತ್ತಿದ್ದ "ಗೋವಾ ಶೋಧನೆ"ಯು ವ್ಯಾಟಿಕನ್ ಚರ್ಚಿನ ಈ ರೀತಿಯ ರಾಕ್ಷಸ ಕೃತ್ಯಕ್ಕೆ ಒಂದು ಇತ್ತೀಚಿನ ಸ್ವದೇಶಿ ಉದಾಹರಣೆಯಾಗಿದೆ.

ಈಗ ನಿಮಗೆ "ಮತಾಂತರದ ಖರ್ಚುಗಳನ್ನು ಹೊರತುಪಡಿಸಿ, ಅತ್ಯಾಚಾರ ಹಾಗು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳಿಗೆಂದು ಇಷ್ಟು ದೊಡ್ಡ ಮೊತ್ತದ ಪಾವತಿಗಳನ್ನು ವ್ಯಾಟಿಕನ್ ಹೇಗೆ/ಎಲ್ಲಿಂದ ಹೊಂದಿಸುತ್ತದೆ" ಎಂದು ಆಶ್ಚರ್ಯವಾಗುತ್ತಿರಬಹುದು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ನೀವು ಕ್ರೈಸ್ತ (ಕೆಥೊಲಿಕ) ಮತಕ್ಕೆ ಸೇರಿದವರಾಗಿದ್ದಾರೆ ಅದಕ್ಕೆ ಉತ್ತರ ನಿಮ್ಮ ಕಣ್ಣಮುಂದೆಯೇ ಇದೆ. ನಮ್ಮ ಕ್ರೈಸ್ತ ಬಾಂಧವರು ನೀಡುವ ದಾಣದಲ್ಲಿ ಅಥವಾ ಕಾಣಿಕೆಯಲ್ಲಿ (ಕ್ರೈಸ್ತರ ಭಾಷೆಯಲ್ಲಿ) ತುಸು ಭಾಗ ವ್ಯಾಟಿಕನ್ನಿಗೆ ನಿಯಮಿತವಾಗಿ & ನಿರಂತರವಾಗಿ ಹರಿದುಹೋಗುತ್ತದೆ. ಇದನ್ನು ವ್ಯಾಟಿಕನ್ "ಆಫ್ರಿಕಾದಲ್ಲಿ ಸಮಾಜಸೇವೆಗೆಂದು" ಅಥವಾ "ನಮ್ಮದೇ ದೇಶದ ಕೆಲ ರಾಜ್ಯಗಳಲ್ಲಿರುವ ಮಿಷನರಿಯ ಸೇವಾ ಕೇಂದ್ರಗಳಿಗೆಂದೋ" ಅಥವಾ "ದೇವರಿಗೋಸ್ಕರ ದಾಣ ಮಾಡಿ" ಏನ್ನುತ್ತಲೋ ಅಥವಾ "ಸುವಾರ್ತೆ ಸಾರಲೆಂದೋ (ಇದರರ್ಥ ಮತಾಂತರ ಮಾಡಲು ಹಣ ಕೊಡಿ ಎಂದು; ವ್ಯಾಟಿಕನ್ನಿನ ಪ್ರಕಾರ ಈ ಪ್ರಪಂಚದಲ್ಲಿರುವ ಜನರೆಲ್ಲಾ ನರಕದ ಕಡೆಗೆ ಹೋಗುತ್ತಿರುತ್ತಾರೆ ಅವರನ್ನೆಲ್ಲಾ ಕ್ರೈಸ್ತ ಜಾತಿಗೆ ಮತಾಂತರ ಮಾಡಿದರೆ ಅವರೆಲ್ಲಾ ಸ್ವರ್ಗಕ್ಕೆ ಹೋಗುತ್ತಾರೆ :-D ವ್ಯಾಟಿಕನ್ ಅಥವಾ ಕ್ರೈಸ್ತ ಜಾತಿಯ ಮಿಷನರಿಗಳು ಇದನ್ನು "ಪ್ರಪಂಚವನ್ನು ನರಕದ ಅಗ್ನಿಜ್ವಾಲೆಯಿಂದ ನಾವು ಕಾಪಾಡಬೇಕಿದೆ" ಎನ್ನುವ ವಾಕ್ಯದ ಮೂಲಕ ಬೊಗಳೆ ಬಿಡುತ್ತವೆ ಮತ್ತು ಅಮಾಯಕ ಜನರಲ್ಲಿ ಇಲ್ಲ-ಸಲ್ಲದ ಭಯವನ್ನು ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ)".

ಪ್ರಪಂಚದ ಬೇರೆ-ಬೇರೆ ದೇಶಗಳಿಂದ ಹರಿದುಬರುವ ಇಂತಹ ನಿರಂತರ ಆದಾಯದ ಹೊರತಾಗಿ, 'ಮಿಷನ್ ಭಾನುವಾರದಂತಹ ಕಾರ್ಯಕ್ರಮಗಳನ್ನು ನಡೆಸುವಮೂಲಕ' ವ್ಯಾಟಿಕನ್ ನಿಮ್ಮನ್ನು ಇನ್ನೂ ಹೆಚ್ಚು-ಹೆಚ್ಚು ಕೊಡುವಂತೆ ಉದ್ರೇಕಗೊಳಿಸುತ್ತದೆ. ಇಂತಹ ಕಾರ್ಯಕ್ರಮಗಳನ್ನು ನಡೆಸುವಮೂಲಕ ಮನುಷ್ಯನ ಭಾವನೆಗಳ ಸರಿಯಾದ ಲಾಭವನ್ನು ಪಡೆಯುವಮೂಲಕ ವ್ಯಾಟಿಕನ್ ಸಾದ್ಯವಾದಷ್ಟು ಹೆಚ್ಚಿನ ಸಂಪತ್ತನ್ನು ಕ್ರೂಢೀಕರಿಸುತ್ತದೆ.

ಈ ಎಲ್ಲಾ ಆಸ್ತಿ ಸಂಪೂರ್ಣ ತೆರಿಗೆ ವಿನಾಯ್ತಿ ಹೊಂದಿರುತ್ತದೆ. ಅಂದರೆ, ವ್ಯಾಟಿಕನ್ ಈ ಬಹುಕೋಟಿ ಆದಾಯಕ್ಕೆ ಒಂದು ಪೈಸೆಯೂ ತೆರಿಗೆ ಕಟ್ಟುವುದಿಲ್ಲ! ಇದನ್ನು ಸಾಮಾನ್ಯ ನಾಗರಿಕನ ಪರಿಸ್ಥಿತಿಗೆ ಹೊಲಿಸಿನೋಡಿ; ಆತ ತಾನು ಗಳಿಸುವ ಸಾವಿರ/ಲಕ್ಷದ ಪ್ರತೀ ಮೊತ್ತಕ್ಕೂ ಪ್ರತಿಶತದಲ್ಲಿ ತೆರಿಗೆ ಕಟ್ಟುತ್ತಾನೆ.

ಈ ಎಲ್ಲ ಆದಾಯಗಳ ಹೊರತಾಗಿ ವ್ಯಾಟಿಕನ್ ಶಾಲಾ-ಕಾಲೇಜು, ಆಸ್ಪತ್ರೆಗಳು, ಅನಾಥಾಶ್ರಮ, ವೃದ್ಧಾಶ್ರಮ, ಇತ್ಯಾದಿಗಳನ್ನು ನಡೆಸುತ್ತದೆ. ಮತ್ತು ಅವುಗಳೆಲ್ಲ ವ್ಯಾಟಿಕನ್ನಿನ ಮತಾಂತರ ಮಾಡಲು ಬಳಸುವ ತೆರಿಗೆ ರಹಿತ ವ್ಯಾಪಾರದ ಮಾರ್ಗಗಳಷ್ಟೇ.

ಈ ಎಲ್ಲಾ ಹಣ/ಸಂಪತ್ತು ಕೇವಲ ಭಾರತವೊಂದೇ ಅಲ್ಲ, ಬದಲಿಗೆ ಪ್ರಪಂಚದ ವಿವಿಧ ದೇಶಗಳಿಂದ ವ್ಯಾಟಿಕನ್ನಿಗೆ ಹರಿದುಹೋಗುತ್ತದೆ.

ಈಗ "ಪ್ರತೀವರ್ಷ ವ್ಯಾಟಿಕನ್ ಎಷ್ಟು ಸಂಪಾದನೆ ಮಾಡಬಹುದು ಅಥವಾ ವ್ಯಾಟಿಕನ್ನಿಗೆ ಎಷ್ಟು ಆಸ್ತಿ ಹರಿದುಬರಬಹುದು" ಎಂದು ಅಂದಾಜು ಮಾಡಿ.

ಸಹಜವಾಗಿಯೇ ಇದು ವ್ಯಾಟಿಕನ್ನಿಗೆ ತನ್ನ ತಪ್ಪು/ಪಾಪ/ಅಪರಾಧಗಳನ್ನು ಮುಚ್ಚಿಹಾಕಲು ಬೇಕಾದಕ್ಕಿಂತ ಹೆಚ್ಚಿಗೇ ಆಗಿರುತ್ತದೆ. ಏಕೆಂದರೆ ವ್ಯಾಟಿಕನ್ ಅಷ್ಟು ಸರಳವಾಗಿ ತನ್ನ ಅಪರಾಧಗಳಿಗೆ ಬಲಿಯಾದವರಿಗೆ ಹಣವನ್ನು ಕೊಡುವುದಿಲ್ಲ ಬದಲಿಗೆ ಸಾಧ್ಯವಿದ್ದಲ್ಲೆಲ್ಲಾ ವ್ಯಾಟಿಕನ್ ತನ್ನ ಪ್ರಭಾವ ಮತ್ತು ಅಧಿಕಾರ ಬಳಸಿ ಅತ್ಯಾಚಾರ/ಕಿರುಕುಳಕ್ಕೆ ಬಲಿಪಶುವಾದವರ ಸಡ್ಡದಗಿಸಲು ಯತ್ನಿಸುತ್ತದೆ. ಹೀಗೆ ವ್ಯಾಟಿಕನ್ನಿನ ಪ್ರಭಾವಕ್ಕೆ ಮಣಿದು ಬಲಿಪಶುವಾದ ವ್ಯಕ್ತಿ ಸುಮ್ಮನಾದರೆ ವ್ಯಾಟಿಕನ್ನಿನ ಬ್ಯಾಂಕಿನಲ್ಲಿ ಎಷ್ಟೋ ಮೊತ್ತದ ಉಳಿತಾಯವಾಗುತ್ತದೆ (ನೆನಪಿರಲಿ, ವ್ಯಾಟಿಕನ್ ಎನ್ನುವುದು ತನ್ನದೇ ಆದ ಸ್ವತಂತ್ರ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರುವ ದೇಶ ಮತ್ತು ವ್ಯಾಟಿಕನ್ ಚರ್ಚಿನ ಬ್ಯಾಂಕ್ ಖಾತೆಗಳು ಎಷ್ಟು ನಿಘೂಡತೆಯಿಂದ ಕೂಡಿವೆ ಎಂದರೆ ವ್ಯಾಟಿಕನ್ ಹಣಕಾಸಿನ ಮಾಹಿತಿ ಬೇರೆ ಯಾವುದೇ ದೇಶಗಳಿಗೂ ಸಿಗುವುದಿಲ್ಲ ಅಥವಾ ಸಾರ್ವಜನಿಕ ತನಿಖೆಗಳಿಗೆ ಲಭ್ಯವಿಲ್ಲ).

ಮತ್ತು ವ್ಯಾಟಿಕನ್ ತನ್ನ ಸ್ವಂತ ಹಿಂಬಾಲಕರಿಗೂ ತನ್ನ ಮಾಸಿಕ/ವಾರ್ಷಿಕ ಆಯವ್ಯಯದ (ಹಣಕಾಸಿನ) ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ತನ್ನ ಪರಿಮಿತಿಯೊಳಗೆ ಮಹಿಳೆಯರ ಸಾಮಾನ್ಯ ಹಕ್ಕುಗಳ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಬದಲು, ತನ್ನ ಪ್ರಭಾವ, ಅಧಿಕಾರ, ತನ್ನ ಮಾಧ್ಯಮ ಸಂಸ್ಥೆಗಳು ಮತ್ತು ಕೊನೆಗೆ ಹಣವನ್ನು ಬಳಸುವುದರ ಮೂಲಕ ವ್ಯಾಟಿಕನ್ ಅಧಿಕಾರದ ಆಟವನ್ನಾಡುತ್ತದೆ.

ತನಗೆ ಸಂಭಂದಿಸದ ವಿಷಯಗಳಲ್ಲಿ ತನ್ನ ಹೊಲಸು ಮೂಗನ್ನು ತೂರಿಸುವುದರ ಮೂಲಕ ವ್ಯಾಟಿಕನ್ ಭಾರತದಂತಹ ಸದೃಢ & ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಮಾನವಹಕ್ಕುಗಳು, ನೀತಿನಿಯಮಗಳು, ಮನುಷ್ಯತ್ವ ಇತ್ಯಾದಿಯಂತಹ ವಿಷಯಗಳಲ್ಲಿ ಪಾಠ ಮಾಡಲು ಓಡೋಡಿ ಮುಂದೆ ಬರುತ್ತದೆ (ಮುಖ್ಯವಾಗಿ ಭಾರತದಲ್ಲಿ ಭಾಜಪ ಪಕ್ಷದ ಸರ್ಕಾರವಿದ್ದಾಗ).

ಈಗ ಗಲೀಜು ತನ್ನ ಮೂತಿಯಮೇಲೆ ಬಿದ್ದಿರುವುದರಿಂದ ಮತ್ತು ಆ ವಿಷಯ ಪ್ರಪಂಚದೆಲ್ಲೆಡೆ ವ್ಯಾಪಕ ಪ್ರಚಾರ ಪಡೆದಿರುವುದರಿಂದ, "ಈ ಪ್ರಕರಣ ವ್ಯಾಟಿಕನ್ನಿನ ನ್ಯಾಯಾಂಗ ವ್ಯಾಪ್ತಿಗೆ ಒಳಪಡುವುದಿಲ್ಲವಾದ್ದರಿಂದ ವಿಷಯವನ್ನು ಕೇರಳದ ಸ್ಥಳೀಯ ಅಧಿಕಾರಿಗಳಿಗೆ ಬಿಟ್ಟುಕೊಡುತ್ತೇವೆ" ಎಂದು ವ್ಯಾಟಿಕನ್ ನಿಶ್ಯಬ್ಧವಾಗಿ ನುಣುಚಿಕೊಳ್ಳುತ್ತದೆ. ಒಂದುವೇಳೆ ಕೇಂದ್ರದಲ್ಲಿ ಭಾಜಪದ ಜಾಗದಲ್ಲಿ ಕಾಂಗ್ರೆಸ್ ಏನಾದರೂ ಇದ್ದಿದ್ದರೆ, ವ್ಯಾಟಿಕನ್ ತಾನೇ ಭಾರತದ ಕ್ರೈಸ್ತರ ರಾಯಭಾರಿ ಎನ್ನುವಂತೆ ಮುತುವರ್ಜಿ ವಹಿಸಿ, ನಮ್ಮ ದೇಶದ ಆಂತರಿಕ ವಿಷಯಗಳಲ್ಲಿ ಮೂಗುತೂರಿಸಿ ಮೋಜು ನೋಡುತ್ತಿತ್ತು.

ಇವಿಷ್ಟು ಸಾಕಲ್ಲ "ವ್ಯಾಟಿಕನ್ ಒಂದು ಅಧಿಕಾರ ಮತ್ತು ಸಂಪತ್ತಿನ ದಾಹದಿಂದ ಕೂಡಿದ ದೇಶ" ಎಂದ್ಹೇಳಲು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಆ ಕನ್ಯಾಸ್ತ್ರೀಗೆ ನ್ಯಾಯ ದೊರಕಲಿ ಮತ್ತು ಆ ಬಲಾತ್ಕಾರಿ ಬಿಶೋಪನಿಗೆ ನ್ಯಾಯಾಂಗದಡಿಯಲ್ಲಿ ಸರಿಯಾದ ಶಿಕ್ಷೆಯಾಗಲಿ ಎಂದು ಹಾರೈಸೋಣ.
ಮತ್ತು ಮೆಚ್ಚಿನ ಕ್ರೈಸ್ತ ಬಾಂಧವರೇ, ಈಗಲಾದರೂ ಕ್ರೈಸ್ತ ಜಾತಿ ಆಕಾಶದಿಂದ ಉದುರಿದೆಯೇನೋ ಎನ್ನುವಂತೆ ನಟಿಸುವುದನ್ನು ನಿಲ್ಲಿಸಿ, ಏಕೆಂದರೆ ಕ್ರೈಸ್ತ ಜಾತಿಯಲ್ಲಿ ಕೂಡ ಹೊಲಸು ತುಂಬಿದೆ.
ಉಲ್ಲೇಖಗಳು/ಹೆಚ್ಚಿನ ಮಾಹಿತಿ:

೧. ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೨. ವ್ಯಾಟಿಕನ್ನಿನ ಅತ್ಯಾಚಾರದ ಸಂಸ್ಕೃತಿ:೩. ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಮುಚ್ಚಿಹಾಕುವುದು ವ್ಯಾಟಿಕನ್ ಇತಿಹಾಸದಲ್ಲೇ ತುಂಬಿಕೊಂಡಿದೆ:

೪. ಪಾದ್ರಿಗಳ ಮೇಲಿನ ಮಕ್ಕಳ ಲೈಂಗಿಕ ದೌರ್ಜನ್ಯದ ಆರೋಪಗಳು:

೫. ೧೯೪೬ರಿಂದ ೨೦೧೪ರ ವರೆಗೆ ಜರ್ಮನಿಯಲ್ಲಿ ೩,೬೦೦ಕ್ಕಿಂತಲೂ ಹೆಚ್ಚಿನ ಮಕ್ಕಳ ಮೇಲೆ ಪಾದ್ರಿಗಳಿಂದ ಲೈಂಗಿಕ ಕಿರುಕುಳ:

೬: ಆ ತರಹದ ಘಟನೆ ಚರ್ಚಿನ ಇತಿಹಾಸದಲ್ಲಿ ಇದೇ ಮೊದಲೇನಲ್ಲ ಮತ್ತು ವ್ಯಾಟಿಕನ್/ಚರ್ಚನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಈ ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಗಮನಿಸಿದರೆ ಇದೇ ಕೊನೆಯ ಘಟನೆ ಎಂದೂ ಹೇಳಲು ಅಸಾಧ್ಯ:

೭. ವ್ಯಾಟಿಕನ್/ಚರ್ಚ್ ಶೋಷಣೆಗೆ ಒಳಗಾದವರ (ಇಲ್ಲಿ ಕೇರಳದ ಕ್ರೈಸ್ತ ಕನ್ಯಾಸ್ತ್ರೀ/ನನ್) ವಿರುದ್ಧ ಅಪನಿಂದೆ/ಸುಳ್ಳುಸುದ್ದಿಯ ಪ್ರಚಾರ ನಡೆಸುತ್ತದೆ:

೯. ೧೯೯೦ರ ದಶಕದಿಂದಲೇ ಹೇಗೆ ಆಫ್ರಿಕಾದ ಕನ್ಯಸ್ತ್ರೀಯರ ಮೇಲೆ ಪಾದ್ರಿಗಳು ಮಾಡಿದ ಲೈಂಗಿಕ ಕಿರುಕುಳದ ಪ್ರಕರಣಗಳು ನಿಶ್ಯಬ್ದತೆ/ನಿಘೂಡತೆಯಿಂದ ಮುಚ್ಚಿಹೋಗಿವೆ:

೯. ಒಂಬತ್ತು ವರ್ಷದ ಬಾಲಕಿಯಮೇಲೆ ಕ್ರೈಸ್ತ ಪಾದ್ರಿಯಿಂದ ಅತ್ಯಾಚಾರ:

೧೦. ಅತ್ಯಾಚಾರಕ್ಕೆ ಬಲಿಯಾಗಿರುವವರ ಬೆಂಬಲಕ್ಕೆ ನಿಂತ ಭಾರತ:
https://www.republicworld.com/india-news/general-news/kerala-nun-rape-case-protest-against-rape-accused-bishop-franco-mulakkal-in-delhi-interrogation-reaches-day-three-live-updates-here

೧೧. ಪೋಪ್ ತಾತ್ಕಾಲಿಕವಾಗಿ ಬಲಾತ್ಕಾರಿ ಬಿಶೋಪ್ನನ್ನು ಅಧಿಕಾರದಿಂದ ಕೆಳಗಿಡುತ್ತಾರೆ:

೧೨. ಕೇರಳದ ಪಕ್ಷಪಾತಿ ಕಮ್ಯೂನಿಸ್ಟ್ ಸರ್ಕಾರವು ಅತ್ಯಾಚಾರಿಯನ್ನು ಉಳಿಸಲು ಯತ್ನಿಸುತ್ತದೆ. ಪ್ರಕರಣ ದಾಖಲಿಸಿ ೭೫ ದಿನಗಳು ಕಳೆದರೂ 'ಅತ್ಯಾಚಾರಿ' ಬಿಶೋಪ್ ಇನ್ನೂ ಸ್ವತಂತ್ರವಾಗಿ ಓಡಾಡಿಕೊಂಡಿರುತ್ತಾನೆ. ಅಷ್ಟೇ ಅಲ್ಲದೆ, ಅತ್ಯಾಚಾರಕ್ಕೆ ಬಲಿಯಾದ ಕನ್ಯಾಸ್ತ್ರೀ ಐದುಬಾರಿ ಪೋಲೀಸರಿಂದ ಕಷ್ಟಕರ ವಿಚಾರಣೆಗಳಿಗೆ ಒಳಗಾದರೆ, ಆಪಾದಿತ ಪಾದ್ರಿ ಮಾತ್ರ ಒಂದೇಒಂದು ಬಾರಿ ಪೋಲೀಸರಿಂದ ಪ್ರಶ್ನಿಸಲ್ಪಡುತ್ತಾನೆ:

೧೩. ವಿಷಯ ವ್ಯಾಟಿಕನನ್ನು ತಲುಪುತ್ತಲೇ ಅತ್ಯಾಚಾರಿ ಬಿಶೋಪ್ನನ್ನು ಪೌರೋಹಿತ್ಯದಿಂದ ದೂರವಿಡಲಾಗುತ್ತದೆ:

೧೪. ಎಷ್ಟೊ ಸಂದರ್ಭಗಳಲ್ಲಿ ಕ್ರೈಸ್ತ ಸಮುದಾಯ ತಮ್ಮದೊಂದೇ ಒಳ್ಳೆಯ/ಮುತ್ಸದ್ದಿ ಸಮಾಜ ಎಂದು ಕೊಚ್ಚಿಕೊಳ್ಳುತ್ತದೆ. ಆದರೆ ಅದು ನಿಜವೇ?
ಪಾದ್ರಿಯಿಂದ ಅತ್ಯಾಚಾರಕ್ಕೆ ಬಲಿಪಶುವಾದ ಕನ್ಯಸ್ತ್ರೀಗೆ ನ್ಯಾಯ ದೊರಕಲು ಹೋರಾಡುವ ಬದಲು ಚರ್ಚ್ ಮತ್ತು ಮಿಷನರಿಗಳು ಆ ಕನ್ಯಸ್ತ್ರೀ ಒತ್ತಡಕ್ಕೊಳಗಾಗಿ ಸುಮ್ಮನಾಗುವಂತೆ ಮಾಡಲು ಕಾನೂನಿಗೆ ವಿರುದ್ಧವಾಗಿ ಅತ್ಯಾಚಾರಕ್ಕೆ ಬಲಿಯಾದವರ ಚಿತ್ರವನ್ನು ಸಾಮಾಜಿಕ ಜಾಲತಾನಗಳಲ್ಲಿ ಆಕೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಹರಿಬಿಡುತ್ತವೆ:

೧೫: ಕಿರುಕುಳ ತಡೆಗಟ್ಟಲು ಪೋಪ್ ನಿಂದ ಸಭೆ ನಡೆಯುತ್ತದೆ:

೧೬. ಕೆಥೊಲಿಕ ಚರ್ಚಿನ ಲೈಂಗಿಕ ಕಿರುಕುಳದ ಪ್ರಕರಣಗಳು:

೧೭. ಕ್ರೈಸ್ತ ಪಾದ್ರಿಗಳಿಂದ ಕನಿಷ್ಠ ೧,೦೦೦ ಮಕ್ಕಳ ಮೇಲೆ ಲೈಂಗಿಕ ಕಿರುಕುಳ:

೧೮. ಚರ್ಚ್ ತನ್ನ ಪಾದ್ರಿಗಳು ಎಸಗಿದ ೩೦೦ ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಮುಚ್ಚಿಹಾಕಿಸುತ್ತದೆ:

೧೯. ಇರುವ ೩೯ ಕ್ರೈಸ್ತ ಪಾದ್ರಿಗಳಲ್ಲಿ ೨೦ ಜನ ಪಾದ್ರಿಗಳ ಮೇಲಿರುವ ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಚರ್ಚ್ ಮುಚ್ಚಿಹಾಕಿಸಿ ಮತ್ತದೇ ರಾಕ್ಷಸರ ಕೈಗೆ ಆಡಳಿತ ನೀಡುವುದರ ಮೂಲಕ ಇನ್ನೂ ಹೆಚ್ಚು ಅತ್ಯಾಚಾರಗಳು ನಡೆಯಲು ದಾರಿಮಾಡಿಕೊಡುತ್ತದೆ:

೨೦. ಕೇರಳದ ಕಹಿ ಘಟನೆಯಲ್ಲಿಯೂ ಎಡಪಂಥೀಯರು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಾರೆ:

೨೧. ಕ್ರೈಸ್ತ ದೇಶಗಳು ಚರ್ಚ್ ನಿಂದ ಆಗುತ್ತಿರುವ ಅಪರಾಧಗಳ ಬಗ್ಗೆ ಅತೀ ಹೆಚ್ಚು ಮೌನವಹಿಸಿವೆ:

೨೨. ಪಕ್ಷಾತೀತ ಮತ್ತು ಒಳ್ಳೆಯ ಆಡಳಿತಕ್ಕೆ ಮಿಶೆಲ್ ಬಾಶೆಲೆಟ್ ವಿಶ್ವಸಮುದಾಯದಲ್ಲಿ ಹೆಸರುಗಳಿಸಿದ್ದಾರೆ:

೨೩: ಭಾರತದ ಕಾಶ್ಮೀರದ ನೆಲದಲ್ಲಿ ಯಾವುದೇ ಸಮೀಕ್ಷೆ ಕೈಗೊಳ್ಳದೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅಡಿಯಲ್ಲಿ ಪಕ್ಷಪಾತ ಮಾಡಿ ಭಾರತದಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತಹ ವರದಿಯೊಂದನ್ನು ಜೋರ್ಡಾನ್ ಮೂಲದ ಇಸ್ಲಾಂ ಮೂಲಭೂತವಾದಿ ಹೈ ಕಮಿಷನರ್ ಸಯ್ಯದ್ ರಾದ್ ಅಲ್ ಹುಸೇನ್ ಬಿಡುಗಡೆ ಮಾಡುತ್ತಾನೆ. ಅವನ ಮೂಲಭೂತವಾದದ ವಿಚಾರಗಳಿಂದಾಗಿ ತನ್ನನ್ನು ತಾನು ಹಿಂದೂ ರಾಷ್ಟ್ರವಾಗಿರುವ ಭಾರತದ ವಿರುದ್ಧ ಮತ್ತು ಇಸ್ಲಾಂ ಮೂಲಭೂತಿ & ಭಯೋತ್ಪಾದನಾ ದೇಶವಾಗಿರುವ ಪಾಕಿಸ್ತಾನದ ಪರ ನಿಲ್ಲುವಂತೆ ಮಾಡುತ್ತವೆ. ಮತ್ತು ಇದರಿಂದಾಗಿಯೇ ಅವನು ಭಾರತದ ವಿರುದ್ಧ ದೊಡ್ಡದಾದ ಸುಳ್ಳಿನ ಕಂತೆಯನ್ನು ವಿಶ್ವಸಂಸ್ಥೆಯಲ್ಲಿ ಹಾರಿಬಿಡುತ್ತಾನೆ ಹಾಗು ತನ್ನ ಈ ನೀಚ/ಕೀಳ್ಮಟ್ಟದ ಕೆಲಸಕ್ಕೆ ವಿವಿಧ ದೇಶಗಳಿಂದ ಛೀಮಾರಿ ಹಾಕಿಸಿಕೊಳ್ಳುತ್ತಾನೆ. ಈ ಸುಳ್ಳಿನ ಕಂತೆಯಾಗಿರುವ ವರದಿಯನ್ನು ತಯಾರಿಸುವಾಗ ಇವನು ಪಾಕಿ ಅಧಿಕಾರಿಗಳ ಜೊತೆ ಅತ್ಯಂತ ನಿಕಟ ಒಡನಾಟ & ಮಾತುಕತೆ ನಡೆಸುತ್ತಾನೆ:

೨೪. ಗೋವಾ ಶೋಧನೆ - ಫ್ರಾನ್ಸಿಸ್ ಝೆವಿಯರ್ ಒಬ್ಬ ಸಂತನೇ ಅಥವಾ ಭಯೋತ್ಪಾದಕನೆ?!:

೨೫. ಗೋವಾ ಶೋಧನೆ: ಭಾರತೀಯರು ಮರೆಯಲಾಗದ/ಮರೆಯಬಾರದ ಇತಿಹಾಸದ ಕರಾಳ ಅಧ್ಯಾಯ - ಶ್ರೀಮತಿ ಶೆಫಾಲಿ ವೈದ್ಯರವರಿಂದ ಒಂದು ಚರ್ಚೆ:

೨೬. ಗೋವಾ ಶೋಧನೆ: ಪೋರ್ಚುಗೀಸ್ ಕ್ರೈಸ್ತರು ನಡೆಸಿದ ಅಮಾಯಕ ಹಿಂದೂ/ಬೌದ್ಧ/ಜೈನ/ಯಹೂದ್ಯ/ಮುಸ್ಲಿಂ ಜೀವಗಳ ಮಾರಣಹೋಮ ಮತ್ತು ಹಿಂದೂ ದೇವಾಲಯಗಳ ನಾಶ:

೨೭. ಗೋವಾದ ಶೋಧನೆಯ ಭಯಾನಕ ಘಟನೆಗಳು:

೨೮. ಭಾರತದಲ್ಲಿ ಅಲ್ಪಸಂಖ್ಯಾತರ ಓಲೈಕೆಯ ಮಟ್ಟ:

೨೯. ಗೋವಾ ರಾಜ್ಯವನ್ನು ಕ್ರೈಸ್ತೀಕರಣಗೊಳಿಸುವುದು:

೩೦. ಗೋವಾ ರಾಜ್ಯದಲ್ಲಿದ್ದ ಹಿಂದೂ/ಬೌದ್ಧ/ಜೈನ/ಸಿಖ್/ಯಹೂದ್ಯ/ಮುಸ್ಲಿಂ ಜನರ ಕಗ್ಗೊಲೆಯಲ್ಲಿ ಝೆವಿಯರ್, ವ್ಯಾಟಿಕನ್ ಮತ್ತು ಪೋಪ್ ನ ಪಾತ್ರ:

೩೧. ಗೋವಾ ಶೋಧನೆಯ ಕ್ರೌರ್ಯ: