ಫ್ರಾನ್ಸಿಸ್ ಝೇವಿಯರ್ ಮತ್ತು ಬಿನ್ ಲಾಡೆನ್ - ಒಂದೇ ನಾಣ್ಯದ ಎರಡು ಮುಖಗಳು - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಒಂದುಕಡೆ ಕ್ರೈಸ್ತರು ಮುಸ್ಲೀಮರತ್ತ ಬೆರಳುತೋರಿಸಿ ಖಂಡಿಸುವುದೇನೆಂದರೆ "ಮುಸ್ಲೀಮರು ಬಿನ್ ಲಾಡೆನ್ ನಂತಹ ಭಯೋತ್ಪಾದಕನನ್ನು ಒಬ್ಬ ಒಳ್ಳೆಯ ನಾಯಕ ಎಂಬಂತೆ ನೋಡುತ್ತಾರೆ" ಎಂದು,
ಆದರೆ ಅದೇ ಕ್ರೈಸ್ತರು ಇನ್ನೊಂದೆಡೆ ಫ್ರಾನ್ಸಿಸ್ ಝೇವಿಯರ್ ನಂತಹ ನರಹಂತಕನನ್ನು ಒಬ್ಬ ಸಂತನೆಂದು ಪೂಜಿಸುತ್ತಾರೆ!
ಅವರ ಈ ಎಡಬಿಡಂಗಿತನದಿಂದ ಮುಸ್ಲೀಮರು ಮತ್ತು ಕ್ರೈಸ್ತರ ಮಧ್ಯೆ ನೈಜ ವ್ಯತ್ಯಾಸವೇನೂ ಇಲ್ಲವೆಂಬುದು ಸರಳವಾಗಿ ಗೋಚರಿಸುತ್ತದೆ.

ಒಮ್ಮೆ ಮುಕ್ತ ಮನಸ್ಸಿನಿಂದ ಯೋಚಿಸಿನೋಡಿ:
ಫ್ರಾನ್ಸಿಸ್ ಝೇವಿಯರ್ ಮತ್ತು ಬಿನ್ ಲಾಡೆನ್ ಮಧ್ಯೆ ಇರುವ ಒಂದೇಒಂದು ವ್ಯತ್ಯಾಸವೇನೆಂದರೆ ಅವರಿಬ್ಬರೂ ಬೇರೆಬೇರೆ ಜಾತಿಗಳಿಗೆ ಸೇರಿದ್ದರು ಎನ್ನುವುದಷ್ಟೆ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಬಿನ್ ಲಾಡೆನ್ ವಿದ್ಯಾವಂತ & ಸಿರಿವಂತ (ಕೆಲಸ ಸಿಗಲಿಲ್ಲ ಎನ್ನುವ ಕಾರಣಕ್ಕಷ್ಟೇ & ಬಡ ಮುಸ್ಲೀಮರಷ್ಟೇ ಭಯೋತ್ಪಾದಕರಾಗುತ್ತಾರಾ?!) ವ್ಯಕ್ತಿಯಾಗಿದ್ದರಿಂದ ಸಾಧ್ಯವಾದಷ್ಟು ಹೆಚ್ಚು ಜನರನ್ನು ಕೊಲ್ಲಲು  ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡ.

ಫ್ರಾನ್ಸಿಸ್ ಝೇವಿಯರ್ ಈ ೨೧ನೇ ಶತಮಾನದ ವಿದ್ಯಾವಂತನಲ್ಲವಾದ್ದರಿಂದ ಹಳೆಯ ರಾಕ್ಷಸ ಮಾರ್ಗವನ್ನು ಬಳಸಿ ಜನರನ್ನು ಚಿತ್ರಹಿಂಸೆ ನೀಡಿ ಕೊಲ್ಲುತ್ತಿದ್ದ.


ಕ್ರೈಸ್ತರ/ಹಿಂದೂಗಳ/ಯಹೂದ್ಯರ/ಕಮ್ಯುನಿಸ್ಟ್ಗಳ/ಇತ್ಯಾದಿ ಜೀವಗಳ ರಕ್ತವನ್ನು ಹರಿಸುವುದರಿಂದ ತನ್ನ ಅಲ್ಲಾ ತನ್ನನ್ನು ಪ್ರೀತಿಸುತ್ತಾನೆ ಎಂದು ಬಿನ್ ಲಾಡೆನ್ ಭಾವಿಸಿದ್ದ.
ಹಿಂದೂಗಳ/ಸಿಖ್ಖರ/ಜೈನರ/ಬೌದ್ಧರ/ನಾಸ್ತಿಕರ/ಯಹೂದ್ಯರ/ಕಮ್ಯುನಿಸ್ಟ್ಗಳ/ಇತ್ಯಾದಿ ಜೀವಗಳ ರಕ್ತವನ್ನು ಹರಿಸುವುದರಿಂದ ತನ್ನ ಯೇಸುಕ್ರಿಸ್ತ ತನ್ನನ್ನು ಪ್ರೀತಿಸುತ್ತಾನೆ ಎಂದು ಫ್ರಾನ್ಸಿಸ್ ಝೇವಿಯರ್ ಭಾವಿಸಿದ್ದ.

ಬಿನ್ ಲಾಡೆನ್ ನನ್ನು ಕ್ರೈಸ್ತರು ಬಹಿರಂಗವಾಗಿ ಮತ್ತು ಧೈರ್ಯವಾಗಿ ಖಂಡಿಸುವುದಾದರೆ, ಅದೇ ಕ್ರೈಸ್ತರು ಬಹಿರಂಗವಾಗಿ ಫ್ರಾನ್ಸಿಸ್ ಝೇವಿಯರ್ ನನ್ನು ಸಂತನೆಂದು ಪೂಜಿಸಲು ಹೇಗೆತಾನೇ ಸಾಧ್ಯ?

ನಾನಿಲ್ಲಿ ಬಿನ್ ಲಾಡೆನ್ ನನ್ನು ಸಮರ್ಥಿಸಿಕೊಳ್ಳುತ್ತಿಲ್ಲ.
ಬದಲಿಗೆ, ಈ ಜಗತ್ತಿಗೆ ಸರಿಯಾಗಿ ತಿಳಿಯದಿರುವ ಮತ್ತು ವ್ಯಾಟಿಕನ್ ನಿಂದ ಸಂತನಂತೆ ಬಿಂಬಿತಗೊಂಡಿರುವ ಕ್ರೈಸ್ತ ಭಯೋತ್ಪಾದಕನೊಬ್ಬನ ಬಗ್ಗೆ ನೆನಪಿಸುತ್ತಿದ್ದೇನೆ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಬಿನ್ ಲಾಡೆನ್ ಜನರನ್ನು ಒಂದುರೀತಿಯ ಒಂದೇ ಹೊಡೆತದಲ್ಲಿ ಕೊಂದುಹಾಕಿದ.
ಆದರೆ ಫ್ರಾನ್ಸಿಸ್ ಝೇವಿಯರ್ ಜನರಿಗೆ ಚಿತ್ರಹಿಂಸೆ ನೀಡಿ ಅವರನ್ನು ಸಾಯಿಸಿದ.
ಇದರರ್ಥ, ಅಮಾಯಕ ಜನರನ್ನು ಒಂದೇ ಹೊಡೆತದಲ್ಲಿ ಕೊಲ್ಲುವುದು ಒಳ್ಳೆಯ ಕೆಲಸ ಎಂದಲ್ಲ.
ನೀವು ಒಂದು ಅಮಾಯಕ ಜೀವವನ್ನು ಹೆಗೆಯೇ ಕೊಂದರೂ ಕೊಲ್ಲುವುದು/ಕೊಂದಿದ್ದು ಒಂದು ಅಪರಾಧ/ಪಾಪವೇ ಆಗಿರುತ್ತದೆ.

ಫ್ರಾನ್ಸಿಸ್ ಝೇವಿಯರ್ ಎಂಬ ಸತ್ತುಹೋಗಿರುವ ಕ್ರೈಸ್ತ ಭಯೋತ್ಪಾದಕನನ್ನು ವ್ಯಾಟಿಕನ್ ಸಂತನೆಂದು ಬಿಂಬಿಸುವುದಾದರೆ,
ಅದೇ ರೀತಿ ಮುಸ್ಲೀಮರು ಕೂಡ ಬಿನ್ ಲಾಡೆನ್ ಅಲ್ಲಾನ ಸೇವೆಮಾಡುತ್ತಾ ಸತ್ತ ಒಬ್ಬ ದೇವಮಾನವ ಎಂದು ಬಿಂಬಿಸುತ್ತಾರಷ್ಟೆ.

ಫ್ರಾನ್ಸಿಸ್ ಝೇವಿಯರ್ ಮಂತ್ರ/ಪವಾಡಗಳನ್ನು ಮಾಡುತ್ತಿದ್ದ ಆದ್ದರಿಂದ ಅವನು ಸಂತರ ಪದವಿಗೆ ಸೂಕ್ತ ಎಂದು ಹೇಳುವುದು ಮುಟ್ಠಾಳತನವಾಗುತ್ತದೆ.
ಏಕೆಂದರೆ, ಪ್ರಪಂಚದಲ್ಲಿ ಎಷ್ಟೋ ಜನ ಮಂತ್ರವಾದಿಗಳಿದ್ದಾರೆ, ಅವರನ್ನೆಲ್ಲಾ ಕ್ರೈಸ್ತರು/ವ್ಯಾಟಿಕನ್ ಸಂತರೆಂದು ಪೂಜೆಮಾಡುವರೇನು?

ಫ್ರಾನ್ಸಿಸ್ ಝೇವಿಯರ್ ನನ್ನು ಬೆಂಬಲಿಸುವ ಕ್ರೈಸ್ತರ ಮತ್ತು ಕೆಳಗಿನ ಚಿತ್ರದಲ್ಲಿರುವ ಮುಸ್ಲೀಮರ ಮಧ್ಯೆ ನೈಜವಾಗಿ ಯಾವುದೇ ಮೌಲ್ಯಯುತ/ನೈತಿಕ ವ್ಯತ್ಯಾಸಗಳಿಲ್ಲ:

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಅಂತಿಮವಾಗಿ, ತನ್ನ ನಾಟಕೀಯ ನಿದ್ದೆಯಿಂದ ಎದ್ದೇಳಲು ವ್ಯಾಟಿಕನ್ ಗೆ ಈಗ ಸಮಯ ಬಂದಿದೆ ಮತ್ತು ಫ್ರಾನ್ಸಿಸ್ ಝೇವಿಯರ್ ಎಂಬವನು ಪೋರ್ಚುಗೀಸ್ ಆಡಳಿತದಲ್ಲಿದ್ದ ಒಬ್ಬ ಕ್ರೈಸ್ತ ಭಯೋತ್ಪಾದಕನಲ್ಲದೇ ಬೇರೆ ಏನೂ ಅಲ್ಲ ಎನ್ನುವ ನೈಜತೆಯನ್ನು ಒಪ್ಪಿಕೊಂಡು ಫ್ರಾನ್ಸಿಸ್ ಝೇವಿಯರ್ನನ್ನು ತನ್ನ ಸಂತರ ಪದವಿಯಿಂದ ಕಿತ್ತೆಸೆಯುವ ಸಮಯ ಸನ್ನಿಹಿತವಾಗಿದೆ (ವ್ಯಾಟಿಕನ್ನಿಗೆ ತನ್ನ ಸಂತರ ಪದವಿಗೆ ಇರುವ ಅರ್ಥವನ್ನು ಉಳಿಸಿಕೊಳ್ಳಬೇಕೆಂದರೆ ಮಾತ್ರ).

ಮತ್ತು ಒಂದುವೇಳೆ ವ್ಯಾಟಿಕನ್ನಿಗೆ ಅಮಾಯಕ ಜೀವಗಳ ಬಗ್ಗೆ ಕಾಳಜಿ ಇದೆಯೆಂದಾದರೆ ಮತ್ತು ಅದು ತನ್ನ (ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು ಎಂದ್ಹೇಳಿದ) ಯೇಸುಕ್ರಿಸ್ತನನ್ನು ನಿಜವಾಗಿ ಹಿಂಬಾಲಿಸುವುದಾದರೆ ಈ ಫ್ರಾನ್ಸಿಸ್ ಝೇವಿಯರ್ ಎಂಬ ಕ್ರೂರಿಯಿಂದಾಗಿ ತಮ್ಮ ಪೂರ್ವಜರನ್ನು ಕಳೆದುಕೊಂಡ ಭಾರತೀಯರಿಗೆ ಒಂದು ವಿನಮ್ರ ಕ್ಷಮೆ ಕೇಳುವುದರಲ್ಲಿ ತಪ್ಪೇನಿಲ್ಲ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.