ಗಣಕದ ದಿನಾಂಕ, ಸಮಯ ಹಾಗು ಅಂಕಿಗಳನ್ನು ಕನ್ನಡಕ್ಕೆ ಹೊಂದಿಸಿ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಪರಿವಿಡಿ

೧. "ದಿನಾಂಕ ಮತ್ತು ಸಮಯ"ದ ನಿಲುವು(ಸೆಟ್ಟಿಂಗ್)ಗಳನ್ನು ತೆರೆಯುವ ವಿಧಾನಗಳು

೧.೧. ವಿಂಡೋಸ್ ೧೦ ಗಡಿಯಾರದ ಮೂಲಕ

ಕೆಲಸದ ಪಟ್ಟಿ(ಟಾಸ್ಕ್ ಬಾರ್)ಯ ಮೇಲಿರುವ ಗಡಿಯಾರದ ಮೇಲೆ ಮೌಸ್ ಬಲಗುಂಡಿಯನ್ನು ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ತೆರೆದುಕೊಳ್ಳುವ ಸಾಂದರ್ಭಿಕ ಮೆನುವಿನಲ್ಲಿ "Adjust date/time (ಚಿತ್ರದಲ್ಲಿ ತೋರಿಸಿರುವಂತೆ)" ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈಗ ನಿಲುವು(ಸೆಟ್ಟಿಂಗ್)ಗಳ ಪರದೆ ತೆರೆದುಕೊಳ್ಳುತ್ತದೆ. ಕೆಳಗಡೆಯವರೆಗೆ ಪರದೆಯನ್ನು ಉರುಳಿಸಿ (ಸ್ಕ್ರೋಲ್ ಮಾಡಿ), ಅಲ್ಲಿ ಕಾಣುವ "Additional date, time, & regional settings" ಆಯ್ಕೆಮಾಡಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈಗ ಕಾಣುವ ಪರದೆಯಲ್ಲಿ "Date and Time"ಅನ್ನು ಆಯ್ಕೆಮಾಡಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈಗ "ದಿನಾಂಕ ಮತ್ತು ಸಮಯ"ದ ನಿಲುವು(ಸೆಟ್ಟಿಂಗ್) ಪರದೆ ತೆರೆದುಕೊಳ್ಳುತ್ತದೆ.

೧.೨. ವಿಂಡೋಸ್ ಗುಂಡಿಯ ಮೂಲಕ

ಕೆಲಸದ ಪಟ್ಟಿಯ ಮೇಲಿರುವ ಅಥವಾ ಕೀಲಿಮಣಿಯಲ್ಲಿರುವ ವಿಂಡೋಸ್ ಗುಂಡಿಯನ್ನು ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈಗ ನೇರವಾಗಿ "Date and Time" ಎಂದು ಛಾಪಿಸಿ (ಟೈಪ್ ಮಾಡಿ). ಇದರಿಂದ "Date and Time" ಎನ್ನುವುದು ಆರಂಭದ ಮೆನುವಿನಲ್ಲಿ (ಸ್ಟಾರ್ಟ್ ಮೆನು) ಹುಡುಕಲ್ಪಟ್ಟು ಅದಕ್ಕೆ ಹೊಂದುವ ಎಲ್ಲಾ ಫಲಿತಾಂಶಗಳನ್ನು ತೋರಿಸಲಾಗುತ್ತದೆ.
ಕಾಣುವ ಫಲಿತಾಂಶಗಳಲ್ಲಿ ಚಿತ್ರವನ್ನು/ಐಕಾನ್ ಅನ್ನು ನೋಡಿ ಸರಿಯಾದ ಆಯ್ಕೆಯನ್ನು ಆರಿಸಿಕೊಳ್ಳಿ. ಏಕೆಂದರೆ ಫಲಿತಾಂಶಗಳಲ್ಲಿ ಕಾಣುವ ಬೇರೆ-ಬೇರೆ ಆಯ್ಕೆಗಳು ಬೇರೆ-ಬೇರೆ ಕೆಲಸಕ್ಕೆ ಸಂಭಂದಿಸಿರುತ್ತವೆ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈಗ "ದಿನಾಂಕ ಮತ್ತು ಸಮಯ"ದ ನಿಲುವು(ಸೆಟ್ಟಿಂಗ್) ಪರದೆ ತೆರೆದುಕೊಳ್ಳುತ್ತದೆ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೧.೩. ಕೋರ್ಟಾನಾ ಮೂಲಕ

ಕೆಲಸದ ಪಟ್ಟಿ(ಟಾಸ್ಕ್ ಬಾರ್)ಯಲ್ಲಿ ಕಾಣುವ ಕೋರ್ಟಾನಾ ಗುಂಡಿಯನ್ನು ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈಗ ನೇರವಾಗಿ "Date and Time" ಎಂದು ಛಾಪಿಸಿ (ಟೈಪ್ ಮಾಡಿ). ಇದರಿಂದ "Date and Time" ಎನ್ನುವುದು ಆರಂಭದ ಮೆನುವಿನಲ್ಲಿ (ಸ್ಟಾರ್ಟ್ ಮೆನು) ಹುಡುಕಲ್ಪಟ್ಟು ಅದಕ್ಕೆ ಹೊಂದುವ ಎಲ್ಲಾ ಫಲಿತಾಂಶಗಳನ್ನು ತೋರಿಸಲಾಗುತ್ತದೆ.
ಕಾಣುವ ಫಲಿತಾಂಶಗಳಲ್ಲಿ ಚಿತ್ರವನ್ನು/ಐಕಾನ್ ಅನ್ನು ನೋಡಿ ಸರಿಯಾದ ಆಯ್ಕೆಯನ್ನು ಆರಿಸಿಕೊಳ್ಳಿ. ಏಕೆಂದರೆ ಫಲಿತಾಂಶಗಳಲ್ಲಿ ಕಾಣುವ ಬೇರೆ-ಬೇರೆ ಆಯ್ಕೆಗಳು ಬೇರೆ-ಬೇರೆ ಕೆಲಸಕ್ಕೆ ಸಂಭಂದಿಸಿರುತ್ತವೆ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈಗ "ದಿನಾಂಕ ಮತ್ತು ಸಮಯ"ದ ನಿಲುವು(ಸೆಟ್ಟಿಂಗ್) ಪರದೆ ತೆರೆದುಕೊಳ್ಳುತ್ತದೆ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೧.೪. ಕಂಟ್ರೋಲ್ ಪ್ಯಾನಲ್ ಮೂಲಕ

೧.೪.೧. ಕಂಟ್ರೋಲ್ ಪ್ಯಾನಲ್ನಲ್ಲಿರುವ ನೇರ ಕೊಂಡಿಯ ಮೂಲಕ

ಕಂಟ್ರೋಲ್ ಪ್ಯಾನಲ್ ಅನ್ನು ತೆರೆದು ಅದರ ಮುಖಪುಟದಲ್ಲಿ ಕಾಣುವ "Change date, time or number formats" ಕೊಂಡಿಯನ್ನು ಒತ್ತಿ. (ಕಂಟ್ರೋಲ್ ಪ್ಯಾನಲ್ ಅನ್ನು ತೆರೆಯಲು ವಿಂಡೋಸ್ ಗುಂಡಿಯನ್ನು ಒತ್ತಿ  "Control Panel" ಎಂದು ಹುಡುಕಿ)

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಇಲ್ಲಿ ನಿಮಗೆ ಗಡಿಯಾರ ಮತ್ತು ದಿನದರ್ಶಿಕೆಯನ್ನು ತೋರಿಸದೆ ನೇರವಾಗಿ "Region (ಪ್ರದೇಶ)"ದ ಪರದೆಗೆ ನಿಮ್ಮನ್ನು ಕೊಂಡೊಯ್ಯಲಾಗುತ್ತದೆ. ಇದರ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಅಧ್ಯಾಯ ೨ರಿಂದ ಸಿಗಬಹುದು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೧.೪.೨. ಕಂಟ್ರೋಲ್ ಪ್ಯಾನಲ್ನಲ್ಲಿ ಹುಡುಕುವ ಮೂಲಕ

ಕಂಟ್ರೋಲ್ ಪ್ಯಾನಲ್ ಅನ್ನು ತೆರೆದು ಅದರ ಮುಖಪುಟದಲ್ಲಿ ಬಲ-ಮೇಲ್ಬದಿಯಲ್ಲಿರುವ ಹುಡುಕು ಪಟ್ಟಿಯಲ್ಲಿ (ಸರ್ಚ್ ಬಾರ್ ನಲ್ಲಿ) "date and time" ಎಂದು ಹುಡುಕಿ. (ಕಂಟ್ರೋಲ್ ಪ್ಯಾನಲ್ ಅನ್ನು ತೆರೆಯಲು ವಿಂಡೋಸ್ ಗುಂಡಿಯನ್ನು ಒತ್ತಿ  "Control Panel" ಎಂದು ಹುಡುಕಿ)

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಕಾಣುವ ಫಲಿತಾಂಶಗಳಲ್ಲಿ "Date and Time" ಕೊಂಡಿಯನ್ನು ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈಗ "ದಿನಾಂಕ ಮತ್ತು ಸಮಯ"ದ ನಿಲುವು(ಸೆಟ್ಟಿಂಗ್) ಪರದೆ ತೆರೆದುಕೊಳ್ಳುತ್ತದೆ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೨. ಸ್ವರೂಪವನ್ನು ಕನ್ನಡಕ್ಕೆ ಹೊಂದಿಸಿ

ಹಿಂದಿನ ಅಧ್ಯಾಯಗಳಲ್ಲಿ (ಅಧ್ಯಾಯ ೧.೪.೧ ಹೊರತುಪಡಿಸಿ) ನೀವು ಕೆಳಗೆ ತೋರಿಸಿರುವ "Date and Time (ದಿನಾಂಕ ಮತ್ತು ಸಮಯದ)"ನ ಪರದೆಯನ್ನು ಹೇಗೆಲ್ಲಾ ತಲುಪಬಹುದು ಎಂದು ವಿವರಿಸಲಾಗಿದೆ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಪರದೆಯಲ್ಲಿ "Change date and time (ದಿನಾಂಕ ಮತ್ತು ಸಮಯವನ್ನು ಬದಲಿಸು)" ಗುಂಡಿಯನ್ನು ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈಗ ತೆರೆದುಕೊಳ್ಳುವ ಚಿಕ್ಕ ಪರದೆಯಲ್ಲಿ "Change calendar settings (ದಿನದರ್ಶಿಕೆಯ ನಿಲುವುಗಳನ್ನು ಬದಲಿಸಿ)" ಕೊಂಡಿಯನ್ನು ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಇದು ನಿಮಗೆ ನೇರವಾಗಿ ಎರಡೆರಡು ಪರದೆಗಳನ್ನು ತೆರೆಯುತ್ತದೆ. ಆದರೆ ನಮಗೆ ಮೊದಲು ಬೇಕಿರುವುದು "Region (ಪ್ರದೇಶ)"ನ ಪರದೆ. ಹಾಗಾಗಿ "Customize Format (ಸ್ವರೂಪ ಬದಲಿಸಿ)" ಪರದೆಯನ್ನು "Cancel (ರದ್ದುಮಾಡು)" ಗುಂಡಿಯನ್ನು ಒತ್ತುವ ಮೂಲಕ ಸಧ್ಯಕ್ಕೆ ಮುಚ್ಚಿಬಿಡಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈಗ "Region (ಪ್ರದೇಶ)" ಪರದೆಯಲ್ಲಿ "Format (ಸ್ವರೂಪ)"ವನ್ನು ಒತ್ತಿ, ತೆರೆದುಕೊಳ್ಳುವ ಪಟ್ಟಿಯಲ್ಲಿ "Kannada (India) {ಕನ್ನಡ (ಭಾರತ)}" ಎಂಬ ಸಾಲನ್ನು ಆಯ್ಕೆಮಾಡಿ ನಂತರ "Apply (ಅನ್ವಯಿಸು)" ಗುಂಡಿಯನ್ನು ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಬಹುತೇಕ ಅಕ್ಷರಗಳು ಕನ್ನಡಕ್ಕೆ ಬದಲಾಗುವುದನ್ನು ಗಮನಿಸಿ :)

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೩. ಅಂಕಿಗಳನ್ನು ಕನ್ನಡಕ್ಕೆ ಹೊಂದಿಸಿ

"Region (ಪ್ರದೇಶ)" ಪರದೆಯಲ್ಲಿ "Additional settings (ಹೆಚ್ಚಿನ ನಿಲುವುಗಳು)" ಗುಂಡಿಯನ್ನು ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈಗ "Customize Format (ಸ್ವರೂಪ ಬದಲಿಸಿ)" ಪರದೆಯು ತೆರೆದುಕೊಳ್ಳುತ್ತದೆ. ಇದರಲ್ಲಿ "Numbers (ಸಂಖ್ಯೆಗಳು)" ಟ್ಯಾಬಲ್ಲಿರುವ "Standard digits (ಪ್ರಮಾಣಿತ ಅಂಕಿಗಳು)" ಕನ್ನಡದಲ್ಲಿರುವುದನ್ನು ಖಾತ್ರಿಪಡಿಸಿಕೊಳ್ಳಿ (ಒಂದುವೇಳೆ ಅವುಗಳು ಇನ್ನೂ ಆಂಗ್ಲದಲ್ಲಿದ್ದರೆ ಆ ಪಟ್ಟಿಯಲ್ಲಿ ಕನ್ನಡದ ಅಂಕಿಗಳನ್ನು ಆಯ್ಕೆಮಾಡಿ).
"Use native digits (ಸ್ಥಳೀಯ ಅಂಕಿಗಳನ್ನು ಬಳಸು)" ಪಟ್ಟಿಯಲ್ಲಿ "National (ರಾಷ್ಟ್ರೀಯ)" ಆಯ್ಕೆಯನ್ನು ಆರಿಸಿಕೊಳ್ಳಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

"Measurement system (ಅಳತೆಯ ವ್ಯವಸ್ಥೆ)"ಯಲ್ಲಿ "Metric (ಮೆಟ್ರಿಕ್)" ಆಯ್ಕೆಮಾಡಿ, ನಂತರ "Apply (ಅನ್ವಯಿಸು)" ಗುಂಡಿಯನ್ನು ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಹುರ್ರೇ... ಈಗ ನಿಮ್ಮ ಗಣಕದ ಅಂಕಿ-ಸಂಖ್ಯೆಗಳೆಲ್ಲ ಕನ್ನಡದಲ್ಲಿ ಕಾಣುವುದನ್ನು ಗಮನಿಸಿ, ಆನಂದಿಸಿ:)

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೪. ರುಪಾಯಿ/ಹಣಕಾಸಿನ ಹೊಂದಾಣಿಕೆ

"Customize Format (ಸ್ವರೂಪ ಬದಲಿಸಿ)" ಪರದೆಯಲ್ಲಿ "Currency (ಹಣಕಾಸು)" ಟ್ಯಾಬಲ್ಲಿರುವ "Digit grouping (ಅಂಕಿಗಳ ವರ್ಗೀಕರಣ)" ಭಾರತೀಯ ಪ್ರಮಾಣಿತವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಿ (ಒಂದುವೇಳೆ ಅವುಗಳು ಇನ್ನೂ ಪಾಶ್ಚಾತ್ಯ ಪದ್ಧತಿಯಲ್ಲಿದ್ದರೆ ಆ ಪಟ್ಟಿಯಲ್ಲಿ ಭಾರತದ ಅಂಕಿಗಳ ವರ್ಗೀಕರಣವನ್ನು ಆಯ್ಕೆಮಾಡಿ).

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

"Currency Symbol (ಹಣಕಾಸಿನ ಚಿನ್ಹೆ)"ಯಲ್ಲಿ ರುಪಾಯಿ ಸಂಕೇತ()ವನ್ನು ಆಯ್ಕೆಮಾಡಿ ನಂತರ "Apply (ಅನ್ವಯಿಸು)" ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೫. ಸಮಯವನ್ನು ಕನ್ನಡಕ್ಕೆ ಹೊಂದಿಸಿ

"Customize Format (ಸ್ವರೂಪ ಬದಲಿಸಿ)" ಪರದೆಯಲ್ಲಿ "Time (ಸಮಯ)" ಟ್ಯಾಬಲ್ಲಿರುವ "Short time (ಸಂಕ್ಷಿಪ್ತ ಸಮಯ)"ದಲ್ಲಿ "tt hh:mm" ಆಯ್ಕೆಮಾಡಿ. ಇದರಿಂದ ನಿಮಗೆ ಸಮಯವು ೧೨ಗಂಟೆಯ ಸ್ವರೂಪದಲ್ಲಿ ಗೋಚರಿಸುತ್ತದೆ (ಪೂರ್ವಾಹ್ನ ೦೩:೦೦; ಅಪರಾಹ್ನ ೦೩:೦೦).

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

"Long time (ವಿಸ್ತೃತ ಸಮಯ)"ದಲ್ಲಿ "tt hh:mm:ss" ಆಯ್ಕೆಮಾಡಿ. ಇದರಿಂದ ನಿಮಗೆ ಸಮಯವು ಸೆಕೆಂಡುಗಳ ಸಹಿತ ೧೨ಗಂಟೆಯ ಸ್ವರೂಪದಲ್ಲಿ ಗೋಚರಿಸುತ್ತದೆ (ಪೂರ್ವಾಹ್ನ ೦೩:೧೭:೪೫; ಅಪರಾಹ್ನ ೦೩:೫೯:೦೧).

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

"AM symbol (ಪೂರ್ವಾಹ್ನದ ಸಂಕೇತ)"ನ ಪಟ್ಟಿಯಲ್ಲಿ "ಪೂರ್ವಾಹ್ನ"ವನ್ನು ಆರಿಸಿಕೊಳ್ಳಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

"PM symbol (ಅಪರಾಹ್ನದ ಸಂಕೇತ)"ನ ಪಟ್ಟಿಯಲ್ಲಿ "ಅಪರಾಹ್ನ"ವನ್ನು ಆರಿಸಿಕೊಳ್ಳಿ.
ನಂತರ "Apply (ಅನ್ವಯಿಸು)" ಗುಂಡಿಯನ್ನು ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಹುರ್ರೇ...... ನೀವೀಗ ಗಣಕದ ಸಮಯವನ್ನು ಕನ್ನಡಕ್ಕೆ ಹೊಂದಿಸಿರುವಿರಿ!

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

೬. ದಿನಾಂಕವನ್ನು ಕನ್ನಡಕ್ಕೆ ಹೊಂದಿಸಿ

"Customize Format (ಸ್ವರೂಪ ಬದಲಿಸಿ)" ಪರದೆಯಲ್ಲಿ "Date (ದಿನಾಂಕ)" ಟ್ಯಾಬಲ್ಲಿರುವ "Short date (ಸಂಕ್ಷಿಪ್ತ ದಿನಾಂಕ)"ದಲ್ಲಿ "dd-MM-yyyy" ಆಯ್ಕೆಮಾಡಿ. ಇದರಿಂದ ನಿಮಗೆ ದಿನಾಂಕವು "೨೧-೧೨-೨೦೧೮" ಸ್ವರೂಪದಲ್ಲಿ ಗೋಚರಿಸುತ್ತದೆ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

"Long date (ವಿಸ್ತೃತ ದಿನಾಂಕ)"ದಲ್ಲಿ "dd MMMM yyyy" ಆಯ್ಕೆಮಾಡಿ. ಇದರಿಂದ ನಿಮಗೆ ದಿನಾಂಕವು ತಿಂಗಳುಗಳ ಹೆಸರಿನ ಸಹಿತ "೨೧ ಡಿಸೆಂಬರ್ ೨೦೧೮" ಸ್ವರೂಪದಲ್ಲಿ ಗೋಚರಿಸುತ್ತದೆ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

"First day of week (ವಾರದ ಮೊದಲ ದಿನ)"ವನ್ನು "ಸೋಮವಾರ"ಕ್ಕೆ ಹೊಂದಿಸಿ.
ನಂತರ "Apply (ಅನ್ವಯಿಸು)" ಗುಂಡಿಯನ್ನು ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

"OK (ಸರಿ)" ಗುಂಡಿಯನ್ನು ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈಗ "Region (ಪ್ರದೇಶ)" ಪರದೆಯಲ್ಲಿ ಮೊದಲು "Apply (ಅನ್ವಯಿಸು)" ಗುಂಡಿಯನ್ನು ಒತ್ತಿ ನಂತರ "OK (ಸರಿ)" ಗುಂಡಿಯನ್ನು ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

"Date and Time Settings (ದಿನಾಂಕ ಮತ್ತು ಸಮಯದ ನಿಲುವುಗಳು)" ಪರದೆಯಲ್ಲಿ "OK (ಸರಿ)" ಗುಂಡಿಯನ್ನು ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

"Date and Time (ದಿನಾಂಕ ಮತ್ತು ಸಮಯದ)" ಪರದೆಯಲ್ಲಿ "OK (ಸರಿ)" ಗುಂಡಿಯನ್ನು ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಪೂರ್ತಿ ಗಣಕದ ಅಂಕಿ-ಸಂಖ್ಯೆ, ಸಮಯ-ದಿನಾಂಕ ಎಲ್ಲವೂ ಕನ್ನಡದಲ್ಲಿ ಗೋಚರಿಸುವುದನ್ನು ಕಂಡು ಆನಂದಿಸಿ ಮತ್ತು ಇದರ ಬಗ್ಗೆ ಇತರರಿಗೆ ಅರಿವನ್ನು ಮೂಡಿಸಿ :)

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಕನ್ನಡದಲ್ಲಿ ಬರೆಯುವುದು/ಛಾಪಿಸುವುದು/ಟೈಪ್ ಮಾಡುವುದು ಹೇಗೆಂದು ತಿಳಿಯಲು ಈ ಲೇಖನವನ್ನು ನೋಡಿ : "ಕನ್ನಡವನ್ನು ವಿಂಡೋಸ್ ಗಣಕದಲ್ಲಿ ಬಳಸುವ ವಿಧಾನ - ಹಳತು ಹೊನ್ನು"