ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು - ಹಳತು ಹೊನ್ನು

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಇವುಗಳು ಅನುದಿನವೂ ನಿಮ್ಮ ನೆನಪಿನಲ್ಲಿರಲಿ :

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

"ಸ್ವಾತಂತ್ರ್ಯವನ್ನು ಯಾರೂ ತಾವಾಗಿಯೇ ಕೊಡುವುದಿಲ್ಲ, ನಾವೇ ಅದನ್ನು ಪಡೆಯಬೇಕು"
"ಎಷ್ಟೋ ಸಮಯದ ಹಿಂದೆ, ಕೋಟ್ಯಾಂತರ ಜನ ತಮ್ಮ ಜೀವ & ಜೀವನವನ್ನೇ ತ್ಯಾಗ/ಬಲಿದಾನ ಮಾಡಿದುದರ ಪರಿಣಾಮವಾಗಿ ಇಂದು ನಾವು ಹೊಂದಿರುವುದೆಲ್ಲವು ನಮ್ಮ ಬಳಿಯಿದೆ"
"ಒಂದುಬಾರಿ ನಾವು ಒಬ್ಬರಿಂದ ಸ್ವಾತಂತ್ರ್ಯವನ್ನು ಪಡೆದ ಮಾತ್ರಕ್ಕೆ, ಅವರು (ಅಥವಾ ಬೇರೆಯವರು) ಮತ್ತೇ ನಮ್ಮ ಮೇಲೆ ಹಿಡಿತ ಸಾಧಿಸಲು, ನಮ್ಮನ್ನು ಹಾಳುಗೆಡವಲು ಬರುವುದಿಲ್ಲ ಎನ್ನುವಹಾಗಿಲ್ಲ"
"ಪ್ರತಿಯೊಂದಕ್ಕೂ ಅದರದೇ ಆದ ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳು ಇರುತ್ತವೆ, ನೀವು ಯಾವಾಗಲೂ ನಿಮ್ಮ ಮಾತೃಭೂಮಿಯ ದೌರ್ಬಲ್ಯಗಳನ್ನು ಭಾರತದ ಸಾಮರ್ಥ್ಯಗಳನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತೀರಿ"
"ದೇಶದಲ್ಲಿ ಏನಾದರು ಕೆಟ್ಟ ಘಟನೆ ಸಂಭವಿಸಿದರೆ ಅದನ್ನು ನೀವು ದೇಶದ ಒಳಗಡೆಯೇ ಸರಿಪಡಿಸಲು ಪ್ರಯತ್ನಿಸುತ್ತೀರಿ ಮತ್ತು ಅದರ ಬಗ್ಗೆ ಭಾರತೀಯರೊಂದಿಗಷ್ಟೇ ಚರ್ಚೆ ನಡೆಸುತ್ತೀರಿ. ದೇಶದಲ್ಲಿ ಏನಾದರು ಒಳ್ಳೆಯ ಘಟನೆ ನಡೆದರೆ ನೀವು ಆ ಒಳ್ಳೆಯ ವಿಷಯವನ್ನು ಗಡಿಯಾಚೆಗೂ ಹರಡುವಂತೆ ಮಾಡುತ್ತೀರಿ"
"ನೀವು ಎಂದಿಗೂ ನಿಮ್ಮ ಮಾತೆಯಂತಿರುವ ಭಾರತ ದೇಶದ ಬಗ್ಗೆ ಕಾಳಜಿ ಮತ್ತು ಪ್ರೀತಿಯನ್ನು ಕಡಿಮೆಮಾಡುವುದಿಲ್ಲ. ಸಮಾಜದಲ್ಲಿರುವ ದೇಶದ್ರೋಹಿ ಎಡಪಂತೀಯ ತೀವ್ರವಾದಿಗಳು ನಿಮ್ಮ ಹಾಗೂ ನಿಮ್ಮ ಮಾತೃಭೂಮಿ-ಭಾರತದ ಮಧ್ಯೆಯಿರುವ ತಾಯಿ-ಮಗುವಿನ ಸಂಬಂಧಕ್ಕೆ ಯಾವುದೇ ರೀತಿಯ ಅಡ್ಡಿಯಾಗುವುದಿಲ್ಲ"
"ವಿದೇಶಿ ದಾಸತ್ವದಿಂದ ಮುಕ್ತಿ ಪಡೆದ ಈ ಶುಭದಿನದಿಂದ ನೀವು ಸಾಧ್ಯವಾದ ಕಡೆಯಲ್ಲೆಲ್ಲ ಕನ್ನಡವನ್ನೇ ಬಳಸುತ್ತೀರಿ. ಆರಂಭದಲ್ಲಿ ಎಷ್ಟೇ ಕಷ್ಟವೆನಿಸಿದರೂ ಸಹ ನೀವು ಕನ್ನಡ ಬಳಸುವುದನ್ನು ನಿಲ್ಲಿಸುವುದಿಲ್ಲ. {ಕನ್ನಡವನ್ನು ಎಲ್ಲೆಲ್ಲಿ ಬಳಸಬಹುದು?}"
"ಇಲ್ಲಿ ಪಟ್ಟಿ ಮಾಡಿರುವ (ಆದರೆ ಅಲ್ಲಿಗೇ ಸೀಮಿತವಲ್ಲದ) ಮೂಢನಂಬಿಕೆಗಳಿಂದ ಮುಕ್ತರಾಗಿ ದಿನೇ-ದಿನೆ ಅಭಿವೃದ್ಧಿಯಾಗಬೇಕು"
"ಇದು ಕತ್ತಿ ಹಿಡಿದು ಹೋರಾಡುವ ಯುಗವಲ್ಲ, ಮತ್ತು ಈಗ ವೈರಿಗಳು ಕೈಯಲ್ಲಿ ಕತ್ತಿ ಹಿಡಿದು ನಮ್ಮ ಮೇಲೆ ಯುದ್ಧಕ್ಕೆ ಬರುವುದಿಲ್ಲ"
"ವಿದೇಶದ ಯಾವುದೇ ಪ್ರತ್ಯಕ್ಷ/ಪರೋಕ್ಷ ಹಿಡಿತದ ವಿರುದ್ಧ ನೀವು ಒಗ್ಗಟ್ಟಾಗಿ ನಿಲ್ಲುತ್ತೀರಿ"
"ಕ್ರೈಸ್ತರು ಯೇಸುವಿನ ನಾಮದಲ್ಲಿ ನೆನಪಿಸಿಕೊಳ್ಳುವ ಸಂಗತಿ - ಈಗ ವ್ಯಾಟಿಕನ್ ಎಂಬ ವಿದೇಶದ ದಾಸತ್ವದಿಂದ ಮುಕ್ತಿ ಪಡೆಯಲು ಕಾಲ ಸನ್ನಿಹಿತವಾಗಿದೆ (ಉಲ್ಲೇಖ)"

ಮತ್ತು... ಇಂದು (ಅಗಸ್ಟ್ ೧೫) ನಮ್ಮ ನಾಡಿನ ನಾಯಕರಲ್ಲಿ ಒಬ್ಬರಾದ ಸಂಗೊಳ್ಳಿ ರಾಯಣ್ಣನ ಜನ್ಮದಿನ :) - ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು, ನನ್ನ ನಾಯಕ!

ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.