ದಿನದರ್ಶಿಕೆ

ನೆನಪಿರಲಿ, ಹುರುಳಿಲ್ಲದ ಹಲವಾರು ಕಾರಣಗಳಿಂದ ನಾವೆಲ್ಲ (ಅಂದರೆ ಭಾರತೀಯರೆಲ್ಲ) ಇಂದು ವಿದೇಶಿಯರ ದಿನದರ್ಶಿಕೆಯನ್ನು ನಮ್ಮ ದಿನನಿತ್ಯದಲ್ಲಿ ಬಳಸುತ್ತಿದ್ದೇವೆ. ನಮಗೆ (ಕನ್ನಡಿಗರಿಗೆ ಅಥವಾ ಭಾರತೀಯರಿಗೆ) ನಮ್ಮದೇ ಆದ ದಿನದರ್ಶಿಕೆ ಎಷ್ಟೋ ಕಾಲದಿಂದ ಲಭ್ಯವಿದ್ದು, ಈಗಿನ ಎಷ್ಟೋ ಜನರಿಗೆ ಅದರ ಅರಿವೇ ಇಲ್ಲದಂತಿದೆ. ವಿಪರ್ಯಾಸವೆಂದರೆ, ನಮ್ಮ ಜೀವನಶೈಲಿಯನ್ನು ವಿದೇಶಿಯರಿಗೆ ಕಲಿಸಬೇಕಾದ ನಮ್ಮ ಸರ್ಕಾರಗಳು/ಸ್ವದೇಶಿ ಎನ್.ಜಿ.ಓ ಗಳು/ಇತರ ಸಂಸ್ಥೆಗಳು, ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದೆ ಪರಕೀಯರ ಜೀವನಶೈಲಿ ನಮ್ಮ ಸಮಾಜದಲ್ಲಿ ನುಸುಳುತ್ತಿದ್ದರೂ ಅದರ ಅರಿವೇ ಆಗದಂತೆ ಕುಳಿತಿವೆ!

ಸಂಕ್ಷಿಪ್ತವಾಗಿ ಹೇಳುವುದಾದರೆ, ನಮ್ಮ ದಿನದರ್ಶಿಕೆಯನ್ನು "ಪಂಚಾಂಗ"ವೆಂದು ಕರೆಯುತ್ತಾರೆ. ಪಂಚಾಂಗ - "ವಾರ, ತಿಥಿ, ನಕ್ಷತ್ರ, ಯೋಗ, ಕರಣ" ಎಂಬ ಪಂಚ ಅಂಗಗಳು. ಪಂಚಾಂಗವು ಲೂನಿಸೋಲಾರ್ ದಿನದರ್ಶಿಕೆಯಾಗಿದೆ, ಅಂದರೆ ಸೂರ್ಯ-ಚಂದ್ರ ಹಾಗು ತಾರೆಗಳ ಚಲನೆಯನ್ನಾಧರಿಸಿ ಸೂಕ್ತವಾದ ರೀತಿಯಲ್ಲಿ ನಮ್ಮ ಪಂಚಾಂಗವನ್ನು ಸಿದ್ಧಪಡಿಸಲಾಗುತ್ತದೆ. ಇದೇ ಕಾರಣದಿಂದ ನಮ್ಮ ಹಬ್ಬ-ಹರಿದಿನಗಳು ಪ್ರತೀವರ್ಷ ಒಂದೇ ನಿಷ್ಟಿತ ದಿನಾಂಕದಂದು ಬರುವುದಿಲ್ಲ, ಬದಲಿಗೆ ಆಯಾ ವರ್ಷದ ಸೂರ್ಯ-ಚಂದ್ರ-ತಾರೆಗಳ ಚಲನವಲನವನ್ನಾಧರಿಸಿ ಸೂಕ್ತವಾದ ಘಳಿಗೆಯಲ್ಲಿ ಜರುಗುತ್ತವೆ. ಸಧ್ಯಕ್ಕೆ ನನ್ನ ಬಳಿಯಿರುವ ಈ ಕೊಂಡಿಯು ನಿಮಗೆ ಪಂಚಾಂಗದ ಬಗ್ಗೆ ಹೆಚ್ಚಿನ ತಿಳುವಳಿಕೆಗೆ ನೆರವಾಗಬಹುದು. ಹಾಗೆಯೆ ಈ ದೃಶ್ಯವನ್ನು ನೋಡಿ-ತಿಳಿಯಲು ಮರೆಯದಿರಿ.

ಕ್ಷಮಿಸಿ, ಈ ಚಿತ್ರವನ್ನು ಕೆಳಗಿಳಿಸಲಾಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - Halatu Honnu

ಪ್ರಶ್ನೆಯೊಂದು ಉಳಿದಿದೆಯೇ? ನಮಗೆ ತಿಳಿಸಿ.

  ಉಲ್ಲೇಖಗಳು/ಹೆಚ್ಚಿನ ಮಾಹಿತಿ