ಗೂಗಲ್ ಕ್ರೋಮ್ ಬ್ರೌಸರ್ ನ ಆರಂಭಿಕ ಪುಟಗಳನ್ನು ನಿರ್ವಹಿಸಿ - ಹಳತು ಹೊನ್ನು

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ನಿಮ್ಮ ಗೂಗಲ್ ಕ್ರೋಮ್ ಬ್ರೌಸರನ್ನು ತೆರೆದ ತಕ್ಷಣ ತಾನಾಗಿಯೇ ಕೆಲವು ತಾಣಗಳು ತೆರೆದುಕೊಳ್ಳುತ್ತಿದ್ದು ಅವುಗಳನ್ನು ನಿಯಂತ್ರಿಸಲು ಅಥವಾ ನೀವು ಕ್ರೋಮನ್ನು ತೆರೆದ ತಕ್ಷಣ ಅಂತರ್ಜಾಲ ಮುಖಪುಟ (ಅಥವಾ ಒಂದು ನಿರ್ದಿಷ್ಟ ಪುಟ) ತಾನಾಗಿಯೇ ತೆರೆದುಕೊಳ್ಳುವಂತೆ ಮಾಡಲು ಈ ಲೇಖನವನ್ನು ಅನುಸರಿಸಿ.

ಹಂತ ೧:

ಗೂಗಲ್ ಕ್ರೋಮ್ ಸೆಟಿಂಗ್ಸ್ ತೆರೆಯಿರಿ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಹಂತ ೨:

"ಸ್ಟಾರ್ಟ್ಅಪ್ ನಲ್ಲಿ" >>> "ಒಂದು ನಿರ್ದಿಷ್ಟ ಪುಟ ಅಥವಾ ಪುಟಗಳ ಗುಂಪನ್ನು ತೆರೆ" ರೇಡಿಯೋ ಗುಂಡಿಯನ್ನು ಆಯ್ಕೆ ಮಾಡಿ, "ಪುಟಗಳನ್ನು ಹೊಂದಿಸಿ" ಕೊಂಡಿಯ ಮೇಲೆ ಒತ್ತಿ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಹಂತ ೩:

ಇಲ್ಲಿ ನೀವು ಈಗಾಗಲೇ ಇರುವ ಆರಂಭಿಕ ಪುಟಗಳು ಪಟ್ಟಿಯಾಗಿರುವುದನ್ನು ಕಾಣಬಹುದು.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಅವುಗಳಲ್ಲಿ ನಿಮಗೆ ಬೇಡವಾದವುಗಳನ್ನು ಎದುರಿಗಿರುವ ಮುಚ್ಚು ಗುಂಡಿ ಒತ್ತುವ ಮೂಲಕ ತೆಗೆದುಹಾಕಬಹುದು.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಅಥವಾ ನಿಮಗೆ ಬೇಕಾದ ಪುಟವನ್ನು ಈ ಪಟ್ಟಿಯಲ್ಲಿ ಸೇರಿಸಬಹುದು, ಅದರಿಂದ ಪ್ರತೀಬಾರಿ ನೀವು ಕ್ರೋಮನ್ನು ತೆರೆದಾಗ ಆ ಪುಟವು ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತದೆ. ಉದಾಹರಣೆಗಾಗಿ ನಾನಿಲ್ಲಿ ಕರ್ನಾಟಕ ಸರ್ಕಾರದ ತಾಣವನ್ನು ಹೊಸದಾಗಿ ಸೇರಿಸುತ್ತಿದ್ದೇನೆ. ಇದರಿಂದ ನಾನು ಮತ್ತೊಮ್ಮೆ ಕ್ರೋಮನ್ನು ತೆರೆದಾಗ ಇಲ್ಲಿರುವ ಮೂರೂ ಪುಟಗಳು ಸ್ವಯಂಚಾಲಿತವಾಗಿ ಮೂರು ಪ್ರತ್ಯೇಕ ಟ್ಯಾಬ್ಗಳಲ್ಲಿ ತೆರೆದುಕೊಳ್ಳುತ್ತವೆ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಹಂತ ೪:

ಪುಟಗಳನ್ನು ನಿಮ್ಮಿಷ್ಟದಂತೆ ಹೊಂದಿಸಿದ ನಂತರ "ಸರಿ" ಒತ್ತಿ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಹಂತ ೫:

ಕ್ರೋಮನ್ನು ಮುಚ್ಚಿ ಪುನಃ ತೆರೆಯಿರಿ ಮತ್ತು ನೀವು ಹೊಂದಿಸಿದ ಪುಟಗಳು ತಾವಾಗಿಯೇ ತೆರೆದುಕೊಳ್ಳುವುದನ್ನು ಗಮನಿಸಿ :)

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಏನಾದರೂ ತೊಂದರೆಯೇ? ಅಥವಾ ಪ್ರಶ್ನೆಯೊಂದು ಉಳಿದಿದೆಯೇ? ಹಾಗಿದ್ದರೆ ನಮಗೆ ತಿಳಿಸಿ.