ಲೇಖನದ ಪಠ್ಯಕ್ಕೆ ಮುಂದುವರಿಯುವ ಮೊದಲು ಕೆಳಗಿನ ಚಿತ್ರಗಳನ್ನು ಗಮನಿಸಿ. ಕ್ರೈಸ್ತ ಮಿಷನರಿಗಳು ಮತ್ತು ಕಮ್ಯುನಿಸ್ಟ್ ತೀವ್ರವಾದಿಗಳ ಕರಾಳ ಹಿಡಿತದಲ್ಲಿರುವ ದಕ್ಷಿಣ ಭಾರತದ ರಾಜ್ಯವಾದ ಕೇರಳವೇ ಇವುಗಳ ಮೂಲ.
ಈ ರೀತಿಯಲ್ಲಿ ಕ್ರೈಸ್ತ ಮಿಷನರಿಗಳು ತಪ್ಪು ಸಂದೇಶಗಳನ್ನು ಬಳಸಿ ಜನರ ದಾರಿತಪ್ಪಿಸಿ ಮತಾಂತರ ಮಾಡುತ್ತವೆ.
ನಾನು ಈ ಚಿತ್ರಗಳನ್ನು ವಾಟ್ಸಪ್ ಗುಂಪೊಂದರಲ್ಲಿ ನೋಡಿದಾಗ ಅವರಿಗೆ ಕೆಳಗಿನಂತೆ ಉತ್ತರನೀಡಿದೆ:
ನನಗೇನೋ ಅವೆಲ್ಲಾ ನಿಜ ಎಂದೆನಿಸುತ್ತಿಲ್ಲ!
ಏಕೆಂದರೆ...
ಆದ್ದರಿಂದ, ಒಳ್ಳೆಯವರಾಗಿ ಜೀವಿಸಿ ಮತ್ತು ಒಳ್ಳೆಯದನ್ನೇ ಮಾಡಿದರೆ ಅಷ್ಟೇ ಸಾಕು.
ಜಾತಿಯೊಂದನ್ನು ಪಾಲಿಸಲೇಬೇಕೆಂಬ ನಿಯಮವೇನಿಲ್ಲ.
ಏಕೆಂದರೆ, ದೇವರು ಈ ಜಗದ ಯಾವುದೇ ಜಾತಿಗಳಿಗೆ ಸೀಮಿತವಾಗಿಲ್ಲ.
ಈ ರೀತಿಯಲ್ಲಿ ಕ್ರೈಸ್ತ ಮಿಷನರಿಗಳು ತಪ್ಪು ಸಂದೇಶಗಳನ್ನು ಬಳಸಿ ಜನರ ದಾರಿತಪ್ಪಿಸಿ ಮತಾಂತರ ಮಾಡುತ್ತವೆ.
ನಾನು ಈ ಚಿತ್ರಗಳನ್ನು ವಾಟ್ಸಪ್ ಗುಂಪೊಂದರಲ್ಲಿ ನೋಡಿದಾಗ ಅವರಿಗೆ ಕೆಳಗಿನಂತೆ ಉತ್ತರನೀಡಿದೆ:
ನನಗೇನೋ ಅವೆಲ್ಲಾ ನಿಜ ಎಂದೆನಿಸುತ್ತಿಲ್ಲ!
ಏಕೆಂದರೆ...
- * "......ನಾವೆಲ್ಲರೂ ನರಕಕ್ಕೆ ಹೋಗುತ್ತಿದ್ದೇವೆ......" :- ನನ್ನ ಪ್ರಕಾರ, ನಾವು ಮಾಡುವ ಕಾರ್ಯಗಳ/ಕೆಲಸಗಳ ಆಧಾರದ ಮೇಲೆ ನಾವೆಲ್ಲ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತೇವೆ.
- * "......ದೇವರು ಬಂದು ನಮಗಾಗಿ ಸತ್ತರು......" :- ವಾಸ್ತವದಲ್ಲಿ, ತನ್ನ ಸೃಷ್ಟಿಯನ್ನು ಕಾಪಾಡಲು ದೇವರು ಸಾಯಬೇಕಾಗಿಲ್ಲ. ದೇವರು ಸಾಯದೇ, ತನ್ನ ಸೃಷ್ಟಿಯಾದ ನಮ್ಮನ್ನು ಕೆಟ್ಟದ್ದರಿಂದ ಕಾಪಾಡಬಲ್ಲರು.
- * "......ಯೇಸು ಒಬ್ಬರೇ ಕಾಪಾಡಬಲ್ಲರು......" :- ಒಂದುವೇಳೆ ನೀವು 'ದೇವರ ವಿವಿಧ ಅವತಾರಗಳಲ್ಲಿ ಯೇಸುವೂ ಒಂದು ಅವತಾರ' ಎಂದು ಹೇಳಿದರೆ ಅದನ್ನು ಒಪ್ಪಬಹುದೇನೋ. ಆದರೆ, ನೀವೇನಾದರೂ 'ಯೇಸುವೇ ದೇವರು ಅಥವಾ ಯೇಸುವಷ್ಟೇ ದೇವರ ಅವತಾರ' ಎಂದು ಒತ್ತಡ ಹೇರುವುದಾದರೆ ಖಂಡಿತವಾಗಿ ಅದನ್ನು ಒಪ್ಪಲಾಗದು. ಕೇವಲ ಕ್ರೈಸ್ತ ಜಾತಿಗೆ ಸೇರಿದ ಮಾತ್ರಕ್ಕೆ ಒಬ್ಬ ವ್ಯಕ್ತಿ ಸ್ವರ್ಗಕ್ಕೇ ಹೋಗಿಬಿಡುತ್ತಾನೆ ಎನ್ನುವುದು ಮುಟ್ಠಾಳತನ. ಅಂತೆಯೇ ಒಬ್ಬ ವ್ಯಕ್ತಿ ಕ್ರೈಸ್ತಜಾತಿಗೆ (ಯೇಸುವಿನ ಮರಣದ ಶತಮಾನಗಳ ನಂತರ ಯೇಸುವಿನ ಹೆಸರಲ್ಲಿ ಹುಟ್ಟುಹಾಕಲ್ಪಟ್ಟ ಒಂದು ಜಾತಿ) ಸೇರಿಲ್ಲ ಅಥವಾ ಕ್ರೈಸ್ತಜಾತಿಗೆ ಮತಾಂತರವಾಗಲು ವಿರೋಧಿಸಿದ ಎನ್ನುವ ಒಂದೇ ಕಾರಣಕ್ಕೆ ನರಕಕ್ಕೆ ಹೋಗುತ್ತಾನೆ ಎನ್ನುವುದೂ ಮೂರ್ಖತನವೇ ಸರಿ.
- * "......ಸಧ್ಯದರಲ್ಲೇ ಯೇಸು ಮರಳಿ ಹುಟ್ಟಿ ಬರುತ್ತಿದ್ದಾರೆ......" :- ನಿಖರವಾಗಿ ಯೇಸುವೇ ಬರುತ್ತಾರೆ ಎಂದೇನಿಲ್ಲ, ಆದರೆ ಮನುಷ್ಯ ತನ್ನ ಇತಿ-ಮಿತಿಗಳನ್ನು ಮೀರಿದರೆ ಖಂಡಿತವಾಗಿ ಅದನ್ನು ಸರಿಪಡಿಸಲು ದೇವರ ಇನ್ನೊಂದು ಅವತಾರದ ಉದಯವಾಗುತ್ತದೆ.
- * "......ಯೇಸು ಒಬ್ಬರೇ ದೇವರು ಅಥವಾ ಯೇಸು ಒಬ್ಬರೇ ದೇವರ ಅವತಾರ ಎಂದು ನಂಬಬೇಕು......" :- ಹಾಗಾದರೆ, ಯೇಸುವಿಗೆ ಮುಂಚೆ ಜೀವಿಸಿದ್ದ ಒಳ್ಳೆಯ ಜನರ ಕತೆ ಏನು? ಅವರೆಲ್ಲಾ ಕ್ರೈಸ್ತ ಜಾತಿಗೆ ಸೇರಿರಲಿಲ್ಲ ಎನ್ನುವ ಒಂದೇ ಕಾರಣಕ್ಕೆ ನರಕಕ್ಕೆ ಹೋಗಿರುವರೇನು? ಅವರಿಗೆ ಯೇಸುವಿನ ಬಗ್ಗೆ ತಿಳಿದೇ ಇರಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಅವರೆಲ್ಲಾ ನರಕಕ್ಕೆ ಹೋಗುವರೇನು?
- * "......ಸಾವನ್ನು ಸೋಲಿಸಿ ಚಿರಕಾಲ ಬದುಕಿ......" :- ನನಗನಿಸುತ್ತೆ ಇನ್ನುಮೇಲೆ ಪ್ರಪಂಚದ ವೈದ್ಯರಿಗೆಲ್ಲಾ ಕೆಲಸವೇ ಸಿಗುವುದಿಲ್ಲ/ಇರುವುದಿಲ್ಲ ಎಂದು! ಇಲ್ಲಿಯವರೆಗೆ ಇದ್ದು-ಸತ್ತು ಹೋಗಿರುವ ವ್ಯಾಟಿಕನ್ನಿನ ಪೋಪರೆಲ್ಲಾ ಎಲ್ಲಿ?
- * "......ಕಾಲ, ಗುಣ, ಸ್ಥಳ, ಜನ ಎಲ್ಲಾ ಬದಲಾಗಬಹುದು ಆದರೆ ಯೇಸು ಬದಲಾಗುವುದಿಲ್ಲ......" :- ಖಂಡಿತವಾಗಿ... ಒಬ್ಬ ವ್ಯಕ್ತಿ ತಾನು ಬದುಕಿರುವವರೆಗೆ ಮಾತ್ರ ಬದಲಾವಣೆ ಆಗಲು ಮತ್ತು ಬದಲಾವಣೆ ನಿರೀಕ್ಷಿಸಲು ಸಾಧ್ಯ.
- * "......ಸ್ವರ್ಗದಲ್ಲಿರುವ ದೇವರು ನಮಗೆ ಒಂದೇ ಆಯ್ಕೆಯನ್ನು ನೀಡಿದ್ದಾರೆ....." :- ವಾಸ್ತವದಲ್ಲಿ, ನಮ್ಮ ಜೀವನವೇ ನಾವು ಪ್ರತೀ ಘಳಿಗೆಯಲ್ಲಿ ಮಾಡುವ ಆಯ್ಕೆಗಳಿಂದ ತುಂಬಿದೆ. ಬೆಳಿಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಶುರುವಾಗಿ ರಾತ್ರಿ ಮರಳಿ ನಿದ್ದೆಗೆ ಜಾರುವವರೆಗೂ ಪ್ರತೀಕ್ಷಣ ಜೀವನ ಆಯ್ಕೆಗಳ ಆಟವಾಗಿದೆ. "ಒಮ್ಮೆ ಆಯ್ಕೆಮಾಡಿ ಮತ್ತು ಅನಿಯಮಿತವಾಗಿ ಆನಂದಿಸಿ" - ಇದು ಜನರನ್ನು ಮೂರ್ಖರನ್ನಾಗಿಸಲು ಮಾರಾಟಮಾಡಿದ ಭ್ರಮೆ ಅಷ್ಟೆ.
ಆದ್ದರಿಂದ, ಒಳ್ಳೆಯವರಾಗಿ ಜೀವಿಸಿ ಮತ್ತು ಒಳ್ಳೆಯದನ್ನೇ ಮಾಡಿದರೆ ಅಷ್ಟೇ ಸಾಕು.
ಜಾತಿಯೊಂದನ್ನು ಪಾಲಿಸಲೇಬೇಕೆಂಬ ನಿಯಮವೇನಿಲ್ಲ.
ಏಕೆಂದರೆ, ದೇವರು ಈ ಜಗದ ಯಾವುದೇ ಜಾತಿಗಳಿಗೆ ಸೀಮಿತವಾಗಿಲ್ಲ.