ಭಾರತದ ಬಿರುಕು - ಚಾಲಕ, ಆರಕ್ಷಕ ಮತ್ತು ಖಲಿಸ್ಥಾನ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
"ಪೋಲೀಸರಿಂದ ಸಿಖ್ ಚಾಲಕನಿಗೆ ಥಳಿತ" ಅಥವಾ "ಸಿಖ್ ಆಟೋ ಚಾಲಕನಿಗೆ ದೆಹಲಿಯ ಪೋಲೀಸರಿಂದ ಥಳಿತ" ಅಥವಾ "ಭಾರತದಲ್ಲಿ ಸಿಖ್ಖರು ಸುರಕ್ಷಿತವಾಗಿಲ್ಲ" ಇತ್ಯಾದಿ ಶೀರ್ಷಿಕೆಗಳಿಂದ ಪ್ರಸಿದ್ಧಿಯಾದ ಘಟನೆಯ ಬಗ್ಗೆ ನಿಮಗೆ ಅರಿವಿದೆ ಎಂದು ಭಾವಿಸುತ್ತೇವೆ. ಒಂದುವೇಳೆ ನಿಮಗೆ ಆ ಘಟನೆಯ ಬಗ್ಗೆ ಅರಿವಿಲ್ಲದಿದ್ದರೆ ಕೆಳಗಿರುವ ಉಲ್ಲೇಖಗಳನ್ನು ಜಾಲಾಡಿ.

  • ⚖   ೨೦೧೯ರ ಜೂನ್ ೧೬ರಂದು ಗೂಡ್ಸ್ ಗಾಡಿಯ ಚಾಲಕನೊಬ್ಬ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಾನೆ. ನಂತರ ತನ್ನ ಕಿರ್ಪನ್ ಅನ್ನು ಹೊರತೆಗೆದು ಪೋಲೀಸರ ಮೇಲೆ ದಾಳಿಗೆ ಮುಂದಾಗುತ್ತಾನೆ.
  • ⚖   ನಾವು-ನೀವೆಲ್ಲಾ ಊಹಿಸುವಂತೆಯೇ, 'ಪೋಲೀಸ್ ಇಲಾಖೆಯ ವಿರುದ್ಧ ದಾಳಿಗೆ ಶಸ್ತ್ರವನ್ನು ಬಳಸಿದ್ದು ತಪ್ಪು' ಎಂದು ತಿಳಿಸಲು ಪೋಲೀಸರು ಆ ಚಾಲಕನನ್ನು ಥಳಿಸುತ್ತಾರೆ.
  • ⚖   ಚಾಲಕ-ಪೋಲೀಸರ ಈ ಕಾದಾಟ ಇನ್ನೂ ನಡೆಯುತ್ತಿರುವಾಗಲೇ, ಚಾಲಕನ ಅಪ್ರಾಪ್ತ ವಯ್ಯಸ್ಸಿನ ಮಗ ರೋಷದಿಂದ ಗಾಡಿಯನ್ನು ಪೋಲೀಸರ ಮೇಲೆ ಹಾಯಿಸಲು ಮನಬಂದಂತೆ ಚಲಾಯಿಸುತ್ತಾನೆ. ಇದರಿಂದ ಕೆಲ ಪೋಲೀಸ್ ಅಧಿಕಾರಿಗಳಿಗೆ ಗಾಯವಾಗಿ, ಅವರ ಕೋಪ ನೆತ್ತಿಗೇರುತ್ತದೆ. ಅಪ್ರಾಪ್ತ ಮಗನ ಬುದ್ಧಿಗೇಡಿ ಕೆಲಸ ಆಗಲೇ ಕೋಪದಲ್ಲಿದ್ದ ಪೋಲೀಸರನ್ನು ಮತ್ತಷ್ಟು ಕೆರಳಿಸುತ್ತದೆ. ಇದರಿಂದಾಗಿ ಅವರು ಆ ಬಾಲಕನನ್ನು ಗಾಡಿಯಿಂದ ಹೊರಗೆಳೆದು 'ಪೋಲೀಸರ ವಿರುದ್ಧ ಸರ್ಕಸ್ ಮಾಡಲು ನೀನಿನ್ನೂ ಚಿಕ್ಕವನು' ಎಂದು ಸರಿಯಾಗಿ ಪಾಠ ಕಲಿಸುತ್ತಾರೆ!
  • ⚖   ಇಲ್ಲಿ ಗಮನಿಸಬೇಕಾದ ಅಂಶಗಳು:
    • ಚಾಲಕನು ಪೋಲೀಸರ ವಿರುದ್ಧ ಜಗಳಕ್ಕೆ ಶಸ್ತ್ರ/ಆಯುಧವನ್ನು ಬಳಸಿದ್ದು ತಪ್ಪು.
    • ಪೋಲೀಸರು ಆರೋಪಿಯನ್ನು ರಸ್ತೆಯಲ್ಲೇ ಮನಬಂದಂತೆ ಥಳಿಸುವ ಬದಲು ಅವನನ್ನು ಸರಿಯಾಗಿ ಬಂಧಿಸಿ ಈ ಘಟನೆಯನ್ನು ಸರಿಯಾದ ದಾರಿಯಲ್ಲಿ ನಿಭಾಯಿಸಬಹುದಿತ್ತು.
ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಮಾಧ್ಯಮಗಳ ಆಕ್ರೋಶ & ದೇಶದಲ್ಲಿ ಒಡಕು


  • ⚖   ಭಾರತದ ವಿಭಜನೆಗೆ ಪಣತೊಟ್ಟು ನಿಂತಿರುವ ದೇಶದ್ರೋಹಿಗಳ ಬೆಂಬಲದೊಂದಿಗೆ ತಮ್ಮನ್ನು ತಾವು ಬುದ್ಧಿಜೀವಿಗಳು, ಉದಾರವಾದಿಗಳು ಎಂದು ಬಿಂಬಿಸಿಕೊಳ್ಳುವ ನಮ್ಮ ದೇಶದ ಎಡಪಂಥೀಯ ಮಾಧ್ಯಮಗಳು ಈ ಘಟನೆಯನ್ನು ಯಥಾವತ್ತಾಗಿ ಬಿತ್ತರಿಸುವ ಬದಲು ಈ ಘಟನೆಯಲ್ಲಿ ಮೂಗುತೂರಿಸುವ ಕೆಲಸಕ್ಕೆ ಕೈಹಾಕುತ್ತವೆ.
  • ⚖   ಚಾಲಕ-ಪೋಲೀಸರ ನಡುವಿನ ಈ ಜಗಳವನ್ನು ಭಾರತ ವಿರೋಧಿ ಬಣಗಳು ದೇಶದಲ್ಲಿ ಒಡಕು ಮೂಡಿಸುವ ತಮ್ಮ ಕೆಲಸಕ್ಕೆ ಬಳಸಿಕೊಳ್ಳುತ್ತವೆ.
  • ⚖   ಭಾರತ ವಿರೋಧಿ ಶಕ್ತಿಗಳು ಈ ಘಟನೆಗೆ ಕೋಮುವಾದದ ಬಣ್ಣಹಚ್ಚಿ ಸಿಖ್ ಪಂಗಡವನ್ನು ದೇಶದ ವಿರುದ್ಧ ಎತ್ತಿಕಟ್ಟಲು ಕುತಂತ್ರ ನಡೆಸುತ್ತವೆ.
  • ⚖   ಪಾಕ್ ಬೆಂಬಲಿತ ಕಾಶ್ಮೀರ ಕಣಿವೆಯ ಪ್ರತ್ಯೇಕತಾವಾದಿಗಳು ಹಠಾತ್ತನೆ ಓಡಿಬಂದು ಆರೋಪಿ ಚಾಲಕನ ಪರವಾಗಿ ಪ್ರತಿಭಟನೆ ನಡೆಸುತ್ತವೆ (ಅವರು "ಏಕೆ" ಬೆಂಬಲಕ್ಕೆ ಓಡಿಬರುತ್ತಾರೆ ಎಂದು ನೀವು ಸರಳವಾಗಿಯೇ ಊಹಿಸಬಹುದು).
  • ⚖   ಜಾಲತಾಣಗಳಲ್ಲಿ ಭಾರತೀಯರಂತೆ ಮುಸುಕು ಹಾಕಿಕೊಂಡಿರುವ ನಕಲಿ ಖಾತೆಗಳು ದೇಶ & ದೇಶದ ಏಕತೆಯ ವಿರುದ್ಧ ದ್ವೇಷವನ್ನು ಬಿತ್ತರಿಸಲು ಆರಂಭಿಸಿದವು. ಈ ಘಟನೆಯನ್ನು ಬಳಸಿ ಸಿಖ್ ಜನರನ್ನು ಹಿಂಸೆಯ ದಾರಿಗೆ ಹೋಗುವಂತೆ ಉದ್ರೇಕಗೊಳಿಸಲಾಯಿತು.
  • ⚖   ಭಾರತ ವಿರೋಧಿ ಬಣಗಳು ಆ ಚಾಲಕನಿಗಿದ್ದ ಹಿಂದಿನ ಅಪರಾಧದ ದಾಖಲೆಗಳನ್ನು ಬೇಕಂತಲೇ ಸಾಮಾನ್ಯ ಜನರಿಂದ ಮುಚ್ಚಿಟ್ಟವು.
  • ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
  • ⚖   ಕೆಳಗಿನ ಚಿತ್ರವನ್ನು ನೋಡಿದತಕ್ಷಣ ನನ್ನ ಕಣ್ಣೆದುರು ಬಂದದ್ದು ಜವಾಹರಲಾಲ ನೆಹರು - ಜಮ್ಮು-ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದು ಮೂರ್ಖತನ ಪ್ರದರ್ಶಿಸಿದ ವ್ಯಕ್ತಿ - ನೆಹರುವಿನ ಆ ಮೂರ್ಖತನದಿಂದ ಕಾಶ್ಮೀರದಲ್ಲಿ ದೇಶದ ಏಕತೆ ಇವತ್ತಿನವರೆಗೂ ನಲುಗುತ್ತಿದೆ!
  • ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
  • ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
  • ⚖   ನಮಗೆಲ್ಲರಿಗೂ ತಿಳಿದಿರುವಂತೆಯೇ, ದೆಹಲಿಯ ಐಐಟಿ ಪದವೀಧರ ಮುಖ್ಯಮಂತ್ರಿ ಕೇವಲ ಪೋಲೀಸರನ್ನು ದೂಷಿಸಲು ಮುಂದಾಗುತ್ತಾನೆಯೇ ವಿನಃ ಅಪರಾಧಿ ಚಾಲಕ ಆಯುಧವನ್ನು ಬಳಸಿ ಪೋಲೀಸರ ಮೇಲೆ ಮಾಡಿದ ಧಾಳಿಯ ಬಗ್ಗೆ ಏನನ್ನೂ ಹೇಳುವುದಿಲ್ಲ (ನನಗನಿಸುತ್ತೆ ಈ ಕಾಂಗಿಗಳಿಗೆ ಮತ್ತು ಆಮ್-ಆದ್ಮಿ-ರಾಜಕಾರಣಿಗಳಿಗೆ ಓಲೈಕೆ & ಒಡೆದು ಆಳುವ ಕುತಂತ್ರಗಳಷ್ಟೇ ಗೊತ್ತಿವೆ ಅಂತ).
  • ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
  • ⚖   ಪೋಲೀಸರ ಮೇಲೆ ಅಪರಾಧಿ ಚಾಲಕ ಮತ್ತವನ ಅಪ್ರಾಪ್ತ ವಯ್ಯಸ್ಸಿನ ಮಗನಿಂದ ಹಲ್ಲೆ:
  • ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
  • ⚖   ಭಾರತ ವಿರೋಧಿ ಬಣಗಳು ಸಾಮಾಜಿಕ ತಾಣಗಳಲ್ಲಿ ದೇಶದಲ್ಲಿ ಒಡಕು ಮೂಡಿಸುವ ತಮ್ಮ ಕುತಂತ್ರವನ್ನು ಪಸರಿಸುವುದು:
  • ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
  • ⚖   ಕಾಶ್ಮೀರದಲ್ಲಿರುವ ಪಾಕ್ ಬೆಂಬಲಿತ ಪ್ರತ್ಯೇಕತಾವಾದಿಗಳು ಈ ಅಪರಾಧಿ ಚಾಲಕನ ಬೆಂಬಲಕ್ಕೆ ಓಡೋಡಿ ಬಂದುಬಿಡುತ್ತವೆ ಮತ್ತು ಸಿಖ್ ಜನರನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಹವಣಿಸುತ್ತವೆ:
  • ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
  • ⚖   ಅಪರಾಧದ ಹಿನ್ನೆಲೆಯುಳ್ಳ ಚಾಲಕ ಕಿರ್ಪನ್ ಬಳಸಿ ಪೋಲೀಸರ ಮೇಲೆ ಹಲ್ಲೆ ನಡೆಸುತ್ತಾನೆ:
  • ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಈ ಘಟನೆಯಿಂದ ಕಲಿಯಬಹುದಾದ ಪಾಠ

ಶ್ರೀ ಅಮಿತ್ ಶಾ ರವರು ಗೃಹ ಸಚಿವಾಲಯಕ್ಕೆ ಬಂದಾಗಿನಿಂದ ಭಾರತ ವಿರೋಧಿ ಬಣಗಳಿಗೆ ಪ್ರಾಣಸಂಕಟ ಶುರುವಾಗಿದೆ ಅದರಲ್ಲೂ ಮುಖ್ಯವಾಗಿ ಜಮ್ಮು-ಕಾಶ್ಮೀರ ಮತ್ತು ಪಶ್ಚಿಮ ಬಂಗಾಳದಲ್ಲಿ. ಪಾಕ್ ಬೆಂಬಲ ಹೊಂದಿರುವ ಕಾಶ್ಮೀರದ ಪ್ರತ್ಯೇಕತಾವಾದಿಗಳು ಕಣಿವೆಯಲ್ಲಿ ಕೊನೆಯ ಕ್ಷಣಗಳನ್ನು ಎನಿಸುತ್ತಿವೆ. ಅವರ ಇಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶವಿರೋಧಿ ಬಣಗಳು ಯಾವುದೇ ತರಹದ ಘಟನೆಯನ್ನು ತಮ್ಮ ಭಾರತ ವಿರೋಧಿ ಕೃತ್ಯಕ್ಕೆ ಬಳಸಿಕೊಳ್ಳಲು ತುದಿಗಾಲಮೇಲೆ ನಿಂತಿರುತ್ತವೆ. ಅವರ ಗುರಿ ಒಂದೇ - "ಹೇಗಾದರೂ ಸರಿ, ಭಾರತವನ್ನು ಒಡೆದುಹಾಕುವುದು".
ಕೇವಲ ಒಬ್ಬ ವ್ಯಕ್ತಿ ನಿಮ್ಮ ಜಾತಿ/ಮತ/ಪಂಗಡಕ್ಕೆ ಸೇರಿದವನು(ಳು) ಎನ್ನುವ ಕಾರಣಕ್ಕೆ ಕಣ್ಣುಮುಚ್ಚಿ ಅವನ(ಳ)ನ್ನು ಬೆಂಬಲಿಸಬೇಡಿ. ಯಾವುದೇ ತೀರ್ಮಾನಕ್ಕೆ ಬರುವಮೊದಲು ಸರಿಯಾಗಿ ಯೋಚಿಸಿ, ನಿಮ್ಮದೇ ಅನ್ವೇಷಣೆ ನಡೆಸಿ ಮತ್ತು ಘಟನೆಯನ್ನು ಸರಿಯಾಗಿ ಅವಲೋಕಿಸಿ.
ನೆನಪಿರಲಿ, ಒಡೆದು ಹಾಕುವುದು ಸುಲಭ ಆದರೆ ಒಂದುಗೂಡಿಸುವುದು ತುಂಬಾ ಕಷ್ಟ. ಮತ್ತು ಒಗ್ಗಟ್ಟಿನಿಂದಿರುವಾಗಷ್ಟೇ ನಮ್ಮಲ್ಲಿ ಬಲವಿರುತ್ತದೆ; ಒಡಕಿನಿಂದ ನಾವೆಲ್ಲಾ ನಾಶವಾಗಿ ಹೋಗುತ್ತೇವೆ ಮತ್ತು ಬೇಟೆಯಾಡುವ ನರಿಗಳಿಗೆ ಬಲಿಯಾಗುತ್ತೇವೆ (ಇದು ನಮ್ಮ ಇತಿಹಾಸದಲ್ಲಿ ಸರಳವಾಗಿ ಕಂಡುಬರುತ್ತದೆ; ಆದರೂ ನಾವು ಇತಿಹಾಸದಿಂದ ಪಾಠ ಕಲಿತಿಲ್ಲ).
ಯಾವ ದೇಶವೂ ಪರಿಪೂರ್ಣವಾಗಿಲ್ಲ. ಅಭಿವೃದ್ಧಿ ಹೊಂದಿದ್ದೇವೆ ಎಂದು ಹೇಳಿಕೊಳ್ಳುವ ದೇಶಗಳೂ ಸಹ ತಮ್ಮ-ತಮ್ಮ ಸಮಾಜಗಳನ್ನು ಸರಿಯಾಗಿ ನಿರ್ವಹಿಸಲು ಹೆಣಗಾಡುತ್ತಿವೆ. ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡಿ ಏಕೆಂದರೆ ಧರೆಯಮೇಲೆ ಭಾರತದಷ್ಟು ವೈವಿಧ್ಯತೆ ಹೊಂದಿರುವ ದೇಶ ಬೇರೊಂದಿಲ್ಲ. ಹೌದು, ೧೯೪೭ರಲ್ಲಿ ನಮ್ಮ ದೇಶವನ್ನು ಜಾತಿಯಾಧಾರದ ಮೇಲೆ ಒಡೆದುಹಾಕಿದ್ದು ಸರಿಯಲ್ಲ; ಅದರಂತೆಯೇ, ಆ ತಪ್ಪನ್ನು ಮತ್ತೇ ಮಾಡಿ ನಮ್ಮ ಮುಂದಿನ ಪೀಳಿಗೆಯವರು ನಮ್ಮನ್ನು ಶಪಿಸುವಂತೆ ಮಾಡುವುದು ಬೇಡ.
ಭಾರತ ವಿರೋಧಿ ಬಣಗಳು ಎಲ್ಲೆಡೆ ನೆಲೆಸಿವೆ - ದೇಶದ ಒಳಗೆ & ದೇಶದ ಹೊರಗೆ. ಆದ್ದರಿಂದ ರಾತ್ರಿ ಮುಗಿದು ಬೆಳಗಾಗುವಷ್ಟರಲ್ಲಿ ಪ್ರಸಿದ್ಧಿ ಪಡೆಯುವ ಘಟನೆಗಳ ಬಗ್ಗೆ ಎಚ್ಚರಿಕೆಯಿಂದಿರಿ. ಮಾಧ್ಯಮಗಳ ಮುಖ್ಯಾಂಶಗಳಿಗೆ ಮೌನ ಬಲಿಯಾಗಬೇಡಿ. ಹೆಚ್ಚಿನ ಸ್ಪಷ್ಟತೆಗೆ ಅವುಗಳನ್ನು ಪ್ರಶ್ನಿಸಿ.



"ಭಾರತದಲ್ಲಿ ಬಿರುಕು ಮೂಡಿಸುವ ವಿವಿಧ ಮಾರ್ಗಗಳು!"
ಎಂಬ ಲೇಖನಗಳ ಸರಣಿಯ ಭಾಗವಾಗಿ ಈ ಲೇಖನವನ್ನು ಪ್ರಕಟಿಸಲಾಗಿದೆ.

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು




  ಉಲ್ಲೇಖಗಳು/ಹೆಚ್ಚಿನ ಮಾಹಿತಿ  

  • ☞   Clashes Break Out Between Delhi Police And Protesters Over Attack On Father-son Duo In New Delhi
  • ☞   Sword-wielding man has history of assault, say cops
  • ☞   Clash between Sikh tempo driver, cops: Delhi Police submits report to MHA