ಈ ಸಲದ ಸ್ವಾತಂತ್ರ್ಯೋತ್ಸವ ವಿಶೇಷವಾದದ್ದು! ಮರುಒಂದಾದ ಭಾರತ! - ಹಳತು ಹೊನ್ನು

Unable to load this image! Please refresh the site (Ctrl+F5) - Halatu Honnu
ನೆಹರು ಮಾಡಿದ ತಪ್ಪುಗಳಲ್ಲಿ ಒಂದನ್ನು ಈಗ ಮೋದಿ ಸರ್ಕಾರ ಸರಿಪಡಿಸಿದೆ! ೩೭೦ನೇ ಕಲಂ ಕಸದಬುಟ್ಟಿಗೆ! ಮರುಒಂದಾದ ಭಾರತ! ಈ ಐತಿಹಾಸಿಕ ಕ್ಷಣವನ್ನು ಸಂಭ್ರಮದಿಂದ ಆಚರಿಸಬೇಕಾದ ದಿನವಿದು!

ಸಂವಿಧಾನದಿಂದ ಕಲಂ ೩೭೦ನ್ನು ತೆಗೆದುಹಾಕುವ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಶ್ರೀ. ಅಮಿತ್ ಶಾಹ್ರವರು ಇಂದು (೦೫-೦೮-೨೦೧೯) ಮಂಡಿಸಿದರು! ಈ ಐತಿಹಾಸಿಕ ಕ್ಷಣದಲ್ಲಿ, ಭಾರತದ ಈ ಮಹತ್ವದ ಘಟ್ಟದಿಂದ ದೇಶಕ್ಕೆ & ಕಾಶ್ಮೀರದ ಜನರಿಗೆ ಆಗುವ ಲಾಭಗಳನ್ನು ತಿಳಿದುಕೊಳ್ಳೋಣ.


ನೆನಪಿರಲಿ, ಇಲ್ಲಿಯವರೆಗೆ ಒಂದು ರಾಷ್ಟ್ರವಾಗಿ ನಾವೆಲ್ಲಾ ಅನುಭವಿಸಿದ ಸಮಸ್ಯೆಗಳಿಗೆಲ್ಲ ಮೂಲ ಕಾರಣ ನೆಹರುವಿನ ಕಲಂ ೩೭೦.



  •    "ಒಂದು ರಾಷ್ಟ್ರ; ಒಂದು ಕಾನೂನು" - ಇನ್ಮುಂದೆ ಕಾಶ್ಮೀರಕ್ಕೆ ಪ್ರತ್ಯೇಕವಾದ ಕಾನೂನುಗಳು ಅನ್ವಯವಾಗುವುದಿಲ್ಲ. ಇಲ್ಲಿಯವರೆಗೆ ನಾವು-ನೀವೆಲ್ಲಾ (ಅಂದರೆ ಇತರ ರಾಜ್ಯಗಳ ಜನರೆಲ್ಲಾ) ಪಾಲಿಸುತ್ತಿದ್ದ ದೇಶದ ನೀತಿ-ನಿಯಮಗಳನ್ನೇ ಇನ್ಮುಂದೆ ಕಾಶ್ಮೀರಿಗಳೂ ಸಹ ಪಾಲಿಸಬೇಕು.
  •    "ಈಗ ಯಾರು ಬೇಕಾದರೂ ಜ&ಕಾದಲ್ಲಿ ಹೋಗಿ ನೆಲೆಸಬಹುದು" - ಹೌದು, ಇಲ್ಲಿಯವರೆಗೆ ನೆಹರುವಿನ ೩೭೦ನೇ ಕಲಮಿನಿಂದಾಗಿ ಇತರ ರಾಜ್ಯಗಳ ಜನರಿಗೆ ಜಮ್ಮುಕಾಶ್ಮೀರಕ್ಕೆ ಹೋಗಿ ಅಲ್ಲಿ ಹೊಸ ಜೀವನ ಆರಂಭಿಸಲು ಅನುಮತಿ ಇರಲಿಲ್ಲ.
  •    "ಈಗ ಯಾರು ಬೇಕಾದರೂ ಕಾಶ್ಮೀರಕ್ಕೆ ಹೋಗಿ ವ್ಯಾಪಾರ ಮಾಡಬಹುದು" - ಇಲ್ಲಿಯವರೆಗೆ ನೆಹರುವಿನ ೩೭೦ನೇ ಕಲಮಿನಿಂದಾಗಿ ಇತರ ರಾಜ್ಯಗಳ ಜನರಿಗೆ ಕಾಶ್ಮೀರಕ್ಕೆ ಹೋಗಿ ವ್ಯಾಪಾರ ವಹಿವಾಟು ಮಾಡಲು ಸಾಧ್ಯವಿರಲಿಲ್ಲ.
  •    "ಈಗ ಯಾರು ಬೇಕಾದರೂ ಕಾಶ್ಮೀರದಲ್ಲಿ ಹೂಡಿಕೆ ಮಾಡಬಹುದು" - ಇಲ್ಲಿಯವರೆಗೆ ನೆಹರುವಿನ ೩೭೦ನೇ ಕಲಮಿನಡಿಯಲ್ಲಿ ಭಾರತದ ಇತರ ರಾಜ್ಯಗಳ ಜನರಿಗೆ ಕಾಶ್ಮೀರದಲ್ಲಿ ಹೂಡಿಕೆ ಮಾಡಲು ಅನುಮತಿ ಇರಲಿಲ್ಲ.
  •    "ಈಗ ಯಾರು ಬೇಕಾದರೂ ಕಾಶ್ಮೀರದಲ್ಲಿ ಭೂಮಿಯನ್ನು ಖರೀದಿಸಬಹುದು" - ಜಮ್ಮುಕಾಶ್ಮೀರವು ನಮ್ಮದೇ ದೇಶದ ರಾಜ್ಯವಾಗಿದ್ದರೂ ಸಹ, ನಾವು-ನೀವೆಲ್ಲಾ (ಅಂದರೆ ಇತರ ರಾಜ್ಯಗಳ ಜನರೆಲ್ಲಾ) ಕಾಶ್ಮೀರದಲ್ಲಿ ಜಮೀನು ಖರೀದಿಸಲು ನೆಹರುವಿನ ೩೭೦ನೇ ಕಲಂ ಬಿಡುತ್ತಿರಲಿಲ್ಲ.
  •    "ಈಗ ಯಾರು ಬೇಕಾದರೂ ಕಾಶ್ಮೀರಿ ಹೆಣ್ಣನ್ನು ಮದುವೆಯಾಗಬಹುದು" - ಹೌದು, ಇಲ್ಲಿಯವರೆಗೆ ನೀವು ಕಾಶ್ಮೀರಿ ಹೆಣ್ಣನ್ನು ಪ್ರೀತಿಸಿದ್ದರೆ ನಿಮ್ಮ ಮದುವೆಯ ಸಂಬಂಧಕ್ಕೆ ನೆಹರುವಿನ ೩೭೦ನೇ ಕಲಂ ಅಡ್ಡಿಗಾಲಾಗಿತ್ತು. ಇನ್ಮುಂದೆ ಕಾಶ್ಮೀರಿಗಳು ದೇಶದ ಯಾವುದೇ ಪ್ರಜೆಯನ್ನು ಬೇಕಾದರು ಮದುವೆಯಾಗಬಹುದು.
  •    "ನಮ್ಮ-ನಿಮ್ಮೆಲ್ಲರಂತೆ ಇನ್ಮುಂದೆ ಕಾಶ್ಮೀರಿಗಳು ದೇಶದ ಮುಖ್ಯವಾಹಿನಿಯಲ್ಲಿ ಸಮ-ಪಾಲುಗಾರರಾಗುತ್ತಾರೆ" - ಇಲ್ಲಿಯವರೆಗೆ ಕಾಶ್ಮೀರಿಗಳು ತಮ್ಮ ರಾಜ್ಯವನ್ನು ಬಿಟ್ಟು ಹೊರಗೆ ಬರಬೇಕೆಂದರೆ ಉಭಯ ಪೌರತ್ವದಂತಹ ಸಾಕಷ್ಟು ಕಟ್ಟುಪಾಡುಗಳನ್ನು ಎದುರಿಸಬೇಕಿತ್ತು. ಇನ್ಮೇಲೆ ಅವರೂ ಸಹ ನಮ್ಮೆಲ್ಲರಂತೆ ದೇಶದ ತುಂಬ ಮುಕ್ತವಾಗಿ ಚಲಿಸಬಹುದು.
  •    "ಇನ್ಮುಂದೆ ಕಾಶ್ಮೀರದಲ್ಲಿ ಸಾಂಸ್ಕೃತಿಕ ಏಕಸ್ವಾಮ್ಯವಿರುವುದಿಲ್ಲ" - ನೆಹರೂವಿನ ೩೭೦ನೆ ಕಲಮಿನ ಅಡಿಯಲ್ಲಿ ಜಮ್ಮುಕಾಶ್ಮೀರ ಸಾಂಸ್ಕೃತಿಕವಾಗಿ ಮೂಲೆಗುಂಪಾಗಿ ಏಕಸ್ವಾಮ್ಯಕ್ಕೆ ತಳ್ಳಲ್ಪಟ್ಟಿತ್ತು. ಅದರಿಂದಾಗಿ ದೇಶದ ಇತರ ಸಂಸ್ಕೃತಿಗಳೊಡನೆ ಸಂಪರ್ಕವನ್ನೇ ಕಳೆದುಕೊಂಡಿತ್ತು. ಈಗ ಹೊರಜಗತ್ತಿನ ಸಂಪರ್ಕದಿಂದಾಗಿ ಕಾಶ್ಮೀರದ ಸಂಸ್ಕೃತಿ ಏಳಿಗೆ ಹೊಂದಬಹುದು.
  •    "ಇನ್ಮುಂದೆ ಕಾಶ್ಮೀರದಲ್ಲಿ ಜಾತಿಯಾಧಾರಿತ ಏಕಸ್ವಾಮ್ಯವಿರುವುದಿಲ್ಲ" - ನೆಹರುವಿನ ೩೭೦ನೇ ಕಲಂ ಜಮ್ಮುಕಾಶ್ಮೀರದ ಚಿತ್ರಣವನ್ನು ನೀರಸ ಹಸಿರು ಬಣ್ಣದಂತೆ ಮಾಡಿಕೂರಿಸಿತ್ತು. ನಮ್ಮ ದೇಶದ ಇತರ ರಾಜ್ಯಗಳಲ್ಲಿ ಇರುವಂತೆ, ಈಗ ಯಾವುದೇ ಜಾತಿಯ ಜನ ಕಾಶ್ಮೀರದಲ್ಲಿಯೂ ಸಹ ನಿರಾಳವಾಗಿ ನೆಲೆಸಬಹುದು.
  •    "ಕಾಶ್ಮೀರಕ್ಕೆ ಇನ್ನಿಲ್ಲ ಪ್ರತ್ಯೇಕ ಸಂವಿಧಾನ" - ಹೌದು, ಬಾಬಾಸಾಹೇಬ ಅಂಬೇಡ್ಕರ್ ಅವರ ವಿರೋಧದ ನಡುವೆಯೂ ನೆಹರು ಮೊಂಡುತನ ತೋರಿಸಿ ೩೭೦ನೇ ಕಲಮನ್ನು ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಕೊಡುವುದರ ಜೊತೆಜೊತೆಗೆ ಅವರಿಗೊಂದು ಪ್ರತ್ಯೇಕ ಸಂವಿಧಾನವನ್ನೂ ಕೊಡುಗೆಯಂತೆ ಕೊಟ್ಟಿದ್ದರು. ಮೋದಿಯ ತಂಡಕ್ಕೆ (ಮೋದಿ, ಅಮಿತ್ ಶಾಹ್, ಅಜಿತ್ ದೋವಲ್ ಸಹಿತ ಎಲ್ಲ ನಾಯಕರು) ಧನ್ಯವಾದಗಳು, ನಮ್ಮ ದೇಶದಲ್ಲೀಗ ಒಂದೇ ಸಂವಿಧಾನ ಜಾರಿಗೆ ಬಂದಿತು.
  •    "ಒಂದು ದೇಶ; ಒಂದು ಧ್ವಜ" - ನೆಹರುವಿನ ೩೭೦ನೇ ಕಲಂ, ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜವನ್ನು ನೀಡಿತ್ತು. ನೆಹರು-ಗಾಂಧಿ ಕುಟುಂಬಗಳಿಗೆ & ಕಾಂಗ್ರೆಸ್ಸಿಗರಿಗೆ 'ಒಡೆದು-ಆಳುವ' ನೀತಿ ರಕ್ತದಲ್ಲೇ ಬಂದಂತಿದೆ; ಇದೇ ಕಾಂಗ್ರೆಸ್ ಪಕ್ಷ ಕರ್ನಾಟಕಕ್ಕೂ ಒಂದು ಪ್ರತ್ಯೇಕ ಧ್ವಜವನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ನಿಮಗೆ ನೆನಪಿರಬಹುದಲ್ಲ?! ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಸರ್ಕಾರಕ್ಕೆ ಪತ್ರಬರೆದು ಕಾಶ್ಮೀರದಂತೆ ಕರ್ನಾಟಕಕ್ಕೂ ಒಂದು ಪ್ರತ್ಯೇಕ, ಅಧಿಕೃತ ಧ್ವಜ ಬೇಕೆಂದು ಪ್ರಸ್ತಾವನೆ ಸಲ್ಲಿಸಿದಾಗ ನಾವು ಆ ವಿಷಯದ ಕುರಿತು ಲೇಖನವೊಂದನ್ನು ಪ್ರಕಟಿಸಿದ್ದೆವು. ಆ ಲೇಖನದ ಮೂಲಕ 'ಹೇಗೆ ಕಾಂಗ್ರೆಸ್ ಪಕ್ಷ ಕನ್ನಡಿಗರ ಮುಗ್ಧ ಭಾವನೆಗಳೊಂದಿಗೆ ಆಟವಾಡುತ್ತಿದೆ' ಎಂಬುದನ್ನು ವಿವರಿಸಿದ್ದೆವು. ಆ ಲೇಖನವನ್ನು ನೀವು ಇಲ್ಲಿ ಕಾಣಬಹುದು.
  •    "ಇನ್ಮೇಲೆ ಕಾಶ್ಮೀರದಲ್ಲಿ ಕಲ್ಲುತೂರಾಟ ಇರುವುದಿಲ್ಲ" - ಸ್ಥಳೀಯ ಕಾಶ್ಮೀರಿ ಯುವಕರು ನೆಹರುವಿನ ೩೭೦ನೆ ಕಲಮಿನಿಂದಾಗಿ ಕೆಲಸ ಸಿಗದೆಹೋಗಿದ್ದರು. ಪಾಕ್ ಬೆಂಬಲಿತ ಪ್ರತ್ಯೇಕತಾವಾದಿಗಳು ಈ ಪರಿಸ್ಥಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಂಡು, ಸ್ಥಳೀಯ ಯುವಕರಿಗೆ ಹಣದ ಆಸೆ ತೋರಿಸಿ, ಅವರನ್ನು ದೇಶದ ಸೈನಿಕರ ಮೇಲೆ ಕಲ್ಲು ತೂರಲು ಛೂಬಿಡುತ್ತಿದ್ದರು. ಈಗ ಸ್ಥಳೀಯ ಕಾಶ್ಮೀರಿ ಯುವಕರು ಕೇವಲ ಕಾಶ್ಮೀರದಲ್ಲಿ ಅಷ್ಟೇ ಅಲ್ಲದೆ ದೇಶದ ತುಂಬ ಎಲ್ಲಿಬೇಕಾದರು, ಯಾವುದೇ ಅಡೆತಡೆಗಳಿಲ್ಲದೆ ಕೆಲಸ ಕಂಡುಕೊಳ್ಳಬಹುದು.
  •    "ಆರ್ಥಿಕ ಸುಧಾರಣೆ" - ನೆಹರುವಿನ ೩೭೦ನೆ ಕಲಮಿನಿಂದಾಗಿ ಜಮ್ಮುಕಾಶ್ಮೀರವು ದೇಶದ ಇತರ ರಾಜ್ಯಗಳಂತೆ ಆರ್ಥಿಕ ಅಭಿವೃದ್ಧಿ ಸಾಧಿಸುವುದು ಕನಸಾಗಿತ್ತು. ಈಗ ಕಾಶ್ಮೀರವು ದೇಶದ ಇತರ ರಾಜ್ಯಗಳೊಂದಿಗೆ ವ್ಯಾಪಾರ-ವಹಿವಾಟು ನಡೆಸುವ ಮೂಲಕ ಆರ್ಥಿಕ ಸುಧಾರಣೆ ಕಾಣುವುದು ಸುಲಭ.
  •    "ಕಾಶ್ಮೀರಿಗಳಿಗೆ ದೊರಕಿದ ನಿಜವಾದ ಸ್ವಾತಂತ್ರ್ಯ" - ನೆಹರುವಿನ ೩೭೦ನೆ ಕಲಮಿನಿಂದಾಗಿ ಪಾಕ್ ಬೆಂಬಲಿತ ಪ್ರತ್ಯೇಕತಾವಾದಿಗಳು ಕಣಿವೆ ರಾಜ್ಯದಲ್ಲಿರುವ ಅಮಾಯಕ ಯುವಕರ ತಲೆಯಲ್ಲಿ ಜಾತಿಯಾಧಾರಿತ ವಿಷಬೀಜ ಬಿತ್ತಿ ತಮ್ಮ ಅಧಿಕಾರದ ದಾಹವನ್ನು ತೀರಿಸಿಕೊಳ್ಳುತ್ತಿದ್ದರು. ಈ ಪ್ರತ್ಯೇಕತಾವಾದಿಗಳು ಯುವಕರ ಕೈಗೆ ಬಂದೂಕು ಮತ್ತಿತರೆ ಆಯುಧಗಳನ್ನು ಕೊಟ್ಟು ಈ ಮುಗ್ಧ ಯುವಕರನ್ನು ದೇಶದ ಏಕತೆಯ ವಿರುದ್ಧ ಎತ್ತಿಕಟ್ಟುತ್ತಿದ್ದರು. ಈಗ ಜಮ್ಮುಕಾಶ್ಮೀರವು ಹಿಂಸೆ ಮತ್ತು ಕತ್ತಲೆಯಿಂದ ನಿಜವಾದ ಸ್ವಾತಂತ್ಯ್ರವನ್ನು ಪಡೆದಿದೆ. ದೇಶದ ಇತರ ಯುವಕರಂತೆ, ಕಾಶ್ಮೀರದ ಯುವಕರು ಸಹ ಈಗ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿ ಸಂತೋಷದಿಂದ ಬಾಳಬಹುದು!


ಹೆಚ್ಚಿನ ಮಾಹಿತಿ: