೨೦೨೦ಕ್ಕೆ ೨೦ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಕೆಲವರಿಗೆ ಕಥೆಗಳು ಇಷ್ಟವಾದರೆ, ಇನ್ನೂ ಕೆಲವರಿಗೆ ಸಾಕ್ಷ್ಯಚಿತ್ರಗಳು ಪ್ರೀಯವಾದವು. ೨೦೨೦ರಲ್ಲಿ ನೀವು ಓದಬಹುದಾದ, ಸಾಹಿತ್ಯದ ಬೇರೆ-ಬೇರೆ ವಿಧದ ಒಟ್ಟು ೨೦ ಕೃತಿಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ! ನೀವು ಯಾವುದೇ ಪುಸ್ತಕವನ್ನು ಓದಲು ನಿರ್ಧರಿಸಿದರೂ, ಅದನ್ನು ಖರೀದಿಸಿ (ಕಾಗದಬಂಧ ಅಥವಾ ಗಣಕ ಪ್ರತಿ) ಓದಲು ಮರೆಯದಿರಿ. ಇಲ್ಲಿರುವ ಪಟ್ಟಿಯನ್ನು ಯಾವುದೇ ಕ್ರಮದಲ್ಲಿ ಹೊಂದಿಸಿರುವುದಿಲ್ಲ. ಕೊಂಡುಕೊಳ್ಳಲು ಸರಳವಾಗಲೆಂದು ಆಯಾ ಪುಸ್ತಕದ ಕೆಳಗೆ ವಿವಿಧ ಮಾರುಕಟ್ಟೆಗಳ ಕೊಂಡಿಗಳನ್ನು ನೀಡಲಾಗಿದೆ.

 ☆ ಅಂತರಂಗದ ವಿಜ್ಞಾನ - ಆನಂದಕ್ಕೆ ಯೋಗಿಯ ಕೈಪಿಡಿ

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಈಶ-ಭಂಡಾರ  ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

ಅಂತರಂಗದ ವಿಜ್ಞಾನದ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಒತ್ತಿ. ಸದ್ಗುರುಗಳು ಈಶ ಪ್ರತಿಷ್ಠಾನದ ಮೂಲಕ ಅಂತರಂಗದ ವಿಜ್ಞಾನವನ್ನು ಕಲಿಸುತ್ತಾರೆ. ಲಭ್ಯವಿರುವ ದಿನಗಳನ್ನು ಕಂಡುಕೊಳ್ಳಿ.
@ಸದ್ಗುರುಟ್ವಿಟರ್  @ಈಶಪ್ರತಿಷ್ಠಾನಟ್ವಿಟರ್  @ಸದ್ಗುರುಇನ್ಸ್ಟಾಗ್ರಾಂ  @ಈಶಪ್ರತಿಷ್ಠಾನಇನ್ಸ್ಟಾಗ್ರಾಂ  @ಸದ್ಗುರುಫೇಸ್ಬುಕ್  @ಈಶಪ್ರತಿಷ್ಠಾನಫೇಸ್ಬುಕ್

 ☆ A Taste Of Well-Being

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್  ಈಶ-ಭಂಡಾರ

ನೀವು ತಿನ್ನುವ ಆಹಾರದ ಪರಿಣಾಮ ನಿಮ್ಮ ಮೇಲೆ ಇದ್ದೇ ಇರುತ್ತದೆ! ಅನಾರೋಗ್ಯಕ್ಕೆ ಮದ್ದನ್ನು ಹುಡುಕುವ ಬದಲು ಒಳ್ಳೆಯ ಆರೋಗ್ಯ ಕಾಯ್ದಿರಿಸುವುದು ಜಾಣತನ. ಈ ಪುಸ್ತಕದಲ್ಲಿ ಆರೋಗ್ಯಕರ ಮತ್ತು ರುಚಿಯಾದ ತಿಂಡಿ-ತಿನಿಸು-ಪಾನೀಯಗಳನ್ನು ಮಾಡುವ ಕ್ರಮಗಳಿವೆ. ಒಳ್ಳೆಯ ಆರೋಗ್ಯಕ್ಕೆ ಅವುಗಳನ್ನು ಪ್ರಯತ್ನಿಸಿ.
@ಸದ್ಗುರುಟ್ವಿಟರ್  @ಈಶಪ್ರತಿಷ್ಠಾನಟ್ವಿಟರ್  @ಸದ್ಗುರುಇನ್ಸ್ಟಾಗ್ರಾಂ  @ಈಶಪ್ರತಿಷ್ಠಾನಇನ್ಸ್ಟಾಗ್ರಾಂ  @ಸದ್ಗುರುಫೇಸ್ಬುಕ್  @ಈಶಪ್ರತಿಷ್ಠಾನಫೇಸ್ಬುಕ್

 ☆ ಆವರಣ - The Veil (English Version)

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ(ಆವರಣ)  ಫ್ಲಿಪ್ಕಾರ್ಟ್(ಆವರಣ)  ಅಮೇಝಾನ್-ಭಾರತ(The Veil)  ಫ್ಲಿಪ್ಕಾರ್ಟ್(The Veil)

ಜಾತಿ ಮತ್ತು ಇತಿಹಾಸದ ಕುರಿತು ಆವರಣ ಪುಸ್ತಕವು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಅಷ್ಟೆ ಅಲ್ಲದೆ ಅವುಗಳ ನಿಜವನ್ನು ಹೊರಹಾಕುತ್ತದೆ. ಭಾರತದಲ್ಲಿ ಪರದೇಶಿ ಮತಾಂಧರಿಂದ ನಡೆದ ದಬ್ಬಾಳಿಕೆಗಳನ್ನು ಬಹಿರಂಗಪಡಿಸಲು ಇತಿಹಾಸದ ಆಳಕ್ಕೆ ಇಳಿಯುತ್ತದೆ. ಕನ್ನಡ, ಗುಜರಾತಿ, ತಮಿಳು ಮತ್ತಿತರೆ ಭಾಷೆಗಳಲ್ಲಿ ಹೆಚ್ಚಿನ ಮಾರಾಟ ಕಂಡಿದೆ. ೨೦೦೭ರ ಫೆಬ್ರುವರಿಯಲ್ಲಿ ಅಧಿಕೃತವಾಗಿ ಲೋಕಾರ್ಪಣೆಗೊಳ್ಳುವ ಮೊದಲೇ ಆವರಣದ ಸಾಕಷ್ಟು ಪ್ರತಿಗಳು ಮಾರಾಟವಾಗಿದ್ದವು. ಲೋಕಾರ್ಪಣೆಗೊಂಡ ಐದೇ ತಿಂಗಳಲ್ಲಿ ಹತ್ತು ಬಾರಿ ಮರು-ಮುದ್ರಣಕ್ಕೆ ಬೇಡಿಕೆಗಳು ಈ ಗ್ರಂಥಕ್ಕೆ ದೊರಕಿವೆ.
@ಭೈರಪ್ಪ  @ಭೈರಪ್ಪನುಡಿ  #ಭೈರಪ್ಪ

 ☆ ಭಾರತ ಭಂಜನ - ದ್ರಾವಿಡ ಮತ್ತು ದಲಿತ ಬಿರುಕುಗಳಲ್ಲಿ ಪಾಶ್ಚಾತ್ಯರ ಕೈವಾಡ

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

ಇವತ್ತಿನ ದಿನಗಳಲ್ಲಿ ಪ್ರಚಲಿತದಲ್ಲಿರುವ ಯಾವುದೇ ವಿಷಯದ ಮೂಲ ಉಗಮ ಇತಿಹಾಸದಲ್ಲೆಲ್ಲೋ ಹುದುಗಿದೆ. ಕೆಲವೊಮ್ಮೆ "ಏಕೆ ಒಂದು ಘಟನೆ ಈ ರೀತಿ ನಡೆಯುತ್ತಿದೆ" ಎಂದು ಅವಲೋಕಣ ನಡೆಸಿದಾಗ ಆ ಘಟನೆಯ ಕುರಿತ ಹೆಚ್ಚಿನ ವಿಷಯ ತಿಳಿದುಬರುತ್ತದೆ.
ಪೂರ್ವಾತ್ಯ ಸಂಸ್ಕೃತಿಗಳಲ್ಲಿ ಪಾಶ್ಚಿಮಾತ್ಯರ ಹಸ್ತಕ್ಷೇಪದ ಕುರಿತು ತಿಳಿಯಿರಿ: 'ಭಾರತ ಭಂಜನ - ದ್ರಾವಿಡ ಮತ್ತು ದಲಿತ ಬಿರುಕುಗಳಲ್ಲಿ ಪಾಶ್ಚಾತ್ಯರ ಕೈವಾಡ' ಗ್ರಂಥವು ಹೇಗೆ ಪಾಶ್ಚಿಮಾತ್ಯ ಸಂಸ್ಥೆಗಳಾದ ಚರ್ಚ್, ಸಂಶೋಧಕರು ಮತ್ತು ಚಿಂತಕರು, ಪಾಶ್ಚಾತ್ಯ ಸರ್ಕಾರಗಳು ಮತ್ತಿತರೆ ಸಂಸ್ಥೆಗಳು ಒಟ್ಟಾಗಿ ಸೇರಿಕೊಂಡು ತಮ್ಮ ಜಾತಿ-ರಾಜಕೀಯ-ಸಂಪತ್ತಿನ ದಾಹದಿಂದ ಇಲ್ಲವಾಗಿದ್ದ ದ್ರಾವಿಡ ಮತ್ತು ದಲಿತ ಸಂಘರ್ಷವನ್ನು ಹುಟ್ಟುಹಾಕಿ ಭಾರತದ ಸಮಾಜದಲ್ಲಿ ಒಡಕು ಮತ್ತು ಒಳ-ಜಗಳಗಳು ಉದ್ಭವಿಸುವಂತೆ ಮಾಡಿದವು ಎನ್ನುವ ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ.
ಬರೋಬ್ಬರಿ ಅರ್ಧ ದಶಕದ ಸಂಶೋಧನೆ ಮತ್ತು ನಂಬಿಗಸ್ಥ ಮೂಲಗಳಿಂದ ಮಾಹಿತಿ ಸಂಗ್ರಹಣೆಯು 'ಭಾರತ ಭಂಜನ - ದ್ರಾವಿಡ ಮತ್ತು ದಲಿತ ಬಿರುಕುಗಳಲ್ಲಿ ಪಾಶ್ಚಾತ್ಯರ ಕೈವಾಡ' ಸಾಕ್ಷ್ಯಚಿತ್ರದ ಪರಿಪೂರ್ಣತೆಗೆ ಎಡೆಮಾಡಿಕೊಟ್ಟಿದೆ. 'ಸಮಾಜ ಸೇವೆಯ ಹೆಸರಿನಲ್ಲಿ' ವಿವಿಧ ವ್ಯಾಪಾರಿ ಗುಂಪುಗಳು (ಚರ್ಚ್, ಮಿಷನರಿಗಳು, ಪಾಶ್ಚಾತ್ಯ ಸರ್ಕಾರಗಳು) ಬಿಟ್ಟುಹೋದ ವಂಚನೆಯ ಜಾಡನ್ನು ಇಲ್ಲಿ ಸಂಶೋಧಕರು ಹಿಂಬಾಲಿಸುತ್ತಾರೆ. ಈ ಗುಂಪುಗಳಲ್ಲಿರುವ ವ್ಯವಹಾರಗಳ ಸ್ಥಿತಿಗತಿಗಳ ಮೇಲೆ ಸ್ಪಷ್ಟ ದೃಷ್ಟಿಕೋನವನ್ನು ಈ ಪುಸ್ತಕ ನೀಡುತ್ತದೆ.
@ರಾಜೀವ್-ಮಲ್ಹೋತ್ರಾ-ಟ್ವಿಟರ್  @ಇನ್ಫಿನಿಟಿ-ಫೌಂಡೇಶನ್-ಟ್ವಿಟರ್  @ರಾಜೀವ್-ಮಲ್ಹೋತ್ರಾ-ಫೆಸ್ಬುಕ್  @ರಾಜೀವ್-ಮಲ್ಹೋತ್ರಾ-ಜಾಲತಾಣ  @ಇನ್ಫಿನಿಟಿ-ಫೌಂಡೇಶನ್-ಇನ್ಸ್ಟಾಗ್ರಾಂ  @ರಾಜೀವ್-ಮಲ್ಹೋತ್ರಾ-ಯೂಟ್ಯೂಬ್  @ಇನ್ಫಿನಿಟಿ-ಫೌಂಡೇಶನ್ನಿನ-ಜಾಲತಾಣ

 ☆ Decolonizing The Hindu Mind (ಹಿಂದು ಮನಸ್ಸನ್ನು ಸ್ವತಂತ್ರಗೊಳಿಸುವುದು)

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

ಹಿಂದು ಪುನರುಜ್ಜೀವನದ ಕುರಿತು ನಡೆಯುತ್ತಿರುವ ಚರ್ಚೆಗಳು ಹಿಂದು ಪುನರುಜ್ಜೀವನದ ಸೈದ್ಧಾಂತಿಕ ಆಯಾಮವನ್ನು ತಪ್ಪಾಗಿ ನಿರೂಪಿಸುತ್ತಿವೆ ಅಥವಾ ಮೂಲ ಉದ್ದೇಶವನ್ನು ಸಂಪೂರ್ಣ ನಿರ್ಲಕ್ಷಿಸುತ್ತಿವೆ. ಹಿಂದು ಪುನರುಜ್ಜೀವನದ ಸಿದ್ಧಾಂತ ಪ್ರತಿಪಾದಕರು ಮತ್ತು ಅದರ ವಿರೋಧಿಗಳ ಹೇಳಿಕೆಗಳನ್ನು ಚೆನ್ನಾಗಿ ವಿಶ್ಲೇಷಿಸಿ ಅದರಿಂದ ಹೊರಬರುವ ಯೋಚನೆ/ಯೋಜನೆಗಳ ಕುರಿತು ಡಾ. ಕೊಯೆನ್ರಾಡ್ ಎಲ್ಸ್ಟ್ ರವರು ಅವಲೋಕನ ನಡೆಸುತ್ತಾರೆ.
@ಕೊಯೆನ್ರಾಡ್-ಎಲ್ಸ್ಟ್-ಟ್ವಿಟರ್  @ಕೊಯೆನ್ರಾಡ್-ಎಲ್ಸ್ಟ್-ಜಾಲತಾಣ

 ☆ ವಿಭಿನ್ನತೆ - ಪಾಶ್ಚಾತ್ಯ ಸಾರ್ವತ್ರಿಕತೆಗೆ ಭಾರತೀಯರ ಸವಾಲು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

'ವಿಭಿನ್ನತೆ: ಪಾಶ್ಚಾತ್ಯ ಸಾರ್ವತ್ರಿಕತೆಗೆ ಭಾರತೀಯರ ಸವಾಲು' ಪುಸ್ತಕದಲ್ಲಿ ಕಪಿಲ ವಾತ್ಸ್ಯಾಯಣ - "ಏಕೈಕ ಸಾರ್ವತ್ರಿಕತೆಯನ್ನು ಪ್ರಸ್ತಾಪಿಸಲಾಗುತ್ತಿರುವ ಇಂದಿನ ದಿನಗಳಲ್ಲಿ ರಾಜೀವ್ ಮಲ್ಹೋತ್ರಾ ಅವರ 'ಮಿತಿಮೀರಿದ ಸಹನೆಯನ್ನು ತೋರಿಸುತ್ತಾ ನಶಿಸಿಹೋಗುವ ಬದಲು ಪರಸ್ಪರ ಗೌರವದೊಂದಿಗೆ ವಿವಿಧತೆಗಳನ್ನು ಕಾಪಾಡಿಕೊಳ್ಳುವ' ಆಗ್ರಹ ಸಮಂಜಸವಾಗಿದೆ. ಏಕೈಕ ಸಾರ್ವತ್ರಿಕತೆ ಎಂಬುದು ನೈಜವಾಗಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಏಕೆಂದರೆ, ಯಾವುದೇ ಸಾರ್ವತ್ರಿಕ ಯೋಜನೆ/ಯೋಚನೆಯು ಇತರ ನಾಗರಿಕತೆಗಳ ಅಂಶಗಳನ್ನು ತನ್ನಲ್ಲಿ ಒಳಗೊಂಡೆ ರೂಪ ತಾಳಿರುತ್ತದೆ."
@ರಾಜೀವ್-ಮಲ್ಹೋತ್ರಾ-ಟ್ವಿಟರ್  @ಇನ್ಫಿನಿಟಿ-ಫೌಂಡೇಶನ್-ಟ್ವಿಟರ್  @ರಾಜೀವ್-ಮಲ್ಹೋತ್ರಾ-ಫೆಸ್ಬುಕ್  @ರಾಜೀವ್-ಮಲ್ಹೋತ್ರಾ-ಜಾಲತಾಣ  @ಇನ್ಫಿನಿಟಿ-ಫೌಂಡೇಶನ್-ಇನ್ಸ್ಟಾಗ್ರಾಂ  @ರಾಜೀವ್-ಮಲ್ಹೋತ್ರಾ-ಯೂಟ್ಯೂಬ್  @ಇನ್ಫಿನಿಟಿ-ಫೌಂಡೇಶನ್ನಿನ-ಜಾಲತಾಣ

 ☆ Academic Hinduphobia (ಶೈಕ್ಷಣಿಕ ವಲಯದಲ್ಲಿ ಹಿಂದುತ್ವದ ತಿರಸ್ಕಾರ)

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ರಾಜೀವ್-ಮಲ್ಹೋತ್ರಾ-ಜಾಲಂಗಡಿ

ಪಕ್ಷಪಾತಿ ಶಿಕ್ಷಣ ತಜ್ಞರ ಕೆಲಸಗಳನ್ನು ಗಮನಿಸುತ್ತಾ ಎರಡು ದಶಕಗಳವರೆಗೆ ಅಮೆರಿಕದಲ್ಲಿ ನೆಲೆಸಿರುವ ಸ್ವತಂತ್ರ ವಿದ್ವಾಂಸರೊಬ್ಬರು ರಾಜೀವ್ ಮಲ್ಹೋತ್ರಾ ಅವರೊಂದಿಗೆ ನಡೆಸಿದ ಸಂದರ್ಶನವನ್ನು ಈ ಸಂಕಲನವು ಒಳಗೊಂಡಿದೆ.
@ರಾಜೀವ್-ಮಲ್ಹೋತ್ರಾ-ಟ್ವಿಟರ್  @ಇನ್ಫಿನಿಟಿ-ಫೌಂಡೇಶನ್-ಟ್ವಿಟರ್  @ರಾಜೀವ್-ಮಲ್ಹೋತ್ರಾ-ಫೆಸ್ಬುಕ್  @ರಾಜೀವ್-ಮಲ್ಹೋತ್ರಾ-ಜಾಲತಾಣ  @ಇನ್ಫಿನಿಟಿ-ಫೌಂಡೇಶನ್-ಇನ್ಸ್ಟಾಗ್ರಾಂ  @ರಾಜೀವ್-ಮಲ್ಹೋತ್ರಾ-ಯೂಟ್ಯೂಬ್  @ಇನ್ಫಿನಿಟಿ-ಫೌಂಡೇಶನ್ನಿನ-ಜಾಲತಾಣ

 ☆ History of India as it Happened not as it has been written

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

ಭಾರತದ ಇಂದಿನ ಮಕ್ಕಳು (ಮುಂದಿನ ಸಮಾಜ & ದೇಶ) ತಾವು ಯಾರು ಮತ್ತು ತಮ್ಮ ದೇಶ ನಡೆದು ಬಂದ ದಾರಿ ಯಾವುದು ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಭಾರತದ ಇತಿಹಾಸವನ್ನು ಈ ನವಯುಗದ ಭಾಷಾ ಮತ್ತು ಪುರಾತತ್ವದ ಆವಿಷ್ಕಾರಗಳನ್ನು ಅವಲಂಭಿಸಿ ಮರು-ರಚಿಸುವ ಅಗತ್ಯವಿದೆ. ತುಚ್ಛೀಕರಿಸುವ ಉದ್ದೇಶದಿಂದ ಭಾರತೀಯ ನಾಗರಿಕತೆಯ ದಿನಾಂಕಗಳನ್ನು ಕಡಿಮೆ ಮಾಡಿ ಪಾಶ್ಚಾತ್ಯ ವಸಾಹತುಗಾರರು ಭಾರತದ ಇತಿಹಾಸವನ್ನು & ಅದರ ಅವಧಿಗಳನ್ನು ತಿರುಚಿರುವುದು ಈಗ ನಮಗೆಲ್ಲಾ ತಿಳಿದ ವಿಷಯ.
ಆದರೆ ದುರದೃಷ್ಟವಶಾತ್, ತಮ್ಮ ಸ್ವಾರ್ಥ ಸಾಧನೆಗೆ ವಿವಿಧ ತಲೆಮಾರುಗಳ ಇತಿಹಾಸಕಾರರು ಭಾರತ ನಾಗರಿಕತೆಯ ಕುರಿತು ಸುಳ್ಳು/ತಪ್ಪು ಸಿದ್ಧಾಂತಗಳನ್ನು ಅನುಮೋದಿಸುತ್ತಾ ಅವರ ಸುಳ್ಳು ಕಥೆಗಳೇ ಶಾಶ್ವತವಾಗುವಂತೆ ನೋಡಿಕೊಂಡರು. ಇತಿಹಾಸಕಾರರ ಇಂತಹ ಸುಳ್ಳು ಕಥೆಗಳಲ್ಲಿ ಭಾರತವನ್ನು ತುಂಬಾ ಹಾಳುಗೆಡವಿದ ಕಥೆ "ಆರ್ಯರ ಆಕ್ರಮಣದ ಕಥೆ". ಈ ಕಟ್ಟುಕತೆಯ ಪ್ರಕಾರ ಭಾರತದ ಮೂಲ ನಿವಾಸಿಗಳು ಅತೀ ಹಿಂದುಳಿದವರಾಗಿ ಜೀವನ ತಳ್ಳುತ್ತಿರುವಾಗ ಐರೋಪ್ಯ-ಪಶ್ಚಿಮ ಏಷ್ಯಾದಿಂದ ಬಂದ ಆಕ್ರಮಣಕಾರರು ಭಾರತಕ್ಕೆ ವಿದ್ಯೆ-ವೈವಿಧ್ಯತೆ ಇತ್ಯಾದಿಗಳನ್ನೆಲ್ಲಾ ತಂದರು.
ಈ ಒಂದು ಕಟ್ಟುಕತೆಯು ಭಾರತದಲ್ಲಿ "ಉತ್ತರ-ದಕ್ಷಿಣ, ಆರ್ಯ-ದ್ರಾವಿಡ, ಬ್ರಾಮ್ಹಣ-ಇತರೆ, ಆರ್ಯರು-ಶೂದ್ರರು" ಹೀಗೆ ನಾನಾ ಸ್ಥರಗಳಲ್ಲಿ ಒಡಕುಂಟುಮಾಡಿ ಭಾರತದ ಏಕತೆಗೆ ಬಲವಾದ ಪೆಟ್ಟುಕೊಟ್ಟಿದೆ. ಇಂತಹ ಸನ್ನಿವೇಶದಲ್ಲಿ ಈ ಪುಸ್ತಕವು ಭಾರತದ ಮುಂದಿನ ಪೀಳಿಗೆಯ ಇತಿಹಾಸಕಾರರಿಗೆ ಭದ್ರ ಬುನಾದಿ ಹಾಕುತ್ತದೆ.
@ಫ್ರಾಂಕಾಯ್ಸ್-ಗಾಶರ್-ಬ್ಲಾಗ್  @ಫ್ರಾಂಕಾಯ್ಸ್-ಗಾಶರ್-ಇನ್ಸ್ಟಾಗ್ರಾಂ  @ಫ್ರಾಂಕಾಯ್ಸ್-ಗಾಶರ್-ಟ್ವಿಟರ್  @ಫ್ರಾಂಕಾಯ್ಸ್-ಗಾಶರ್-ಫೇಸ್ಬುಕ್

 ☆ ಅಬಚೂರಿನ ಪೋಸ್ಟ್ ಆಫೀಸು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

ಈ ಕಾದಂಬರಿಯನ್ನು ಆಧಾರವಾಗಿಸಿಕೊಂಡು ಸಾಕಷ್ಟು ಚಲನಚಿತ್ರಗಳು ಬಿಡುಗಡೆಗೊಂಡಿವೆ.
@ಪೂರ್ಣಚಂದ್ರತೇಜಸ್ವಿ  @ಪೂರ್ಣಚಂದ್ರತೇಜಸ್ವಿ

 ☆ ದಾಟು - Crossing Over

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

"ಕೆಲವೇ-ಕೆಲವು ಪುಸ್ತಕಗಳು ನಿಮ್ಮನ್ನು ಮರಳಿ ತಮ್ಮೆಡೆಗೆ ಸೆಳೆಯುತ್ತವೆ. 'ದಾಟು' ಅಂತಹ ಪುಸ್ತಕಗಳಲ್ಲಿ ಒಂದು. ಬೇರೆಬೇರೆ ಪಾತ್ರಗಳ ಮೂಲಕ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿ ಪದ್ಧತಿಯನ್ನು ಈ ಪುಸ್ತಕ ವಿಶ್ಲೇಷಿಸುತ್ತದೆ. ನಿಜವಾದ ಸಮಾನತೆ ಎಂಬುದು ಕಾಲ್ಪನಿಕ ಮತ್ತದನ್ನು ನಿಜವಾಗಿ ಸಾಧಿಸಲು ಎಂದಿಗೂ ಆಗುವುದಿಲ್ಲ ಎಂದು ಈ ಗ್ರಂಥದ ಕೊನೆಯ ಹಂತಗಳಲ್ಲಿ ಎಲ್ಲರಿಗೂ ಮನವರಿಕೆಯಾಗುತ್ತದೆ. ಮೋಹನದಾಸನೊಡನೆ ನಡೆಸಿದ ಚರ್ಚೆಗಳಿಂದ 'ಹತ್ತಿಕಲ್ಪಟ್ಟವರು ನಾಳೆ ಬೇರೆ ಯಾರನ್ನೊ ಹತ್ತಿಕುತ್ತಾರೆ' ಎಂಬುದನ್ನು ಸತ್ಯನು ಅರಿತುಕೊಂಡತೆಯೇ, ಎಲ್ಲವೂ ಸಮಾನವಾಗಿಯೇ ಇರಬೇಕೆಂಬುದು ಪ್ರಕೃತಿಯಲ್ಲಿ ಸಹಜವಾಗಿ ಎಲ್ಲೂ ಇಲ್ಲ. ನಿನ್ನೆ ಆಳುತ್ತಿದ್ದವರನ್ನು ಇಂದು ಯಾರೋ ಆಳುತ್ತಿದ್ದಾರೆ. ಇಂದಿನವರನ್ನು ನಾಳೆ ಮತ್ಯಾರೋ ಆಳಬಹುದು." - ಧನಂಜಯ ಹೆಗ್ಡೆ
@ಭೈರಪ್ಪ  @ಭೈರಪ್ಪನುಡಿ  #ಭೈರಪ್ಪ

 ☆ Indra's Net

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್  ರಾಜೀವ್-ಮಲ್ಹೋತ್ರಾ-ಜಾಲಂಗಡಿ

ಬುದ್ಧಿಜೀವಿಗಳೆಂದು ಹೇಳಿಕೊಳ್ಳುವ ಜನರ ವರ್ಗದಲ್ಲಿ ಬ್ರಿಟೀಷರಿಗೆ ಮುಂಚೆ ಹಿಂದು ಧಾರ್ಮಿಕ ಪದ್ಧತಿಗಳಲ್ಲಿ ಏಕತೆ ಇರಲಿಲ್ಲ ಮತ್ತು ಸಮಕಾಲೀನ ಹಿಂದುತ್ವದ ಬಾಹ್ಯರೇಖೆಗಳ ಹಕ್ಕುಸ್ವಾಮ್ಯಗಳು ವಸಾಹತುಶಾಹಿ ಗುರುಗಳಿಂದಷ್ಟೇ ನಮಗೆ ಹಸ್ತಾಂತರವಾಗಿ ಬಂದಿವೆ ಎಂದು ಪ್ರತಿಪಾದಿಸುವುದು ಒಂದು ಮೋಜಿನ ವಿಷಯವಾಗಿದೆ. ಮತ್ತು ಇದೇ ತರಹದ ವಾದಗಳು 'ಭಾರತೀಯ ನಾಗರಿಕತೆಯ ವಿರುದ್ಧ ಆಳವಾಗಿ ಬೇರೂರಿದ್ದ ಮೂಢನಂಬಿಕೆಗಳನ್ನು ಭಗ್ನಗೊಳಿಸಿದ ಶ್ರೀ. ಸ್ವಾಮಿ ವಿವೇಕಾನಂದರನ್ನು' ಗುರಿಯಾಗಿಸಿಕೊಂಡು ನಿರಂತರವಾಗಿ ಕೇಳಿಬರುತ್ತವೆ. ಹೇಗೆ ವಿವಿಧ ಪಾಶ್ಚಾತ್ಯ ಸಂಸ್ಥೆಗಳ ಇಂದ್ರಜಾಲ ಹಿಂದೂ ಪರಂಪರೆಯನ್ನು ವ್ಯವಸ್ಥಿತವಾಗಿ ಹಾಳುಗೆಡುವುತ್ತದೆ ಎಂಬುದನ್ನು ಇಲ್ಲಿ ವಿವರವಾಗಿ ಹೇಳಲಾಗಿದೆ.
@ರಾಜೀವ್-ಮಲ್ಹೋತ್ರಾ-ಟ್ವಿಟರ್  @ಇನ್ಫಿನಿಟಿ-ಫೌಂಡೇಶನ್-ಟ್ವಿಟರ್  @ರಾಜೀವ್-ಮಲ್ಹೋತ್ರಾ-ಫೆಸ್ಬುಕ್  @ರಾಜೀವ್-ಮಲ್ಹೋತ್ರಾ-ಜಾಲತಾಣ  @ಇನ್ಫಿನಿಟಿ-ಫೌಂಡೇಶನ್-ಇನ್ಸ್ಟಾಗ್ರಾಂ  @ರಾಜೀವ್-ಮಲ್ಹೋತ್ರಾ-ಯೂಟ್ಯೂಬ್  @ಇನ್ಫಿನಿಟಿ-ಫೌಂಡೇಶನ್ನಿನ-ಜಾಲತಾಣ

 ☆ ಜುಗಾರಿ ಕ್ರಾಸ್

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

ಕೆಲ ಓದುಗರ ಅಭಿಪ್ರಾಯದಂತೆ, ಈ ಕಾದಂಬರಿಯ ಮೂಲಕ ಮಲೆನಾಡಿನಲ್ಲಿ ಆಗುತ್ತಿರುವ ಪ್ರಾಕೃತಿಕ ವಿನಾಶ ಮತ್ತು ಆಧುನಿಕತೆಯ ಪರಿಣಾಮವಾಗಿ ನೆಲೆ ಕಳೆದುಕೊಳ್ಳುತ್ತಿರುವ ಮಲೆನಾಡಿನ ಮೂಲನಿವಾಸಿಗಳ ಕುರಿತು ಪೂರ್ಣಚಂದ್ರ ತೇಜಸ್ವಿಯವರು ಜನರ ಕಣ್ತೆರೆಯಲು ಪ್ರಯತ್ನಿಸುತ್ತಿದ್ದಾರೆ.
@ಪೂರ್ಣಚಂದ್ರತೇಜಸ್ವಿ  @ಪೂರ್ಣಚಂದ್ರತೇಜಸ್ವಿ

 ☆ ಕಾಡಿನ ಕಥೆಗಳು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

ದಕ್ಷಿಣ ಭಾರತದ ಕಾಡಿನ ಸೌಂದರ್ಯ ಮತ್ತಲ್ಲಿನ ಜೀವವೈವಿಧ್ಯದ ಕುರಿತು ಚಿತ್ರಿಸುವ ತುಂಬಾ ಆಸಕ್ತಿದಾಯಕ ಮತ್ತು ಅದ್ಭುತ ಪುಸ್ತಕಗಳ ಸಂಗ್ರಹ (೪ ಪುಸ್ತಕಗಳ ಕಟ್ಟು)
@ಪೂರ್ಣಚಂದ್ರತೇಜಸ್ವಿ  @ಪೂರ್ಣಚಂದ್ರತೇಜಸ್ವಿ

 ☆ ಮದರ್ ತೆರೆಸಾ - ನೀವರಿಯದ ಕಥೆ

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

"ಮಿಷನರಿಗಳು, ಗುರುಗಳು, ಕನ್ಯಾಸ್ತ್ರೀಯರು ಮತ್ತಿತರ ವ್ಯಕ್ತಿಗಳ ಕುರಿತು ಪೂರ್ವಪಕ್ಷ ನಡೆಸದೆ ಅವರನ್ನು ಪೂಜಿಸುವುದು ಖ್ಯಾತ ಪ್ರವೃತ್ತಿಯಾಗಿದೆ. ಮದರ್ ತೆರೆಸಾ ಇಂತಹ ಹೆಸರುಗಳಲ್ಲಿ ಒಂದು. 'ಸೇವಾಮನೋಭಾವದ ವ್ಯಕ್ತಿಗಳಲ್ಲೆಲ್ಲಾ ಮದರ್ ತೆರೆಸಾ ಅತ್ಯುನ್ನತ ಅಥವಾ ಶ್ರೇಷ್ಠರು' ಎಂದು ಹೇಳಲು ಮದರ್ ತೆರೆಸಾಗೆ ಆ ಯೋಗ್ಯತೆ ಇದೆಯೆ? ಕೆಲವರಿಗೆ ಅನಾನುಕೂಲ ಉಂಟುಮಾಡಬಲ್ಲ ಪುಸ್ತಕ ಇದು. ಅದ್ಭುತ, ವೀರ, ಸುಳ್ಳುಗಳ ವಿನಾಶಕಾರಿ" - ಡಾ. ವಿಲಿಯಂ ರೇಡಿಸ್, ಪೌರಾತ್ಯ ಮತ್ತು ಆಫ್ರಿಕಾ ಅಧ್ಯಯನ ವಿಭಾಗ, ಲಂಡನ್ ವಿಶ್ವವಿದ್ಯಾಲಯ.

"ಅಗತ್ಯ, ಉತ್ತಮವಾಗಿ-ದಾಖಲಿಸಲಾಗಿದೆ" - ಟೈಮ್ಸ್ ಉಚ್ಚ ಶಿಕ್ಷಣದ ಅನುಬಂಧ, ಲಂಡನ್.

"ಶ್ರಮದಾಯಕವಾಗಿ ದಾಖಲಿಸಲಾಗಿದೆ, ಮಿಷನರಿ ತೆರೆಸಾರ ಇನ್ನೊಂದು ಮುಖವನ್ನು ಬಹಿರಂಗಪಡಿಸುತ್ತದೆ" - ಸ್ವತಂತ್ರ ಐರಿಷ್, ಡಬ್ಲಿನ್.

"ಶ್ರಮವಹಿಸಿ ಬರೆದಿರುವ ಪುಸ್ತಕ" - ಟೆಲಿಗ್ರಾಫ್, ಕೋಲ್ಕತಾ.

"ಮೂಢನಂಬಿಕೆಗಳು, ತಪ್ಪು ಕಲ್ಪನೆಗಳು ಮತ್ತು ಮುಖ್ಯವಾಗಿ ಅಲ್ಬೇನಿಯಾದ ಕನ್ಯಾಸ್ತ್ರಿಯೊಬ್ಬಳನ್ನು ಮಾನವತೆಯ ಸಾಕಾರ ಮೂರ್ತಿ ಎಂಬಂತೆ ಬಿಂಬಿಸಲು ಯತ್ನಿಸುತ್ತಿರುವ ಕಾಣದ ಕೈಗಳನ್ನು ಡಾ. ಚಟರ್ಜಿ ಚೆನ್ನಾಗಿ ನಿಭಾಯಿಸಿದ್ದಾರೆ" - ಹೆಮ್ಲೆ ಗೋಮ್ಜಾಲೆಜ್, ರಿಸ್ಪಾನ್ಸಿಬಲ್ ದಾನ ಸಂಸ್ಥೆಯ ಸ್ಥಾಪಕರು

"ತಮ್ಮ ವೃತ್ತಿಯ ಒಂದು ಹಂತದಲ್ಲಿ ಮದರ್ ತೆರೆಸಾ ನೈಜತೆಯೊಂದಿಗಿನ ಸಂಪರ್ಕವನ್ನೇ ಕಳೆದುಕೊಂಡು ಬಳಲುತ್ತಿರುವ ಜನರ ಸೇವೆ ಮಾಡುವುದನ್ನು ಬಿಟ್ಟು ವ್ಯಾಟಿಕನ್ ಚರ್ಚಿನ ರಾಜಕೀಯದ ಪರವಾಗಿ ಕೆಲಸ ಮಾಡಲು ಆರಂಭಿಸಿದರು. ನೈಜತೆ ಮತ್ತು ಮೂಢನಂಬಿಕೆ ಇವೆರಡನ್ನು ಬೇರ್ಪಡಿಸುವ ಮೂಲಕ ಡಾ. ಚಟರ್ಜಿ ಅದ್ಭುತ ಕೆಲಸವನ್ನು ಮಾಡಿದ್ದಾರೆ." - ಡಾ. ಕೆಟಕಿ ಕುಷಾರಿ ಡೈಸನ್, ಲೇಖಕ, ಅನುವಾದಕ ಮತ್ತು ಸಂಶೋಧಕ.

@ಅರೂಪ್-ಚಟರ್ಜಿ  @ಯಮ-ದೂತೆ

 ☆ ಮೂಕಜ್ಜಿಯ ಕನಸುಗಳು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

ದೇವರು ಎಂಬ ವಿಷಯದ ಕುರಿತು ಇರಬಹುದಾದ ವಿಭಿನ್ನ ತತ್ವವನ್ನು ಅರಿತುಕೊಳ್ಳಲು ಇದೊಂದು ಆಸಕ್ತಿದಾಯಕ ಪುಸ್ತಕ. ದೇವರೆಂಬ ಕಲ್ಪನೆ ಈ ಪುಸ್ತಕದಲ್ಲಿ ಹೊಸ ಆಯಾಮವನ್ನು ಕಂಡಿದೆ. ಅದನ್ನರಿಯಲು ತುಸು ಆಲೋಚನಾ ಶಕ್ತಿ ಬೇಕು.
@ಶಿವರಾಮ-ಕಾರಂತರ  @ಶಿವರಾಮಕಾರಂತ  @ಕಸಾಪ  @ಶಿವರಾಮ-ಕಾರಂತರ-ಕರ್ನಾಟಕ-ಡಾಟ್-ಕಾಂ

 ☆ ನಾಯಿ ನೆರಳು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

ಈ ಕೃತಿಯ ಪ್ರಕಾರ ನಾಯಿ ಮತ್ತು ನೆರಳು ಇವೆರಡೂ ನಮ್ಮ ಎಲ್ಲಾ ಜನ್ಮಗಳಲ್ಲಿ ನಮ್ಮನ್ನು ಹಿಂಬಾಲಿಸಿ ಬರುವ ನಮ್ಮ ಕರ್ಮದ ಸಂಕೇತಗಳು. ಓದಲು ಇದೊಂದು ಒಳ್ಳೆಯ ಕಾದಂಬರಿ.
@ಭೈರಪ್ಪ  @ಭೈರಪ್ಪನುಡಿ  #ಭೈರಪ್ಪ

 ☆ ಪರ್ವ

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

ಎಸ್. ಎಲ್. ಭೈರಪ್ಪನವರ ಕಾದಂಬರಿಗಳಲ್ಲೆಲ್ಲಾ ಪರ್ವ ಅತಿಶ್ರೇಷ್ಟ ಎಂದು ಗುರುತಿಸಲ್ಪಡುತ್ತದೆ. ಪರ್ವ ಕೃತಿಯ ಹಿಂದಿ ಮತ್ತು ಮರಾಠಿ ಅನುವಾದವನ್ನು ಓದಿದವರೆಲ್ಲ ಇದನ್ನು ಭಾರತದ ನವಸಾಹಿತ್ಯದ ಮೇರುಕೃತಿ ಎಂದೇ ಬಣ್ಣಿಸುತ್ತಾರೆ. ಇದು ದಂತಕತೆಯನ್ನು ನವಯುಗದ ಕಾದಂಬರಿಯಾಗಿ ಪರಿವರ್ತಿಸಿದಂತಿದೆ.
@ಭೈರಪ್ಪ  @ಭೈರಪ್ಪನುಡಿ  #ಭೈರಪ್ಪ

 ☆ Something Happened on the Way to Heaven

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

ಆಸಕ್ತಿದಾಯಕ ಜನರ ಸ್ಪೂರ್ತಿದಾಯಕ ನಿಜಘಟನೆಗಳು ನಮ್ಮ ಮೇಲೆ ಶಾಶ್ವತ ಪ್ರಭಾವ ಬೀರುತ್ತವೆ. ಸುಧಾ ಮೂರ್ತಿಯವರಿಂದ ಆಯ್ಕೆಯಾದ ಇಂತಹ ಇಪ್ಪತ್ತು ಕತೆಗಳ ಸರಣಿಯೆ - ಸ್ವರ್ಗದ ದಾರಿಯಲ್ಲೆನೋ ನಡೆಯಿತು (Something Happened on the Way to Heaven).
@ಸುಧಾಮೂರ್ತಿ  @ಸುಧಾ-ಮೂರ್ತಿ

 ☆ ಮಿಷನರಿ ಸ್ಥಾನ: ಸಿದ್ಧಾಂತ ಮತ್ತು ನಿಜವಾದ ಮದರ್ ತೆರೆಸಾ

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

ಕ್ರೈಸ್ತ ಜಾತಿಯ ಮೂಲಭೂತವಾದಿ, ರಾಜಕೀಯವಾಗಿ ಪರಿಣಾಮಕಾರಿ, ಸಂಪ್ರದಾಯದ ಧರ್ಮೋಪದೇಶಕಿ ಮತ್ತು ಜಾತ್ಯಾತೀತರೆಂದು ಹೇಳಿಕೊಳ್ಳುವ ಜಾಗತಿಕ ಬಲಗಳನ್ನು ತನ್ನೆಡೆಗೆ ಸೆಳೆದುಕೊಂಡಿದ್ದವಳು. ಮದರ್ ತೆರೆಸಾ ಗುರಿ ಯಾವಾಗಲು ಇದೇ ಆಗಿತ್ತು. ವ್ಯಂಗ್ಯವೆಂದರೆ ಯಾರೆ ಆಗಲಿ ತನ್ನನ್ನು ನಂಬುವಂತೆ ಮನವೊಲಿಸಲು ಆಕೆಗೆ ಆಗಲಿಲ್ಲ. ಮದರ್ ತೆರೆಸಾ ಜೀವನ ಮತ್ತು ಆಕೆ ಮಾಡಿದ ಕೆಲಸಗಳ ಕುರಿತಾದ ಅತಿಸೂಕ್ಷ್ಮ ಅಧ್ಯಯನ ಒಳಗೊಂಡಿರುವ ಕ್ರಿಸ್ಟೋಫರ್ ಹಿಚೆನ್ಸ್ ರವರ ಈ ಪುಸ್ತಕ ಅವರ ಬೇರೆಲ್ಲ ಕೃತಿಗಳಿಗಿಂತ ಹೆಚ್ಚಿನ ಆಕ್ರೋಶವನ್ನು ಎದುರಿಸಿದೆ.
@ಕ್ರಿಸ್ಟೋಫರ್-ಹಿಚೆನ್ಸ್  @ಸುಳ್ಳು-ಪವಾಡಗಳು  @ಮದರ್-ತೆರೆಸಾ-ಜೀವನ  @ಮದರ್-ತೆರೆಸಾ-ಬಗೆಗಿನ-ಕಠುಸತ್ಯ  @ಪಡೆದ-ದಾಣವೆಲ್ಲಿ-ತೆರೆಸಾ

 ☆ Urban Naxals (ನಗರ ನಕ್ಸಲರು)

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಸಪ್ನ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

ದೇಶದ ತುಂಬೆಲ್ಲ ಹರಡಿರುವ ಮಾವೋವಾದಿ ಭಯೋತ್ಪಾದಕ ಚಳುವಳಿಗಳು ಮತ್ತು ಈ ಭಯೋತ್ಪಾದಕ ಕೃತ್ಯಗಳನ್ನು ಬೆಂಬಲಿಸುವ, ನಗರ ಪ್ರದೇಶಗಳಲ್ಲಿ ನೆಲೆಸಿರುವ ಮಾಧ್ಯಮ & ಬುದ್ಧಿಜೀವಿಗಳೆಂದು ಹೇಳಿಕೊಳ್ಳುವ ಜನರ ನಿಜ ಬಣ್ಣವನ್ನು ಹೊರಹಾಕಿದ 'ಸಂಚಾರ ಸ್ಥಗಿತದಲ್ಲಿ ಬುದ್ಧ (ಬುದ್ಧ ಇನ್ ಟ್ರಾಫಿಕ್ ಜಾಮ್)' ನೈಜ ಘಟನೆಗಳನ್ನಾಧರಿಸಿದ ತಮ್ಮ ಚಲನಚಿತ್ರದ ನಿರ್ಮಾಣ ವೇಳೆಯ ಅನುಭವವನ್ನು ವಿವೇಕ್ ಅಗ್ನಿಹೋತ್ರಿಯವರು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಜನರಿಂದ ಚುನಾಯಿತ ಸರ್ಕಾರಗಳನ್ನು ಕಿತ್ತೆಸೆದು ತಮ್ಮ ಕರಾಳ ಮುಷ್ಟಿಯನ್ನು ಸಮಾಜದ ಮೇಲೆ ಇರಿಸಲು ನಕ್ಸಲರು ಭಾರತದಾದ್ಯಂತ ಸುಸಜ್ಜಿತ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಕಾಡಿನ ನಕ್ಸಲರ ಈ ದುಷ್ಕೃತ್ಯಕ್ಕೆ ನಗರದ ನಕ್ಸಲರು ಧ್ವನಿಗೂಡಿಸಿ, ಹೊಸ ನಕ್ಸಲರ ನೇಮಕಾತಿದಾರರಾಗಿ ಕೆಲಸ ಮಾಡುತ್ತಿದ್ದಾರೆ. ಈ ನಗರ-ನಕ್ಸಲರು ಸಾಮಾಜಿಕ ಮತ್ತು ಸಾಂಪ್ರದಾಯಿಕ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ಕುತಂತ್ರಗಳ ಪ್ರಚಾರ ನಡೆಸುತ್ತಿದ್ದಾರೆ.
ಕಾಲೇಜು ದಿನಗಳಲ್ಲಿ ಅಗ್ನಿಹೋತ್ರಿಯವರು ಕಂಡ ನಗರ-ನಕ್ಸಲರ ಸ್ವಂತ ಅನುಭವ ಮತ್ತು ಯೋಜನೆಗಳ ವಿವರಗಳ ಕುರಿತು ನಮೂದಿಸಿದ್ದಾರೆ. ಈ ಪುಸ್ತಕವು 'ಸಂಚಾರ ಸ್ಥಗಿತದಲ್ಲಿ ಬುದ್ಧ (ಬುದ್ಧ ಇನ್ ಟ್ರಾಫಿಕ್ ಜಾಮ್)' ಚಲನಚಿತ್ರದ ಪರದೆಯ ಹಿಂದಿನ ರಹಸ್ಯಗಳನ್ನು ಬಿಚ್ಚಿಡುತ್ತದೆ.
ಜಗತ್ತಿನ ದೊಡ್ಡ ಎಡಪಂಥೀಯ ಉಗ್ರವಾದ ಹೇಗೆ ಈ ಚಿತ್ರದ ಪ್ರದರ್ಶನಕ್ಕೆ ಹಿಂಸಾತ್ಮಕ ಪ್ರತಿರೋಧ ಒಡ್ಡಿತು ಎಂಬುದನ್ನೂ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ದೇಶದ್ರೋಹಿ ಬಲಗಳು ಹೇಗೆ ನಮ್ಮದೇ ದೇಶದ ಮಾಧ್ಯಮಗಳನ್ನು ಬಳಸಿ ನಮ್ಮ ಯುವಕರ ದಾರಿತಪ್ಪಿಸಿ ತಮ್ಮ ಅಧಿಕಾರ & ಹಣದ ದಾಹವನ್ನು ತೀರಿಸಿಕೊಳ್ಳುತ್ತವೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ನಿಮಗಿದ್ದರೆ ಈ ಪುಸ್ತಕ ಅತ್ಯುತ್ತಮವಾದುದು.
@ನಾನು-ಬುದ್ಧ-ಅಧಿಕೃತ-ಜಾಲತಾಣ  @ನಾನು-ಬುದ್ಧ-ಯೂಟ್ಯೂಬ್  @ವಿವೇಕ್-ಅಗ್ನಿಹೋತ್ರಿ-ಟ್ವಿಟರ್  @ನಾನು-ಬುದ್ಧ-ಪ್ರತಿಷ್ಠಾನ-ಇನ್ಸ್ಟಾಗ್ರಾಂ  @ವಿವೇಕ್-ಅಗ್ನಿಹೋತ್ರಿ-ಫೇಸ್ಬುಕ್

ಬೋನಸ್ (೧೭-೦೧-೨೦೨೦ರಂದು ನವೀಕರಿಸಲಾಗಿದೆ)

 ☆ The English Medium Myth

Unable to load this image! Please refresh the site (Ctrl+F5) - Halatu Honnu
ಸಪ್ನ-ಪುಸ್ತಕ-ಭಂಡಾರ  ಗರುಡ-ಪುಸ್ತಕ-ಭಂಡಾರ  ಅಮೇಝಾನ್-ಭಾರತ  ಫ್ಲಿಪ್ಕಾರ್ಟ್

ಕೇವಲ ಆಂಗ್ಲ ಮಾಧ್ಯಮ ಶಿಕ್ಷಣದಿಂದ ಅಷ್ಟೇ ಅಭಿವೃದ್ಧಿ ಸಾಧ್ಯ ಎನ್ನುವಂತಃ ಚಿಂತನೆ ಇಂದು ಭಾರತವನ್ನು ಆವರಿಸಿದೆ. ಅಭಿಯಂತರ, ವೈದ್ಯಕೀಯ, ಕಾನೂನು, ಉಚ್ಚ ನ್ಯಾಯಾಲಯಗಳು ಹೀಗೆ ಎಲ್ಲವೂ ಆಂಗ್ಲದಲ್ಲೇ ಕಾರ್ಯ ನಿರ್ವಹಿಸುತ್ತಿರುವುದರಿಂದ ಆಂಗ್ಲದ ವ್ಯಾಮೋಹ ಹೆಚ್ಚಾಗಿದೆ. The English Medium Myth ಪುಸ್ತಕ ಈ ತರಹದ ಎಲ್ಲ ಯೋಚನೆಗಳನ್ನು ಭಗ್ನಗೊಳಿಸುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳ ಜನರೆಲ್ಲಾ ವಿಜ್ಞಾನವನ್ನು ತಮ್ಮ-ತಮ್ಮ ಮಾತೃಭಾಷೆಗಳಲ್ಲಿಯೇ ಕಲಿಯುತ್ತಿದ್ದಾರೆ. ಮಾತೃಭಾಷೆಯಲ್ಲಿ ವಿಜ್ಞಾನವನ್ನು ಕಲಿಯುವುದರಿಂದ ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶ ಬರುವುದೆಂದು ಸಾಕಷ್ಟು ಅಧ್ಯಯನಗಳು ತಿಳಿಸಿಕೊಡುತ್ತವೆ.

ಭಾರತವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಶಿಕ್ಷಣದ ಎಲ್ಲ ಹಂತಗಳು ಸ್ಥಳೀಯ ಭಾಷೆಯಲ್ಲಿಯೇ ಸಿಗುವಂತಾಗಬೇಕು. ಅದು ಸಾಧ್ಯವಾಗುವಂತೆ ಮಾಡಲು ಇರುವ ನೀತಿ-ನಿಯಮಗಳನ್ನು ಈ ಪುಸ್ತಕ ಒಳಗೊಂಡಿದೆ. ಆ ಮೂಲಕ ಭಾರತದ ಪ್ರತಿಭೆಯನ್ನು ಜಗತ್ತಿಗೆ ಪ್ರಸ್ತುತಪಡಿಸುವ ಮಾರ್ಗವನ್ನು ಈ ಪುಸ್ತಕ ತೋರಿಸಿಕೊಡುತ್ತದೆ.

ಲೇಖಕರ ಕುರಿತು:
ಸಂಕ್ರಾಂತ್ ಸಾನು ಅವರು ಒಬ್ಬ ಲೇಖಕ, ತಂತ್ರಜ್ಞ ಮತ್ತು ಉದ್ಯಮಿ. ಅವರು ಮೈಕ್ರೋಸಾಫ್ಟ್ ನಲ್ಲಿ ಹಿರಿಯ ಅಭಿವೃದ್ಧಿ ನಿರ್ವಾಹಕರಾಗಿ ಕೆಲಸ ಮಾಡುವಾಗ ಮೈಕ್ರೋಸಾಫ್ಟ್ ಶೇರ್ ಪಾಯಿಂಟ್ ನ ಸಹ-ಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಕೆಲ ಪ್ರಬಂಧಗಳನ್ನು 'Invading the Sacred' ಪುಸ್ತಕದ ಮೂಲಕ ರೂಪಾರವರು ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲದೆ ಸಂಕ್ರಾಂತ್ ಸಾನುರವರು ರೆಡಿಫ್, ಉದ್ಯಮಿ ಮಾಸಪತ್ರಿಕೆ, ಹಿಂದುಸ್ಥಾನ್ ಟೈಮ್ಸ್, ಅಮರ್ ಉಜಾಲ, ಮನುಷಿ ಮತ್ತು ಸೀಕಿಂಗ್ ಅಲ್ಫಾ ಇತ್ಯಾದಿಗಳಿಗೆ ಲೇಖನಗಳನ್ನು ಒದಗಿಸಿದ್ದಾರೆ.

ರಾಜೀವ್ ಮಲ್ಹೋತ್ರಾರವರು ಒಬ್ಬ ಭಾರತೀಯ-ಅಮೆರಿಕದ ಸಂಶೋಧಕ, ಲೇಖಕ, ವಾಗ್ಮಿ, ಬುದ್ಧಿಜೀವಿ. ನಮ್ಮ ನಾಗರಿಕತೆಗಳಿಗೆ ಸಂಬಂಧಿಸಿದ ಪ್ರಚಲಿತ ವಿದ್ಯಮಾನಗಳು, ಅಡ್ಡ-ಸಾಂಸ್ಕೃತಿಕ ಮುಖಾಮುಖಿಗಳು, ಜಾತಿ ಮತ್ತು ವಿಜ್ಞಾನಗಳ ಕುರಿತು ಅವರ ಸಂಶೋಧನೆಗಳು ಆಳವಾಗಿವೆ. ರಾಜೀವ್ ಅವರು ವಿವಿಧ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳ ಮೇಲೆ ನೈಜವಾದ ಹಾಗು ಆಳವಾದ ಸಂಶೋಧನೆ ನಡೆಸಿ, ತಮ್ಮ ಕೆಲಸಗಳಿಂದ ಭಾರತ ಮತ್ತು ಪಾಶ್ಚಾತ್ಯ ಚಿಂತಕರ ವಲಯದ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ.

ಕಾರ್ಲ್ ಕ್ಲೆಮನ್ಸ್ ರವರು ಸಧ್ಯ ಸೀಟಲ್ನಲ್ಲಿ ತಂತ್ರಾಂಶ ಅಭಿವೃದ್ಧಿ ಮತ್ತು ವಾಸ್ತುಶಿಲ್ಪಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ನೀತಿ ಮತ್ತು ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ್ದಿದ್ದಾರೆ. ವೈಜ್ಞಾನಿಕ ತತ್ವಶಾಸ್ತ್ರ, ಜಾತಿ ಮತ್ತು ಸಾಮಾನ್ಯ ಶಬ್ದಾರ್ಥ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ.

@ಸಂಕ್ರಾಂತ್-ಸಾನು-ಟ್ವಿಟರ್  @ಸಂಕ್ರಾಂತ್-ಸಾನು-ಜಾಲತಾಣ  @ಭಾರತದ-ಹಬ್ಬ-ಇನ್ಸ್ಟಾಗ್ರಾಂ  @ಭಾರತದ-ಹಬ್ಬ-ಯೂಟ್ಯೂಬ್