ಮಹಿಳಾ ದಿನವಿಶೇಷ - ಹಳತು ಹೊನ್ನು

ಲೇಖನಕ್ಕೆ ಮುಂದುವರಿಯುವ ಮೊದಲು ನಮ್ಮ ಮಹಿಳಾ ಓದುಗರಿಗೆಲ್ಲ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು..!

ಲಿಂಗಸಮಾನತೆಯು ಸಮತೋಲಿತ ಸಮಾಜಕ್ಕೆ ಅತ್ಯವಶ್ಯಕ. ಹಾಗೆಂದಮಾತ್ರಕ್ಕೆ ಹಿಂದುಸ್ಥಾನದ ಮಹಿಳೆಯರಿಗೆ ಅನುಭವ ಕಡಿಮೆಯಾಗಿದ್ದು, ಅವರಿಗೆ ಪರದೇಶಿ ಮಹಿಳಾವಾದಿಗಳಿಂದ ಆದೇಶಗಳು ಬರಬೇಕೆಂದು ತಿಳಿಯಬಾರದು.
ತಾವು ಆಯ್ಕೆಮಾಡಿದ ಕ್ಷೇತ್ರದ(ಗಳ)ಲ್ಲಿ ಅತ್ಯುನ್ನತ ಸಾಧನೆಗೈದೆ ಅಸಂಖ್ಯಾತ ಮಹಿಳೆಯರು ಹಿಂದುಸ್ಥಾನದ ಇತಿಹಾಸದಲ್ಲಿ ಕಂಡುಬರುತ್ತಾರೆ. ಅಂತಹ ಪ್ರತಿಭಾವಂತ ಮಹಿಳೆಯರ ಬಗ್ಗೆ ನಾಡಿನ ಪುರುಷ, ಮಹಿಳೆ ಮತ್ತು ಉಳಿದವರೆಲ್ಲರೂ ಹೆಮ್ಮೆಪಡುತ್ತಾರೆ.

ಪಾಶ್ಚಾತ್ಯರು ಸ್ತ್ರೀಶಕ್ತಿಯನ್ನು ಅರಿಯುವ ಮೊದಲೇ ಈ ಕೆಳಗಿನ ಚಿತ್ರದಲ್ಲಿರುವ ಪದ್ಯವು ನಮ್ಮ ಸಮಾಜದಲ್ಲಿ ಪ್ರಚಲಿತಗೊಂಡಿತ್ತು.
ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
https://jpbhat.blogspot.com/

ಇಂದಿನ ಆಧುನಿಕ ಯುಗದಲ್ಲಿಯೂ ಸಹ ನಮ್ಮ ಮಹಿಳೆಯರು ಇಡೀ ಜಗತ್ತಿಗೆ ಪ್ರೇರಣೆ ನೀಡುತ್ತಿದ್ದಾರೆ. ರಕ್ಷಣೆ, ರಾಜಕೀಯ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಪರಿಸರ ಕಾಳಜಿ, ಸಾಮಾಜಿಕ ಕಾರ್ಯ, ಇತ್ಯಾದಿ ಇತ್ಯಾದಿ... ಹಿಂದುಸ್ಥಾನಿ ಮಹಿಳೆಯರು ಕೈಹಾಕದ ಕ್ಷೇತ್ರವೇ ಇಲ್ಲ!

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
@AskAnshul

"ಮಹಿಳೆಯರನ್ನು ಒಂದು ತರಹದ ಜೀತದಾಳುಗಳಂತೆ ಕಾಣುವ ಜನ / ಪಂಗಡ / ಪರದೇಶಗಳಿಗೆ" ಹಿಂದುಸ್ಥಾನದ ಬಗ್ಗೆ ಟೀಕೆ ಮಾಡಲು ಬಿಡದಿರಿ. ಹೌದು, ನಮ್ಮಲ್ಲಿಯೂ ಕೆಲ ಸಮಸ್ಯೆಗಳು ಇನ್ನೂ ಬಗೆಹರಿಸಲು ಉಳಿದಿವೆ, ಆದರೆ ಈ ಸಮಸ್ಯೆಗಳನ್ನು ಹೊಂದಿರುವಾಗಲೂ (ಬೇರೆಯವರಿಗೆ ಅವರದೇ ಆದ ಸಾಕಷ್ಟು ಸಮಸ್ಯೆಗಳಿವೆ) ನಾವೇ ಜಗತ್ತಿನಲ್ಲಿ ಸರ್ವಶ್ರೇಷ್ಟರು!

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
@mariawirth1

"ಎಷ್ಟು ಧೈರ್ಯ ನಿನಗೆ" ಎಂದು ಕಂಡ-ಕಂಡವರ ಮೇಲೆಲ್ಲಾ ಎಗರಾಡಿದ ಗ್ರೆಟ್ಟಾ ಥನ್ಬರ್ಗ್ ಎಂಬಾಕೆಯ ಕಿರುಚಾಟ ನಿಮಗೆಲ್ಲಾ ಕೇಳಿರಬಹುದು ಆದರೆ ಯಾವುದೇ ಅಂತರಾಷ್ಟ್ರೀಯ ಮಾಧ್ಯಮದ ಕ್ಯಾಮರಾ ಮುಂದೆ ನಿಂತು ಯಾರ ಮೇಲೆಯೂ ಕಿರುಚಾಡದೆ ತಾವು ಆಯ್ಕೆಮಾಡಿಕೊಂಡ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ನೈಜ ಕಾರ್ಯವನ್ನು ಮಾಡುತ್ತಾ ಸಾರ್ಥಕತೆಯ ಜೀವನ ನಡೆಸುತ್ತಿರುವ ಈ ನಮ್ಮ ಕಾಯಕಯೋಗಿನಿಯರ ಕುರಿತು ನೀವು ಕೇಳದೆ ಇರಬಹುದು!

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
@kannadaduniya

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ @ನನ್ನಭಾರತಸರ್ಕಾರವು ನಮ್ಮ ದೇಶದ ನಿಜವಾದ ಮಹಿಳಾ ತಾರೆಯರ ಸಾಧನೆಯ ಮೇಲೆ ಬೆಳಕುಚೆಲ್ಲುವ #ಇವಳುನಮಗೆಸ್ಪೂರ್ತಿ ಎಂಬ ಸಾಧನೆಯ ಕಥೆಗಳನ್ನು ಪ್ರಪಂಚದೊಂದಿಗೆ ಹಂಚಿಕೊಂಡಿದೆ.
ಭಾರತ ಸರ್ಕಾರದ #ಇವಳುನಮಗೆಸ್ಪೂರ್ತಿ ಕಥಾಮಾಲಿಕೆಯಿಂದ ಆಯ್ದ ಕೆಲವನ್ನು ನಾವಿಲ್ಲಿ ನಮ್ಮ ಓದುಗ ಬಳಗದೊಂದಿಗೆ ಹಂಚಿಕೊಳ್ಳುತ್ತಿದ್ದೇವೆ:

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
@ನನ್ನಭಾರತಸರ್ಕಾರ

ಮಕ್ಕಳಿರುವ ಮಹಿಳೆಯರು ಅಥವಾ ಮಕ್ಕಳಿಗೆ ಪಾಠ ಹೇಳುವಂತಹ ಮಹಿಳೆಯರು ದಯವಿಟ್ಟು "ಲಿಂಗ ಸಮಾನತೆಯ" ಕುರಿತು ಮಕ್ಕಳಿಗೆ ತಿಳಿಹೇಳಿ. "ಲಿಂಗ ಸಮಾನತೆ" ಎಂದರೆ ಮಹಿಳೆಯರು ಪುರುಷರಂತೆ ಆಗುವುದು ಎಂದರ್ಥವಲ್ಲ.
ನನ್ನ ಪ್ರಕಾರ, ಲಿಂಗ ಸಮಾನತೆ ಎಂದರೆ ಮಹಿಳೆ ಮತ್ತು ಪುರುಷ ಇಬ್ಬರೂ ಪರಸ್ಪರ ಸ್ಪರ್ಧಾತ್ಮಕವಾಗಿ ಅಲ್ಲ, ಬದಲಿಗೆ ಪೂರಕವಾಗಿ ಜೀವಿಸುವುದು ಎಂದರ್ಥ. ಏಕೆಂದರೆ ಮಹಿಳೆ-ಪುರುಷ ಇಬ್ಬರೂ ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದಿರುವಾಗ ಪರಸ್ಪರರ ನಡುವಿನ ಸ್ಪರ್ಧೆಯು ಅರ್ಥಹೀನವಾದುದು.
ನಿಮ್ಮ ಮಗುವು (ಅಥವಾ ನೀವು ಪಾಠ ಹೇಳಿಕೊಡುವ ಮಗುವು) ಗಂಡಾಗಲಿ ಅಥವಾ ಹೆಣ್ಣಾಗಿರಲಿ, ಆ ಮಗುವಿಗೆ ಇತರರನ್ನು ಗೌರವಿಸುವುದನ್ನು ಹೇಳಿಕೊಡಿ ಮತ್ತು ಬೇರೆಯವರಿಗೆ ನೋವನ್ನು ಕೊಡಬಾರದು ಎಂಬುದನ್ನು ಮನವರಿಕೆ ಮಾಡಿಸಿ. ಎಲ್ಲಾ ಒಂದಾಗಿ ಮಹಿಳೆ, ಪುರುಷ ಮತ್ತು ತೃತೀಯ ಲಿಂಗಿಗಳ ಸಹಿತ ಸರ್ವರಿಗೂ ಸುರಕ್ಷಿತವಾದ ಸಮಾಜವನ್ನು ಕಟ್ಟೋಣ!

  ಉಲ್ಲೇಖಗಳು/ಹೆಚ್ಚಿನ ಮಾಹಿತಿ