ಕಾಂಗ್ರೆಸ್ಸಿಗೆ ನೆನಪಾದ ಶ್ರೀರಾಮ - ಹಳತು ಹೊನ್ನು


ಚುನಾವಣೆ ಬಂದ ತಕ್ಷಣ ಜನಿವಾರ ಹಾಕಿಕೊಂಡು "ನಾನೊಬ್ಬ ಬ್ರಾಮ್ಹಣ ಎನ್ನುತ್ತಾ" ತಿರುಗಾಡಿದ ರಾಹುಲ್ ಗಾಂಧಿ ನೆನಪಿರಬೇಕಲ್ಲ?!

"ಶ್ರೀರಾಮ ಇಲ್ಲಿ ಜೀವನ ನಡೆಸಿದ್ದಕ್ಕೆ ಪುರಾವೆಗಳೇ ಇಲ್ಲ, ಶ್ರೀರಾಮ ಎಂಬುದು ಕಪೋಲಕಲ್ಪಿತ ಪಾತ್ರವಷ್ಟೆ" ಎಂದು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಪಕ್ಷ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿ ಪ್ರಪಂಚದಾದ್ಯಂತ ಹರಡಿರುವ ಕೋಟ್ಯಾಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದು ನೆನಪಿದೆ ಅಲ್ಲವೆ?!


ಏನೇ ಆದರೂ ಹಿಂದೂಗಳು ಅಲ್ಪಸಂಖ್ಯಾತರಂತೆ ಆರಕ್ಷಕ ಠಾಣೆ, ಬಸ್ಸು-ಕಾರು ಇತ್ಯಾದಿ ವಾಹನಗಳಿಗೆ ಬೆಂಕಿ ಹಚ್ಚಿ, ಮನಮೋಹನ್ ಸಿಂಗ್ ಮನೆ & ಗಾಂಧಿಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ "ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಗಿದೆ" ಎಂದು ತೋರಿಸಿಕೊಳ್ಳುವುದಿಲ್ಲ ಅಲ್ಲವೆ?!


ಹೀಗಿರುವಾಗ, ಹಿಂದೂಗಳ ಭಾವನೆಗಳ ಜೊತೆ ಆಟವಾಡುವುದು ನೆಹರು-ಗಾಂಧಿ ಕುಟುಂಬದ ಕಾಂಗ್ರೆಸ್ ಪಕ್ಷಕ್ಕೆ ಅದೆಷ್ಟು ಸರಳ ಅಲ್ಲವೆ!?

  • ಅಯೋಧ್ಯೆಯ ವಿಷಯ ಬಂದಾಗ ಭಾರತದಲ್ಲಿ ಶ್ರೀರಾಮನ ಅಸ್ತಿತ್ವವೇ ಇರಲಿಲ್ಲ ಎನ್ನುತ್ತದೆ ಕಾಂಗ್ರೆಸ್
  • ರಾಮಸೇತುವಿನ ವಿಚಾರ ಬಂದಾಗ ಭಾರತದಲ್ಲಿ ಶ್ರೀರಾಮನ ಅಸ್ತಿತ್ವವೇ ಇರಲಿಲ್ಲ ಎನ್ನುತ್ತದೆ ಕಾಂಗ್ರೆಸ್
  • ಕರ್ನಾಟಕದಲ್ಲಿ ಹಿಂದುತ್ವಕ್ಕೆ ವಿರುದ್ಧವಾಗಿ "ಅಹಿಂದ (ಅ-ಹಿಂದ್)" ಸಮಾವೇಶವನ್ನು ನಡೆಸುತ್ತದೆ ಇದೇ ಕಾಂಗ್ರೆಸ್
  • ಹರಿಯಾಣ, ರಾಜಸ್ಥಾನಗಳಲ್ಲಿ ಝಾಟರನ್ನು ಮೀಸಲಾತಿಯ ಆಮಿಷ ಒಡ್ಡಿ ಎತ್ತಿಕಟ್ಟುತ್ತದೆ
  • ಕರ್ನಾಟಕದಲ್ಲಿ ಲಿಂಗಾಯತ, ವೀರಶೈವ ಸಮಾಜವನ್ನು ಎತ್ತಿಕಟ್ಟಿ ಹಿಂದೂಗಳ ಒಗ್ಗಟ್ಟನ್ನು ಮುರಿಯಲು ಹರಸಾಹಸ ಮಾಡುತ್ತದೆ
  • ಶ್ರೀರಾಮ ದೇಗುಲದ ನಿರ್ಮಾಣವನ್ನು ವಿರೋಧಿಸಿದ ಇದೇ ಕಾಂಗ್ರೆಸ್ ಪಕ್ಷವು ಕನಕಪುರದ ಸರ್ಕಾರಿ ಗೋಮಾಳವನ್ನು ಕ್ರೈಸ್ತ ಮಿಷನರಿಗಳಿಗೆ ಹಸ್ತಾಂತರಿಸಿ ಬೆಟ್ಟದ ಮೇಲೆ ಕ್ರೈಸ್ತರ ಮೂರ್ತಿಯನ್ನು ನಿರ್ಮಿಸಲು ಅಡಿಪಾಯ ಹಾಕುತ್ತದೆ. ಕ್ರೈಸ್ತರು ಮೂರ್ತಿ ಪೂಜೆ ಮಾಡುವುದಿಲ್ಲ ಅಲ್ಲವೆ?! ಅಂದಮೇಲೆ ಅವರಿಗೆ ಸರ್ಕಾರಿ ಗೋಮಾಳದಲ್ಲಿ ಮೂರ್ತಿ ಏಕೆ ಬೇಕು? ಅಲ್ಲಿ ಮೂರ್ತಿಯ ಬದಲು ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರಿ ಶಾಲೆಯನ್ನು ಕಟ್ಟಬಹುದಲ್ಲ?!!


ಈ ತರಹ ಕಾಂಗ್ರೆಸ್ ಪಕ್ಷ ಹಿಂದೂಗಳ ವಿರುದ್ಧ ನಡೆಸಿದ ಅಪರಾಧಗಳು ಅಸಂಖ್ಯ!

ಇಂತಹ ಕಾಂಗ್ರೆಸ್ ಪಕ್ಷಕ್ಕೆ ರಾಮಜನ್ಮ ಭೂಮಿಯಲ್ಲಿ ಭಾಜಪದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಂದ ಮಂದಿರಕ್ಕೆ ಶಿಲಾನ್ಯಾಸವಾಗಿ ಪ್ರಪಂಚದಾದ್ಯಂತ ಇರುವ ಹಿಂದೂಗಳು ರಾಮನಾಮ ಜಪ ಮಾಡುವುದನ್ನು ನೋಡಿ ತಮ್ಮ ರಾಜಕೀಯ ಭವಿಷ್ಯತ್ತು ಕಣ್ಣೆದುರಿಗೆ ಬಂದಿರಬಹುದು!!!

ಆದ್ದರಿಂದಲೇ ಎಲ್ಲಾ ಕಾಂಗ್ರೆಸ್ ನಾಯಕರು ಹಟ್ಠಾತ್ತನೆ ದುಂಡನೆಯ ಟೋಪಿ ಬಿಟ್ಟು ಅದರ ಬದಲು ರುಮಾಲು, ಹಣೆ-ತಿಲಕ, ಕೇಸರಿ ವಸ್ತ್ರ, ಇತ್ಯಾದಿಗಳನ್ನು ಹೊತ್ತು "ಶ್ರೀರಾಮ ನಾಮ ಜಪಿಸಲು" ಶುರು ಮಾಡಿದ್ದಾರೆ.

"ಹಿಂದೂಗಳು ಒಗ್ಗಟ್ಟಾಗಿ ನಿಂತ ದಿನವೇ ಕಾಂಗ್ರೆಸ್ ರಾಜಕಾರಣಿಗಳೆಲ್ಲ ಜನಿವಾರ ತೊಟ್ಟು ಓಡಾಡಲು ಆರಂಭಿಸುತ್ತಾರೆ" ಎಂದು ವೀರ ಸಾವರ್ಕರರು ನುಡಿದಿದ್ದ ಭವಿಷ್ಯ ಈಗ ನಮ್ಮೆಲ್ಲರ ಕಣ್ಣೆದುರು ನಿಜವಾಗಿದೆ!


ವೇಷ ತೊಟ್ಟು (ಅಂದು ಟೋಪಿ, ಇಂದು ರುಮಾಲು, ನಾಳೆ ಇನ್ನೇನೊ) ಓಲೈಕೆ ರಾಜಕಾರಣವನ್ನೇ ಮೈದುಂಬಿಕೊಂಡಿರುವ ಕಾಂಗ್ರೆಸ್ನಂತಹ ಪಕ್ಷಗಳ ಬಗ್ಗೆ ಎಚ್ಚರದಿಂದಿರಿ. ಯಾವುದೇ ಸಮಾಜಕ್ಕೆ ಈ ತರಹದ ಪಕ್ಷಗಳು ನಂಬಿಕೆಗೆ ಅರ್ಹವಲ್ಲ.



  ಉಲ್ಲೇಖಗಳು/ಹೆಚ್ಚಿನ ಮಾಹಿತಿ