ಡಕ್ ಡಕ್ ಗೊ - ಏನು? ಏಕೆ? ಹೇಗೆ? - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಏನಿದು "ಡಕ್ ಡಕ್ ಗೊ"?

                  "ಡಕ್ ಡಕ್ ಗೊ" ಎನ್ನುವುದು ಒಂದು ಹುಡುಕಾಟದ ತಾಣ. ಇದು ಗೂಗಲ್ ಸರ್ಚ್ ಗೆ ಒಂದು ಪರ್ಯಾಯ ಸರ್ಚ್ ಎಂಜಿನ್ ಎನ್ನಬಹುದು. ಗೂಗಲ್ ಸರ್ಚ್ ನಂತೆಯೇ ಡಕ್ ಡಕ್ ಗೊ ಅನ್ನು ಅಂತರ್ಜಾಲದಲ್ಲಿ ಮಾಹಿತಿಯನ್ನು ಹುಡುಕಲು ಬಳಸಬಹುದು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಏಕೆ "ಡಕ್ ಡಕ್ ಗೊ"?

೧. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಡಕ್ ಡಕ್ ಗೊ ಸಂಗ್ರಹಿಸುವುದಿಲ್ಲ.

                  ನೀವು ಅಂತರ್ಜಾಲದಲ್ಲಿ ಹುಡುಕಾಟ ನಡೆಸುವಾಗ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಗೂಗಲ್, ಬಿಂಗ್, ಮತ್ತಿತರೆ ಸರ್ಚ್ ಎಂಜಿನ್ಗಳು ಕಲೆಹಾಕುತ್ತವೆ. ಈ ನಿಮ್ಮ ವೈಯಕ್ತಿಕ ಮಾಹಿತಿಯು "ನೀವು ಹುಡುಕಿದ ಪದ ಅಥವಾ ವಾಕ್ಯ, ನಿಮ್ಮ ಬ್ರೌಸರ್ ಮಾಹಿತಿ, ನಿಮ್ಮ ಸ್ಥಳ, ನೀವು ಲಾಗಿನ್ ಆಗಿದ್ದರೆ ನಿಮ್ಮ ಪ್ರೊಫೈಲ್ ಮಾಹಿತಿ, ನೀವು ಜಾಲಾಡಿದ ತಾಣಗಳು, ನೀವು ವೈಫೈ ಬಳಸುತ್ತಿದ್ದರೆ ಅದರ ಮಾಹಿತಿ ಇಲ್ಲವೇ ನಿಮ್ಮ ಅಂತರ್ಜಾಲ ಸಂಪರ್ಕದ ಮಾಹಿತಿ, ಇತ್ಯಾದಿಗಳನ್ನು" ಒಳಗೊಂಡಿರುತ್ತದೆ.
                  ಡಕ್ ಡಕ್ ಗೊ ಈ ರೀತಿ ನಿಮಗೆ ಸಂಬಂಧಪಟ್ಟ ಯಾವುದೇ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಇದರಿಂದಾಗಿ ನೀವು ಆರಾಮಾಗಿ ಏನನ್ನು ಬೇಕಾದರು "ಡಕ್ ಡಕ್ ಗೊ" ಬಳಸಿ ಹುಡುಕಬಹುದು.

೨. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಇತರರಿಗೆ ಮಾರಾಟ ಮಾಡುವುದಿಲ್ಲ.

                  ಸಂಗ್ರಹಿಸಿದ ಈ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಗೂಗಲ್ ನಿಮಗೆ ಗುರಿಪಡಿಸಿದ ಜಾಹೀರಾತನ್ನು ತೋರಿಸಲು ಬಳಸುತ್ತದೆ. ಆದರೆ, ಇದರಿಂದಾಗಿ ನೀವು ನಿಮಗಷ್ಟೇ ತಿಳಿದಿದೆ ಎಂದುಕೊಳ್ಳುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಗೂಗಲ್ ತನ್ನ ಜಾಹೀರಾತುದಾರರಿಗೆ ಮಾರಾಟ ಮಾಡಿ ಅದರಿಂದ ಹಣ ಗಳಿಸುತ್ತದೆ. ಇದರರ್ಥ ನಿಮ್ಮ ಗುಪ್ತ ಮಾಹಿತಿಯನ್ನು ಗೂಗಲ್ ಯಾರಿಗೆ ಬೇಕಾದರೂ ಮಾರಬಹುದು!

                  ಡಕ್ ಡಕ್ ಗೊ ನಿಮ್ಮ ಮಾಹಿತಿಯನ್ನು ಸಂಗ್ರಹಿಸುವುದೇ ಇಲ್ಲ, ಇನ್ನು ಮಾರುವುದೆಲ್ಲಿಂದ!

೩. ಡಕ್ ಡಕ್ ಗೊ ಹುಡುಕಾಟದ ಫಲಿತಾಂಶಗಳಲ್ಲಿ ಪಕ್ಷಪಾತ ಮಾಡುವುದಿಲ್ಲ.

                  ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕಲೆಹಾಕಿದಾಗ ಮುಂದೆ ನೀವು ಏನನ್ನೇ ಹುಡುಕಿದರು ಗೂಗಲ್ ತಾನು ಬಯಸಿದ 'ಹುಡುಕಾಟದ ಫಲಿತಾಂಶಗಳನ್ನಷ್ಟೇ' ನಿಮಗೆ ತೋರಿಸುತ್ತದೆ. ಇದರಿಂದಾಗಿ ನಿಮಗೆ ಪಕ್ಷಾತೀತವಾದ ಮಾಹಿತಿ ದೊರಕದೇಹೋಗಬಹುದು. ಗೂಗಲ್ ಪಕ್ಷಪಾತ ಮಾಡುತ್ತದೆ ಎನ್ನುವುದನ್ನು ನೀವು ಈಗಾಗಲೆ ಕೇಳಿರಬೇಕಲ್ಲವೆ? ಅಥವಾ ತನ್ನ ಪಕ್ಷಪಾತಿ ಧೋರಣೆಗೆ ಪ್ರಪಂಚದ ವಿವಿಧ ದೇಶಗಳಲ್ಲಿ ಗೂಗಲ್ ಪ್ರಶ್ನೆಯನ್ನು ಎದುರಿಸಿರುವುದರ ಬಗ್ಗೆ ಅರಿವಿದೆಯಲ್ಲವೆ?
                  ಡಕ್ ಡಕ್ ಗೊ ನಿಮ್ಮ ಹುಡುಕಾಟದ ಇತಿಹಾಸವನ್ನು ಸಂಗ್ರಹಿಸುವುದಿಲ್ಲವಾದ್ದರಿಂದ ನೀವು ಯಾವುದೇ ಸಮಯದಲ್ಲೂ ಏನೇ ಹುಡುಕಿದರೂ ಅದಕ್ಕೆ ಪಕ್ಷಾತೀತವಾದ ಫಲಿತಾಂಶಗಳನ್ನು ತೋರಿಸುತ್ತದೆ.

೪. ನಿಮ್ಮ ಅಂತರ್ಜಾಲದ ಚಟುವಟಿಕೆಗಳನ್ನು ಜಾಡುಹಿಡಿಯುವುದಿಲ್ಲ (ಟ್ರ್ಯಾಕ್ ಮಾಡುವುದಿಲ್ಲ).

                  ಪ್ರಪಂಚದಲ್ಲಿ ಪ್ರಚಲಿತವಾಗಿರುವ ಜಾಲತಾಣಗಳಲ್ಲಿ ಶೇಕಡ ೭೫ ರಷ್ಟು ತಾಣಗಳಲ್ಲಿ ಗೂಗಲ್ ಟ್ರ್ಯಾಕರ್ ಗಳನ್ನು ಅಡಗಿಸಿಡುತ್ತದೆ. ಇದರಿಂದಾಗಿ ಆ ತಾಣಗಳಿಗೆ ಭೇಟಿನೀಡುವ ಜನರ ಮಾಹಿತಿಯನ್ನು ಕದಿಯಲು ಗೂಗಲ್ ಗೆ ಸುಲಭವಾಗುತ್ತದೆ. ನೀವು ಅಂತರ್ಜಾಲದಲ್ಲಿ ಯಾವುದೇ ಪ್ರಚಲಿತ ತಾಣಗಳನ್ನು ಜಾಲಾಡಿದರೂ ಅದರ ಬಗ್ಗೆ ಗೂಗಲ್ ಗೆ ಅರಿವಿರುತ್ತದೆ.
                  ಡಕ್ ಡಕ್ ಗೊ ಈ ರೀತಿಯ ಟ್ರ್ಯಾಕರ್ ಗಳನ್ನು ತಡೆಹಿಡಿಯುತ್ತದೆ.

"ಡಕ್ ಡಕ್ ಗೊ"ವನ್ನು ಬಳಸುವುದು ಹೇಗೆ?

                  "ಡಕ್ ಡಕ್ ಗೊ" ಡೆಸ್ಕ್ಟಾಪ್ ಆವೃತ್ತಿಯನ್ನು ಹೇಗೆ ಬಳಸುವುದು ಎಂದು ತಿಳಿಯಲು ಅಥವಾ ಅದನ್ನು ಕನ್ನಡಕ್ಕೆ ಹೊಂದಿಸುವುದು ಹೇಗೆಂದು ತಿಳಿಯಲು ಅಥವಾ ಅದನ್ನು ಕನ್ನಡದಲ್ಲಿ ಬಳಸುವುದು ಹೇಗೆಂದು ತಿಳಿಯಲು ಈ ಲೇಖನವನ್ನು ಅನುಸರಿಸಿ:
ಡಕ್ ಡಕ್ ಗೊ (ಡೆಸ್ಕ್ಟಾಪ್) ಕನ್ನಡ - ಹಳತು ಹೊನ್ನು

                  "ಡಕ್ ಡಕ್ ಗೊ" ಮೊಬೈಲ್ ತಂತ್ರಾಂಶವನ್ನು ಹೇಗೆ ಬಳಸುವುದು ಎಂದು ತಿಳಿಯಲು ಅಥವಾ ಅದನ್ನು ಕನ್ನಡಕ್ಕೆ ಹೊಂದಿಸುವುದು ಹೇಗೆಂದು ತಿಳಿಯಲು ಅಥವಾ ಅದನ್ನು ಕನ್ನಡದಲ್ಲಿ ಬಳಸುವುದು ಹೇಗೆಂದು ತಿಳಿಯಲು ಈ ಲೇಖನವನ್ನು ಅನುಸರಿಸಿ:
ನಿಸ್ತಂತುವಿನಲ್ಲಿ/ಮೊಬೈಲ್ನಲ್ಲಿ ಡಕ್ ಡಕ್ ಗೊ ಬಳಕೆ- ಹಳತು ಹೊನ್ನು





ಉಲ್ಲೇಖಗಳು/ಹೆಚ್ಚಿನ ಮಾಹಿತಿ:
೧. https://duckduckgo.com/spread
೨. Why should I use DuckDuckGo instead of Google?
      https://www.quora.com/Why-should-I-use-DuckDuckGo-instead-of-Google