ಭೂಮಿಯ ಮೇಲಿನ ಸ್ವರ್ಗವು ಭೂಮಿಯ ಮೇಲಿನ ನರಕವಾದಾಗ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಸರಿಯಾಗಿ ಇದೇ ದಿವಸ (ಜನೆವರಿ ೧೯), ಭೂಮಿಯ ಮೇಲಿನ ಸ್ವರ್ಗವು ಭೂಮಿಯ ಮೇಲಿನ ನರಕವಾಗಿ ಮಾರ್ಪಟ್ಟಿದ್ದು!

ನೀವೊಬ್ಬ ಜಾತ್ಯಾತೀತ ಹಿಂದೂ ಪ್ರಾಧ್ಯಾಪಕರೆಂದು ಭಾವಿಸಿ. ಮತ್ತು ಇದೇ ದಿವಸ ನೀವು ನಿಮ್ಮ ಮನೆಯಲ್ಲಿ ವಿಶ್ರಾಂತವಾಗಿ ಕುಳಿತಿರುವಾಗ ಯಾರೋ ಮನೆಯ ಬಾಗಿಲನ್ನು ತಟ್ಟುವ ಶಬ್ಧ ಕೇಳುತ್ತದೆ. ಯಾರು ಬಂದಿರಬಹುದೆಂದು ನೋಡಲು ಹೋದ ನಿಮ್ಮ ಪತ್ನಿ ಹೇಳುತ್ತಾರೆ "ಇವರ್ಯಾರೋ ಭಯಾನಕವಾಗಿ ಕಾಣುತ್ತಿದ್ದಾರೆ" ಎಂದು. ನೀವಾಗ ಇಣುಕಿ ನೋಡಿ ನಿಮ್ಮ ಪತ್ನಿಗೆ ಹೇಳುತ್ತೀರಿ "ಇಲ್ಲಾ, ಹಾಗೇನಿಲ್ಲ. ಅವರೆಲ್ಲ ನನ್ನ ವಿದ್ಯಾರ್ಥಿಗಳು. ಅವರನ್ನು ಒಳಗೆ ಕರೆ" ಎಂದು. ನಿಮ್ಮ ವಿದ್ಯಾರ್ಥಿಗಳು ಮನೆಯೊಳಗೆ ಬಂದ ತಕ್ಷಣ ನಿಮ್ಮ ಕೈಕಾಲುಗಳನ್ನು ಬಿಗಿಹಿಡಿದು ನಿಮ್ಮ ಕಣ್ಣೆದುರಿಗೇ ನಿಮ್ಮ ಪತ್ನಿಯ ಮೇಲೆ ಅತ್ಯಾಚಾರ ಮಾಡುತ್ತಾರೆ! ನಿಮ್ಮದೇ ವಿದ್ಯಾರ್ಥಿಗಳು! ನಿಮಗೆ ತಿಳಿದಿರುವ, ಒಳ್ಳೆಯವರೆನಿಸಿದ, ಜಾತ್ಯಾತೀತ ಮುಸ್ಲಿಂ ಹುಡುಗರು!

ನೀವೊಬ್ಬ ಜಾತ್ಯಾತೀತ ಹಿಂದೂ ನಾಗರಿಕರೆಂದು ಭಾವಿಸಿ. ಮತ್ತು ನೀವು ಯಥಾಪ್ರಕಾರ ಪ್ರತಿದಿನ ಅಥವಾ ವಾರಕ್ಕೊಮ್ಮೆ ನಿಮ್ಮ ಜಾತ್ಯಾತೀತ ಮುಸ್ಲಿಂ ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತೀರಿ. ಆದರೆ, ಈ ದಿನ, ನಿಮ್ಮ ಅದೇ ಕ್ರಿಕೆಟ್ ಆಡಲು ಬರುವ ಜಾತ್ಯಾತೀತ ಮುಸ್ಲಿಂ ಗೆಳೆಯರು ನಿಮ್ಮ ಮನೆಯೊಳಗೆ ನುಗ್ಗಿಬರುತ್ತಾರೆ. ಮತ್ತು ನಿಮ್ಮ ಮನೆಯನ್ನು ದೋಚಿ ಕೊನೆಗೆ ನಿಮ್ಮ ಮನೆಗೆ ಬೆಂಕಿ ಹಚ್ಚುತ್ತಾರೆ!

ನೀವೊಬ್ಬ ಎಲ್ಲಾ ಜಾತಿಯ ಸ್ನೇಹಿತರನ್ನು ಹೊಂದಿರುವ ಜಾತ್ಯಾತೀತ ಹಿಂದೂ ನಾಗರಿಕರೆಂದು ಭಾವಿಸಿ. ದೀಪಾವಳಿ ಮುಂತಾದ ಹಬ್ಬ-ಹರಿದಿನಗಳಲ್ಲಿ ನೀವು ಜಾತ್ಯಾತೀತ ಮುಸ್ಲಿಂ ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ಸಿಹಿ ತಿನಿಸುಗಳನ್ನು ಹಂಚಿಕೊಳ್ಳುತ್ತೀರಿ. ಆದರೆ, ಈ ದಿನ, ನಿಮ್ಮ ಅದೇ ಜಾತ್ಯಾತೀತ ಮುಸ್ಲಿಂ ಸ್ನೇಹಿತರು ಮತ್ತು ನೆರೆಹೊರೆಯವರು ನಿಮ್ಮ ಮೇಲೆ ಹಲ್ಲೆ ಮಾಡಿ ನಿಮ್ಮನ್ನೇ ಕೊಂದುಹಾಕುತ್ತಾರೆ!



ಹಿಟ್ಲರ್ ಹೇಗೆ ಯಹೂದಿಗಳನ್ನು ಕೊಂದ ಎಂಬುದನ್ನು ಇಡೀ ವಿಶ್ವವೇ ಪ್ರತಿವರ್ಷ ನೆನೆಯುತ್ತದೆ. ಆದರೆ ಜಾಗತಿಕ ಮಟ್ಟದಲ್ಲಿ ಅದೆಷ್ಟು ಜನರಿಗೆ ಮತಾಂಧ ಮುಸ್ಲೀಮರು ನಡೆಸಿದ ಕಾಶ್ಮೀರಿ ಪಂಡಿತರ ಮಾರಣಹೋಮದ ಬಗ್ಗೆ ತಿಳಿದಿದೆ?! ಜಾಗತಿಕ ಮಟ್ಟದ ಅದೆಷ್ಟು ಸಂಸ್ಥೆಗಳು ಈ ಕ್ರೌರ್ಯದಲ್ಲಿ ಪ್ರಾಣ ಕಳೆದುಕೊಂಡ ಅಮಾಯಕ ಜೀವಗಳಿಗೋಸ್ಕರ ಮೌನಾಚರಣೆ ಮಾಡುತ್ತವೆ?!



ಭಾಜಪ ಸರ್ಕಾರಕ್ಕೆ ಧನ್ಯವಾದಗಳು, ಈಗಲಾದರು ದೇಶವಿರೋಧಿ ಕಾನೂನು (೩೭೦ನೇ ಕಲಂ) ಅಂತ್ಯ ಕಂಡಿದೆ. ಕಾಶ್ಮೀರ ಕಣಿವೆಯಲ್ಲಿ ಅಮಾಯಕ ಜೀವಗಳಿಗೆ ರಕ್ಷಣೆ ಮರಳಿದೆ.

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ನಮ್ಮದೇ ದೇಶದ ಅಮಾಯಕ ಜನರಿಗೆ ಒದಗಿಸಬೇಕಾದ ನ್ಯಾಯದ ಕಡೆಗಿನ ಮೊದಲ ಸಕಾರಾತ್ಮಕ ಹೆಜ್ಜೆ ಕಾಣಲು ಮೂವತ್ತು ವರ್ಷಗಳೇ ಬೇಕಾದವು (೩೭೦ನೇ ಕಲಮನ್ನು ಕಿತ್ತೆಸೆಯಲು ಮತ್ತು ಕಲ್ಲು ತೂರುವವರ ಜಾಲವನ್ನು ನಾಶಮಾಡಲು). ಈ ಮೂವತ್ತು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಮ್ಮ ಹಿಂದಿನ ಪ್ರಧಾನಿಗಳೆಲ್ಲ ಏನು ಮಾಡಿದರು?!

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ನಾವೇಕೆ ಈಗ ಕಾಶ್ಮೀರಿ ಪಂಡಿತರ ಮಾರಣಹೋಮದ ಕುರಿತು ಚರ್ಚಿಸಬೇಕು?
ಕಾಶ್ಮೀರಿ ಪಂಡಿತರ ಮಾರಣಹೋಮವನ್ನು ನಾವೇಕೆ ನೆನಪಿಡಬೇಕು?

ಈಗ ಯಹೂದಿಗಳು ಹಾಯಾಗಿ ಜರ್ಮನಿಯಲ್ಲಿ ಜೀವನ ನಡೆಸಬಹುದು ಆದರೆ ಹಿಟ್ಲರ್ ಆಡಳಿತದಲ್ಲಿ ಪ್ರಾಣ ಕಳೆದುಕೊಂಡ ಅಮಾಯಕ ಜೀವಗಳಿಗೆ ಈಗಲೂ ಮೌನಾಚರಣೆ ನಡೆಸುತ್ತಾರೆ. ಅದೇ ರೀತಿ ನಾವೆಂದಿಗೂ ಕಾಶ್ಮೀರಿ ಪಂಡಿತರ ಮಾರಣಹೋಮವನ್ನು ಮರೆಯಬಾರದು. ಏಕೆಂದರೆ, ಹಿಂದೆ ನಡೆದ ಆಘಾತಕಾರಿ ಘಟನೆಗಳು ಮುಂದೆ ಮರುಕಳಿಸಬಾರದು.

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ನಮ್ಮ ಮುಸ್ಲಿಂ ಸಹೋದರ & ಸಹೋದರಿಯರು ಕಾಶ್ಮೀರಿ ಪಂಡಿತರ ಮಾರಣಹೋಮವನ್ನು ಮರೆಯಲೇಬಾರದು. ಏಕೆಂದರೆ:
ಅಲ್ಲಾನ ಹೆಸರನ್ನು ಹೇಳಿಕೊಂಡು ನಿಮ್ಮ ಅಥವಾ ನಿಮ್ಮ ಮಕ್ಕಳ ತಲೆಕೆಡಿಸಿ ನಿಮ್ಮನ್ನು ನಿಮ್ಮದೇ ಹಿಂದುಸ್ಥಾನಿ ಸ್ನೇಹಿತರ ವಿರುದ್ಧ ಎತ್ತಿ ಕಟ್ಟಲು ಯಾರಾದರೂ ಬಂದರೆ, ಅಂಥವರನ್ನು ಆರಕ್ಷಕರಿಗೆ ಒಪ್ಪಿಸಿ.
ನೀವು ಯಥಾಪ್ರಕಾರ ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಹೋದಾಗ ಅಲ್ಲಿರುವ ಮುಲ್ಲಾ/ಮೌಲ್ವಿಯು ಅಲ್ಲಾನ ಹೆಸರನ್ನು ಹೇಳಿಕೊಂಡು ನಿಮ್ಮ ಅಥವಾ ನಿಮ್ಮ ಮಕ್ಕಳ ತಲೆಕೆಡಿಸಿ ನಿಮ್ಮನ್ನು ನಿಮ್ಮದೇ ಹಿಂದುಸ್ಥಾನದ ವಿರುದ್ಧ ಎತ್ತಿ ಕಟ್ಟಲು ಬಂದರೆ, ಅಂಥವರನ್ನು ಆರಕ್ಷಕರಿಗೆ ಒಪ್ಪಿಸಿ.

ಯಾವಾಗ ಹಿಂದುಸ್ಥಾನಿ ಮುಸ್ಲಿಮರು ಹಿಂದುಸ್ಥಾನಿ ಇಸ್ಲಾಮನ್ನು ತಮ್ಮ ಹಿಡಿತಕ್ಕೆ ಪಡೆಯುವರೋ ಆಗಷ್ಟೇ "ಹಿಂದೂ-ಮುಸ್ಲಿಂ ಭಾಯಿ-ಭಾಯಿ" ಎನ್ನುವ ಮಾತಿಗೆ ಒಂದು ಅರ್ಥ ಸಿಗುತ್ತದೆ!

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ನಮ್ಮ ದೇಶದ ರಕ್ಷಣಾ ಬಲಗಳ ಮೇಲೆ "ಮಾನವ ಹಕ್ಕುಗಳ ಉಲ್ಲಂಘನೆ"ಯ ದಾವೆ ಹೂಡುವ ಜಾತ್ಯಾತೀತರೆನಿಸಿಕೊಳ್ಳುವ ಅದೆಷ್ಟೋ ಜನರಿದ್ದಾರೆ. ಆದರೆ ಕಾಶ್ಮೀರಿ ಹಿಂದೂಗಳ "ಮಾನವ ಹಕ್ಕುಗಳ" ಕುರಿತು ಅದೆಷ್ಟು ಜಾತ್ಯಾತೀತ ಜನರು ಧ್ವನಿ ಎತ್ತುತ್ತಾರೆ?!

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಕೇಂದ್ರಾಡಳಿತ ಪ್ರದೇಶವಾಗಿರುವ ಕಾಶ್ಮೀರದಲ್ಲಿ ಅಮಾಯಕ ಭಾರತೀಯರ ಮಾರಣಹೋಮಕ್ಕೆ ಕಾರಣರಾದ ದೇಶ ವಿರೋಧಿ ಬಣಗಳ ಜೊತೆ ಗುರುತಿಸಿಕೊಳ್ಳುವ ಯಾರೇ ಆಗಲಿ, ಅವರನ್ನು ಕೇವಲ ದೇಶದ ವಿರೋಧಿಯಲ್ಲ ಬದಲಿಗೆ ಇಡೀ ಮನುಕುಲದ ವಿರೋಧಿಗಳನ್ನಾಗಿ ಕಾಣಬೇಕು.

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಮತ್ತು ಕೊನೆಯಲ್ಲಿ...

ಕಾಶ್ಮೀರಿ ಹಿಂದೂಗಳ ಮಾರಣಹೋಮವನ್ನು ನಾವೆಂದಿಗೂ ಮರೆಯುವುದಿಲ್ಲ!

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು







  ಉಲ್ಲೇಖಗಳು