ಆರೋಗ್ಯ ಸೇತು - ಇನ್ಮೇಲೆ ಅತ್ಯವಶ್ಯಕ - ಹಳತು ಹೊನ್ನು


"ಇನ್ನೇನು ಲಾಕ್ ಡೌನ್ ಮುಗೀತಾ ಬಂತು ಇನ್ಯಾಕೆ ಈ ಆರೋಗ್ಯ ಸೇತು ಎಲ್ಲಾ" ಎಂದು ಅಂದುಕೊಳ್ಳಬೇಡಿ. ಈ ತಂತ್ರಾಂಶದ ನಿಜವಾದ ಸಹಾಯವಾಗುವುದೇ ಇನ್ಮುಂದೆ!

ಇಲ್ಲಿಯವರೆಗೆ ಕಡಿಮೆಯೆಂದರು ಶೇಕಡಾ ೯೮ ಪ್ರತಿಶತ ಜನ ಮನೆಯಲ್ಲಿದ್ದು ತಮ್ಮ ಹಾಗೂ ಇತರರ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದು ನಮ್ಮ ದೇಶಕ್ಕೆ ಹೆಮ್ಮೆಯ ವಿಷಯ (ಬೇರೆ ದೇಶಗಳಿಗೆ ಹೋಲಿಸಿದರೆ, ಇಲ್ಲಿ ನಮ್ಮ ಭಾರತ ಸರ್ಕಾರದ ಕಾರ್ಯ ವೈಖರಿಯೂ ಮೆಚ್ಚುವಂತಹದ್ದು). ಆದರೆ ಇನ್ನುಮೇಲೆ ಅವಶ್ಯಕ ಕೆಲಸಗಳಿಗೆ ನೀವು ಹೊರಗಡೆ ಹೋಗುವುದು ಹೆಚ್ಚಾಗಬಹುದು. ನೀವು ಹೊರಗಡೆ ಇರುವಾಗ 'ಆರೋಗ್ಯದ ಸಮಸ್ಯೆ ಇರುವ ಬೇರೆಯ ವ್ಯಕ್ತಿ ಹತ್ತಿರಕ್ಕೆ ಬಂದರೆ' ನಿಮಗೆ ಆರೋಗ್ಯ ಸೇತು ತಂತ್ರಾಂಶ ಎಚ್ಚರಿಸುತ್ತದೆ. ಇದರಿಂದ ನೀವು ಲಾಕ್ ಡೌನ್ ಮುಗಿದ ಮೇಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಿಮಗೆ ಒಂದು ಅಲಾರಂ ಇದ್ದಂತೆ ಆರೋಗ್ಯ ಸೇತು ಸಹಾಯವಾಗಬಹುದು.

ಹಾಗಾಗಿ ಆರೋಗ್ಯ ಸೇತು ತಂತ್ರಾಂಶದ ಅತೀ ಅವಶ್ಯಕತೆ ಇರುವುದೇ ಇನ್ನುಮೇಲೆ!

ಈಗಾಗಲೇ ಸಾಕಷ್ಟು ಜನರ ಬಳಿ ಭಾರತ ಸರ್ಕಾರದ ಆರೋಗ್ಯ ಸೇತು ತಂತ್ರಾಂಶ ಇರುವುದು ಒಳ್ಳೆಯ ಸಂಗತಿ. ಇನ್ನೂ ಯಾರಾದರು ಈ ತಂತ್ರಾಂಶವನ್ನು ಹೊಂದಿಲ್ಲದಿದ್ದರೆ, ಈಗಲೇ ಆರೋಗ್ಯ ಸೇತುವನ್ನು ನಿಮ್ಮ ಮೊಬೈಲಿಗಿಳಿಸಿ.

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಪರಿವಿಡಿ



ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು



೧. ತಂತ್ರಾಂಶ ಸ್ಥಾಪನೆ



ಅಂತರ್ಜಾಲ & ಜಿಪಿಎಸ್ ಸಂಪರ್ಕಗೊಂಡಿರುವುದನ್ನು ಖಚಿತಪಡಿಸಿಕೊಳ್ಳಿ.


ಪ್ಲೇ-ಸ್ಟೋರ್ ತೆರೆಯಿರಿ.



ಹುಡುಕು-ಪಟ್ಟಿಯಲ್ಲಿ "ಆರೋಗ್ಯ ಸೇತು (Aarogya Setu)" ಎಂದು ಹುಡುಕಿ.



ಚಿತ್ರವನ್ನು ಗಮನಿಸಿ, ಸರಿಯಾದ ತಂತ್ರಾಂಶ ಆಯ್ಕೆಮಾಡಿ.



ತಂತ್ರಾಂಶದ ಹೆಸರು (Aarogya Setu) & ತಯಾರಕರ ಮಾಹಿತಿ(NIC eGov Mobile Apps)ಯನ್ನು ಖಚಿತಪಡಿಸಿಕೊಳ್ಳಿ. ನಂತರ "ಇನ್ಸ್ಟಾಲ್ ಮಾಡಿ" ಗುಂಡಿಯನ್ನು ಒತ್ತಿ.



ತಂತ್ರಾಂಶ ಸ್ಥಾಪನೆ ಮುಗಿಯುವವರೆಗೆ ತಾಳ್ಮೆಯಿಂದಿರಿ.



"ತೆರೆ" ಗುಂಡಿಯನ್ನು ಒತ್ತಿ ಅಥವಾ...... (ಮುಂದಿನ ಚಿತ್ರ ಮಾಹಿತಿ ಓದಿ).



ಸ್ಥಾಪಿಸಲಾಗಿರುವ ತಂತ್ರಾಂಶದ ಗುಂಡಿಯನ್ನು ಒತ್ತಿ.


ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

೨. ಪ್ರೊಫೈಲ್ ಹೊಂದಿಸುವುದು



ಭಾಷೆಯನ್ನು ಆಯ್ಕೆಮಾಡಿ (ನೆನಪಿಡಿ, ನಿಮ್ಮ ಭಾಷೆಯನ್ನು ಬಳಸಿ-ಬೆಳೆಸುವುದು ನಿಮ್ಮದೇ ಜವಾಬ್ದಾರಿ. ಕಣ್ಮುಚ್ಚಿ ಆಂಗ್ಲ ಆಯ್ಕೆಮಾಡದೆ, ನಿಮ್ಮ-ನಿಮ್ಮ ಮಾತೃಭಾಷೆಗಳನ್ನೇ ಆಯ್ದುಕೊಳ್ಳಿ), "ಮುಂದೆ (Next)" ಗುಂಡಿಯನ್ನು ಒತ್ತಿ.



ತಂತ್ರಾಂಶದ ಪರದೆಯ ಮೇಲೆ ಕಾಣುವ ಮಾಹಿತಿಯನ್ನು ಓದಿ-ಅರ್ಥೈಸಿಕೊಂಡು "ಮುಂದೆ" ಗುಂಡಿಯನ್ನು ಎರಡು/ಮೂರು ಸಲ ಒತ್ತುತ್ತಾ ಕೊನೆ ಪುಟದವರೆಗೆ ಸಾಗಿ.





"ಈಗಲೇ ನೋಂದಣಿ ಮಾಡಿ" ಗುಂಡಿಯನ್ನು ಒತ್ತಿ.



"ನಾನು ಒಪ್ಪುತ್ತೇನೆ (I Agree)" ಗುಂಡಿಯನ್ನು ಒತ್ತಿ.



ಸ್ಥಳ ಪ್ರವೇಶದ ಅನುಮತಿ ಕೇಳಲ್ಪಟ್ಟರೆ, "ಅನುಮತಿಸಿ" ಗುಂಡಿಯನ್ನು ಒತ್ತಿ. ಇಲ್ಲವಾದರೆ ಮುಂದಿನ ಚಿತ್ರಕ್ಕೆ ಹೊರಡಿ.



ಬ್ಲೂಟೂತ್ ಅನುಮತಿಗೆ ಕೇಳಲ್ಪಟ್ಟರೆ, "ಅನುಮತಿಸಿ" ಗುಂಡಿಯನ್ನು ಒತ್ತಿ. ಇಲ್ಲವಾದರೆ ಮುಂದಿನ ಚಿತ್ರಕ್ಕೆ ಹೊರಡಿ.



ನಿಸ್ತಂತು/ಮೊಬೈಲ್ ಸಂಖ್ಯೆ ನಮೂದಿಸಿದ ನಂತರ "ಸಲ್ಲಿಸಿ" ಗುಂಡಿಯನ್ನು ಒತ್ತಿ.



ಓಟಿಪಿ ನಮೂದಿಸಲು ಕೇಳಲ್ಪಟ್ಟರೆ, ಬಂದಿರಬಹುದಾದ ಓಟಿಪಿ ನಮೂದಿಸಿ, "ನಾನು ಒಪ್ಪುತ್ತೇನೆ" ಗುಂಡಿಯನ್ನು ಒತ್ತಿ. ಇಲ್ಲವಾದರೆ ಮುಂದಿನ ಚಿತ್ರಕ್ಕೆ ಹೊರಡಿ.


ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

೩. ನಿಮ್ಮ ಆರೋಗ್ಯ ಮಾಹಿತಿ



ನಮಗೆ ಇಲ್ಲಿಂದ ಮುಂದೆ ಸ್ಕ್ರೀನ್ಷಾಟ್ಗಳನ್ನು ನೀಡಲು ಬರುವುದಿಲ್ಲ, ಏಕೆಂದರೆ ಇನ್ಮುಂದಿನ ಹಂತಗಳು ಒಬ್ಬ ವ್ಯಕ್ತಿ ಮಾಡುವ ಆಯ್ಕೆಗಳ ಮೇಲೆ ಬದಲಾಗುತ್ತವೆ. ಹಾಗಾಗಿ ಇಲ್ಲಿಂದ ಮುಂದೆ ಒಂದೇ-ನಿಶ್ಚಿತ ಮಾರ್ಗವಿಲ್ಲ. ಇಲ್ಲಿಂದ ಮುಂದೆ, ತಂತ್ರಾಂಶದ ಮೇಲೆ ಕಾಣುವ ಪ್ರಶ್ನೆಗಳಿಗೆ ನಿಮ್ಮ ನೈಜ ಸ್ಥಿತಿಗೆ ತಕ್ಕಂತೆ ಉತ್ತರ ಸಲ್ಲಿಸುತ್ತಾ ಹೋಗಿ.

ಎಲ್ಲಾ ಪ್ರಶ್ನೋತ್ತರಗಳು ಮುಗಿದ ಮೇಲೆ ತಂತ್ರಾಂಶದ ಮುಖಪುಟ ತೆರೆದುಕೊಂಡು ನಿಮ್ಮ ಆರೋಗ್ಯಕ್ಕೆ ಸಂಭಂದಿಸಿದ ಮಾಹಿತಿ ಅಲ್ಲಿ ಗೋಚರವಾಗುತ್ತದೆ.

ನೆನಪಿಡಿ, ನೀವು ಆರೋಗ್ಯ ಸೇತುವಿನ ಸಹಾಯ ಪಡೆಯಲು, ಬ್ಲೂಟೂತ್ ಸಂಪರ್ಕ ಆರಂಭವಾಗಿರುವಂತೆ ನೋಡಿಕೊಳ್ಳಿ.


ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

"ಅಕಸ್ಮಾತ್ ಯಾರಾದರು ಆರೋಗ್ಯ ಸೇತುವಿನಲ್ಲಿ ಸುಳ್ಳು ಮಾಹಿತಿ ದಾಖಲಿಸಿದರೆ ಹೇಗೆ" - ಎಂಬ ಚಿಂತೆಯೆ?!

ಜೀವ ಕಾಪಾಡಲು ಬಂದ ವೈದ್ಯರು, ಸಾಮಾಜಿಕ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ನಡೆಸಿ, ಆಸ್ಪತ್ರೆಗಳಲ್ಲಿ ಅವರೊಂದಿಗೆ ಅಸಭ್ಯವಾಗಿ ವರ್ತಿಸುವ ದಾನವರು ನಮ್ಮ ದೇಶದಲ್ಲಿ ಇರುವಾಗ; ತಂತ್ರಾಂಶವೊಂದರಲ್ಲಿ ಸುಳ್ಳು ಮಾಹಿತಿ ನೀಡುವ ದ್ರೋಹಿಗಳು ಇರುವುದಿಲ್ಲ ಎಂದುಕೊಳ್ಳುವುದು ಅಸಾಧ್ಯ.

"ಎಲ್ಲವನ್ನೂ ಮೋದಿಯೇ ಮಾಡಲಿ; ಎಲ್ಲವನ್ನೂ ಸರ್ಕಾರವೇ ನಿಭಾಯಿಸಲಿ" ಎಂದುಕೊಂಡು ಕೊಳಚೆಯಲ್ಲಿ ಜೀವನ ನಡೆಸುತ್ತಿರುವವರನ್ನು ಆ ದೇವರೂ ಸಹ ಉದ್ಧಾರ ಮಾಡಲು ಬಯಸುವುದಿಲ್ಲ. ಆ ಜನ ಅಂದಿಗೂ ಕೊಳಕಾಗಿಯೇ ಇದ್ದರು, ಈಗಲೂ ಕೊಳಕಿನಲ್ಲೇ ಇದ್ದಾರೆ, ಮುಂದೆಯೂ ಕೊಳಚೆಯಲ್ಲಿಯೇ ಜೀವನ ನಡೆಸುತ್ತಾರೆ.

ಸ್ವಸ್ಥ ಸಮಾಜಕ್ಕೆ ನನ್ನ ಕಡೆಯಿಂದ ಜವಾಬ್ದಾರಿಯುತ ನಡುವಳಿಕೆ ಇದ್ದರೆ ಅಷ್ಟೇ ಸಾಕು. ಎಲ್ಲ ಸೇರಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಕೈಜೋಡಿಸೋಣ!

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು





  ಉಲ್ಲೇಖಗಳು/ಹೆಚ್ಚಿನ ಮಾಹಿತಿ