ಶ್ರೀರಾಮ ಮತ್ತಾತನ ಮಂದಿರದಿಂದ ಪಾಠಗಳು - ಹಳತು ಹೊನ್ನು


ಶ್ರೀ ರಾಮ ಮತ್ತು ಆತನ ಮಂದಿರದ ಪಯಣ - ಎರಡೂ ಕಠಿಣವಾಗಿದ್ದವು.

  1. ಶ್ರೀರಾಮನ ಜೀವನ ಪಯಣದ ಅಧ್ಯಯನ ಮಾಡಿ
  2. ಅಯೋಧ್ಯೆಯಲ್ಲಿರುವ ಶ್ರೀರಾಮನ ಪುಣ್ಯಕ್ಷೇತ್ರದ ಪಯಣವನ್ನು ಅಧ್ಯಯನ ಮಾಡಿ

ಅವೆರಡನ್ನೂ ಅಧ್ಯಯನ ಮಾಡಿದಮೇಲೆ ನಿಮ್ಮಲ್ಲಿ ಅಚ್ಚಳಿಯದೆ ಉಳಿಯುವ ಪಾಠವೆಂದರೆ:
"ದುಷ್ಟಶಕ್ತಿಯ ದಮನ ಕಠಿಣವಾದುದು, ಆದರೆ ಅಂತಿಮವಾಗಿ ಕೆಡುಕಿನ ವಿರುದ್ಧ ಒಳಿತು ಗೆದ್ದೇ-ಗೆಲ್ಲುವುದು".


ಶ್ರೀರಾಮ ಒಬ್ಬ ಪುರುಷೋತ್ತಮ. ಆತ ಈ ಭೂಮಿಯಮೇಲೆ ಜೀವಿಸಿದ್ದು ತ್ರೇತಾಯುಗದಲ್ಲಿ. ಹೀಗಿದ್ದರು, ಶ್ರೀರಾಮ ಏನೇ ಆದರೂ ತನ್ನ ಶಸ್ತ್ರವನ್ನು ಎಂದಿಗೂ ಬಿಟ್ಟಿರಲಿಲ್ಲ.


ಪ್ರಸ್ತುತ ಹಿಂದೂಗಳು ಇರುವುದು ಕಲಿಯುಗದಲ್ಲಿ. ಹಾಗಾಗಿ ಶಸ್ತ್ರ & ಶಾಸ್ತ್ರಗಳ ಪ್ರಾಮುಖ್ಯತೆಯನ್ನು ಅವರು ಮರೆಯಲೇಬಾರದು!



ಶಸ್ತ್ರಗಳ ವಿಧ ಮತ್ತು ಶಾಸ್ತ್ರಗಳ ಅನ್ವಯಿಸುವಿಕೆ ಕಾಲಕ್ಕೆ ತಕ್ಕಂತೆ ಬದಲಾಗುತ್ತವೆ.


ಕಾಲಕ್ಕೆ ತಕ್ಕಂತೆ ಶಸ್ತ್ರಗಳ ವಿಧ ಬದಲಾದ ರೀತಿ:
ಹೀಗಿದ್ದ ಶಸ್ತ್ರಗಳು...
ಕಲ್ಲು, ಬಿಲ್ಲು-ಬಾಣ, ಖಡ್ಗ, ಬಂದೂಕು, ಟ್ಯಾಂಕುಗಳು, ಯುದ್ಧನೌಕೆಗಳು, ಯುದ್ಧವಿಮಾನಗಳು
...ಹೀಗಾಗಿವೆ...
  • ಒಂದು ದೇಶದ ರಾಜಕೀಯ ವ್ಯವಸ್ಥೆ (ರಾಜಕಾರಣಿಗಳು, ಪಕ್ಷಗಳು, ನ್ಯಾಯಾಂಗ, ಸಾರ್ವಜನಿಕ ಸೇವಕರು, ಇತ್ಯಾದಿ)
  • ದೇಶದ ಶಿಕ್ಷಣ ವ್ಯವಸ್ಥೆ
  • ಸಂಸ್ಕೃತಿ ಅಥವಾ ಪದ್ಧತಿ ಅಥವಾ ಜೀವನಶೈಲಿ
  • ಚಲನಚಿತ್ರಗಳು, ಪುಸ್ತಕಗಳು, ವಾರ್ತಾಪ್ರಸಾರ ಕೇಂದ್ರಗಳು (ಮಾಧ್ಯಮಗಳು)
  • ಲೇಖಕರು, ಇತಿಹಾಸಕಾರರು, ಶಿಕ್ಷಕರು, ಪ್ರಾಧ್ಯಾಪಕರು, ವೈದ್ಯರು
  • ವಿಐಪಿಗಳು & ದೇಶದ ಇತರ ಪ್ರಭಾವಿ ವ್ಯಕ್ತಿಗಳು
  • ಪ್ರೀಸ್ಟ್ ಗಳು (ಪೋಪ್ ಎನ್ನುವ ಸನ್ಯಾಸಿ ಸ್ವತಃ ದೇಶವೊಂದರ ಅರಸ) & ಕನ್ಯಾಸ್ತ್ರೀಯರು ಅಥವಾ ಮೌಲ್ವಿಗಳು, ಇತ್ಯಾದಿ
  • ಮಹಿಳಾವಾದಿಗಳು
  • ಪರಿಸರವಾದಿಗಳು
  • ಸಾಮಾಜಿಕ ಕಾರ್ಯಕರ್ತರು
  • ಅಬ್ರಹಾಮಿಕ್ ಜಾತಿಗಳು ಮತ್ತವರು ತಮಗೆ ಪವಿತ್ರವೆಂದು ಹೇಳಿಕೊಳ್ಳುವ ಪುಸ್ತಕಗಳು ಮತ್ತು ಆಗಸದಿಂದ ಉದುರಿದ ಕಟ್ಟಳೆಗಳು!
  • ದೇಶವೊಂದನ್ನು ನಿಯಂತ್ರಿಸುವ ಸಂವಿಧಾನ (ಮತ್ತಿತರೆ ಪುಸ್ತಕಗಳು)
  • ಜಾತ್ಯಾತೀತತೆ (ಇದು "ಸರ್ಕಾರಿ ಆಡಳಿತಗಳಲ್ಲಿ ಮೂಗುತೂರಿಸುವ ಕ್ರೈಸ್ತರ ಚರ್ಚ್ ಗಳನ್ನು ಸರ್ಕಾರದಿಂದ ದೂರವಿಡಲೆಂದು ಐರೋಪ್ಯರ ಸಮಸ್ಯೆಗೆ ಕಂಡುಹಿಡಿದಿದ್ದ ಆ ಕಾಲದ" ಒಂದು ಮಾರ್ಗವಷ್ಟೆ)



ಕಾಲಕ್ಕೆ ತಕ್ಕಂತೆ ಶಾಸ್ತ್ರಗಳ ಬಳಕೆಯ ವಿಧ ಬದಲಾದ ರೀತಿ:
ಹೀಗಿದ್ದ ಶಾಸ್ತ್ರಗಳ ಬಳಕೆ...
  • ಯುದ್ಧಕ್ಕೆಂದೆ ಒಂದು ಸ್ಥಳ ಮತ್ತು ಸಮಯದ ನಿಗದಿ
  • ಯುದ್ಧವನ್ನೂ ಸಹ ಧರ್ಮದ ಮಾರ್ಗದಲ್ಲಿ ನಡೆಸಬೇಕು
  • ಅಸ್ತ್ರರಹಿತ ಜನರ ಮೇಲೆ ದಾಳಿ ಮಾಡುವಂತಿಲ್ಲ
  • ಹಿಂದಿನಿಂದ ಬಂದು ದಾಳಿ ಮಾಡುವಂತಿಲ್ಲ
  • ಸೂರ್ಯಾಸ್ತದ ನಂತರ ಯುದ್ಧ ಮಾಡುವಂತಿಲ್ಲ
  • ಅವಶ್ಯವಿದ್ದರೆ ನಿಮ್ಮ ಶತ್ರುವಿಗೂ ಆಸರೆ ನೀಡಬೇಕು
...ಹೀಗಾಗಿವೆ...
  • ಹಿಂದೆ-ಮುಂದೆ-ಬದಿಯಿಂದ ಎಲ್ಲಾ ಕಡೆಯಿಂದ ದಾಳಿ ಮಾಡಬೇಕು
  • ಯುದ್ಧಕೆಂದು ನಿಶ್ಚಿತ ಸಮಯ ಮತ್ತು ಸ್ಥಳವಿಲ್ಲ
  • ಪಾಲಿಸಲು ಯಾವುದೇ ನಿಶ್ಚಿತ ರೀತಿ-ನೀತಿಗಳೆಂಬುದಿಲ್ಲ, ಧಾರ್ಮಿಕ ಮಾರ್ಗವೆಂಬುದಿಲ್ಲ
  • ಭಯೋತ್ಪಾದನೆಗೆ ವಿರುದ್ಧದ ಪ್ರತಿದಾಳಿ (ಭಯೋತ್ಪಾದನೆಯನ್ನು ಒಂದು ಅಸ್ತ್ರದಂತೆ ಹುಟ್ಟುಹಾಕಲಾಗಿತ್ತು ಮತ್ತು ಇಂದಿಗೂ ಅದನ್ನು ಒಂದು ಅಸ್ತ್ರದಂತೆಯೇ ಬಳಕೆ ಮಾಡಲಾಗುತ್ತಿದೆ)
  • ಧರ್ಮದಲ್ಲಿ ನಂಬಿಕೆಯಿಟ್ಟವರಿಗಷ್ಟೇ ಧರ್ಮದ ಮಾರ್ಗಗಳನ್ನು ಅನ್ವಯಿಸಬಹುದು
  • ಧರ್ಮ ≠ ರೆಲಿಜನ್ (ಅಥವಾ ಜಾತಿ) ("ರೆಲಿಜನ್" ಎನ್ನುವುದು ಮಾನವ ನಿರ್ಮಿತ ವಸ್ತು)





  ಉಲ್ಲೇಖಗಳು/ಹೆಚ್ಚಿನ ಮಾಹಿತಿ