ಇದು ಹೊಸ ಹಿಂದುಸ್ಥಾನ.
ಶತ್ರುಗಳ ಮನೆಯೊಳಗೆ ನುಗ್ಗಲೂ ಸಿದ್ಧ,
ವೈರಿಗಳ ಎದೆ ಸೀಳಿ ಪಾಠ ಕಲಿಸಲೂ ಬದ್ಧ!
ನಾವು ಕೆಲ ಪರದೇಶಗಳಿಂದ (ಬ್ರಿಟಿಷರು, ಪೋರ್ಚುಗೀಸರು, ಫ್ರೆಂಚರು, ಡಚ್ಚರು) ಒಂದುಸಲ ಸ್ವಾತಂತ್ರ್ಯವನ್ನು ಪಡೆದೆವು ಎಂದ ಮಾತ್ರಕ್ಕೆ ಆ ದೇಶಗಳು (ಅಥವಾ ಇತರ ದೇಶಗಳು) ಮತ್ತೇ ನಮ್ಮ ಮೇಲೆ ದಾಳಿ ಮಾಡುವುದೇ ಇಲ್ಲವೆಂದು ಅರ್ಥವಲ್ಲ.
ನಮ್ಮ ರಾಷ್ಟ್ರ ಸುಭದ್ರವಾಗಿ ಇರುವವರೆಗೆ ಮಾತ್ರ ನಾವು, ನಮ್ಮ ಭಾಷೆಗಳು, ನಮ್ಮ ಸಂಸ್ಕೃತಿ, ನಮ್ಮ ಗುರುತಾಗಿರುವುದೆಲ್ಲವೂ ಕ್ಷೇಮದಿಂದಿರಲು ಸಾಧ್ಯ.
ದೇಶದ ನೆಲ-ಜಲ, ಜನ, ಸಂಸ್ಕೃತಿಗಳನ್ನು ಭದ್ರವಾಗಿರುವಂತೆ ನೋಡಿಕೊಳ್ಳುವ ಸರ್ಕಾರವನ್ನು ಆಯ್ಕೆಮಾಡುವುದು ಅತೀ ಮುಖ್ಯ. ನಮ್ಮ ಸೈನಿಕರ ಜೀವಗಳಿಗೆ ಬೆಲೆಕೊಡುವ ಮತ್ತು ಆ ಜೀವಗಳನ್ನು ಗೌರವಿಸುವ ಸರ್ಕಾರವನ್ನೇ ಆಯ್ಕೆಮಾಡಿ.