೧೫ನೇ ಆಗಸ್ಟಿಗೆ ೧೫ ಅಂಶಗಳು - ಹಳತು ಹೊನ್ನು



ಭಾರತದ ಹಬ್ಬದಂದು ಸದೃಢ ರಾಷ್ಟ್ರಕ್ಕೆ ಅವಶ್ಯವಿರುವ ೧೫ ಅಂಶಗಳನ್ನು ನೆನಪಿಸಿಕೊಳ್ಳೋಣ !

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು


೧. "ನಮ್ಮ ರಾಷ್ಟ್ರ & "ಜೀವನ ಶೈಲಿ, ಆಹಾರ, ಉಡುಗೆ-ತೊಡುಗೆ, ಭಾಷೆಗಳ" ಸಹಿತಾದ ಸಂಸ್ಕೃತಿಯ ಬಗ್ಗೆ ನಮ್ಮ ಯುವಜನರ ಮನಸ್ಸುಗಳಲ್ಲಿ ಹೆಮ್ಮೆಯನ್ನು ತುಂಬಿರಿ"."
ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

೨. "ನಮ್ಮ ಪೂರ್ವಿಕರು ಅನುಭವಿಸಿದ ನೋವುಗಳು ನಮ್ಮ ಮಕ್ಕಳಿಗೆ (ಅಂದರೆ ನಮ್ಮ ಮುಂದಿನ ಸಮಾಜಕ್ಕೆ) ಗೊತ್ತಿರಬೇಕು. ಏಕೆಂದರೆ, ನಮ್ಮ ಪೂರ್ವಜರು ಮಾಡಿದ ತಪ್ಪುಗಳನ್ನು ನಮ್ಮ ಮುಂದಿನ ಪೀಳಿಗೆ ಪುನರಾವರ್ತಿಸಿ ಮತ್ತದೇ ಕಷ್ಟದ ಕೂಪಕ್ಕೆ ಸಿಲುಕಬಾರದು?! [ಉಲ್ಲೇಖ]."
೩. "'ನಮ್ಮ ಪೂರ್ವಿಕರು ಎಷ್ಟು ಶಕ್ತಿಶಾಲಿಗಳಾಗಿದ್ದರು' ಎಂಬುದನ್ನು ನಾವು (ಮತ್ತು ನಮ್ಮ ಮಕ್ಕಳು) ಅರಿಯಬೇಕು ಮತ್ತು 'ಸದೃಢವಾದ ನಮ್ಮ ಪುರಾತಣ ಜೀವನಶೈಲಿಯಿಂದ ಪಾಠವನ್ನು ಕಲಿಯಬೇಕು'."
ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

೪. ""ಹಣವನ್ನು ಗಳಿಸುವುದಷ್ಟೇ ಈ ಜೀವನದ ಮುಖ್ಯ ಉದ್ದೇಶವಲ್ಲ" ಎಂಬುದನ್ನು ಅರಿತುಕೊಳ್ಳಬೇಕು."


೫. "ಉಡುಗೆ-ತೊಡುಗೆ, ಭಾಷೆಗಳ ಸಹಿತ ಎಲ್ಲವನ್ನೂ ಕಣ್ಣುಮುಚ್ಚಿಕೊಂಡು ಪಾಶ್ಚಾತ್ಯರಿಂದ ಅನುಕರಣೆ ಮಾಡುವುದನ್ನು ನಿಲ್ಲಿಸಬೇಕು."


೬. "ಆಂಗ್ಲ ಭಾಷೆಯಲ್ಲಿ ಸಾಕಷ್ಟು ಉಚ್ಚಾರಣೆಗಳು ಬಳಕೆಯಲ್ಲಿವೆ. ಬ್ರಿಟಿಷರ ಉಚ್ಚಾರಣೆಯನ್ನು ನಕಲುಮಾಡಲು ಅಮೇರಿಕನ್ನರು ಹಾತೊರೆಯುವುದಿಲ್ಲ & ಅದೇ ರೀತಿ ಅಮೇರಿಕನ್ನರ ಉಚ್ಚಾರಣೆಯನ್ನು ಬ್ರಿಟಿಷರು ಪಾಲಿಸುವುದಿಲ್ಲ. ಹಾಗಾಗಿ, ದಯವಿಟ್ಟು ಬ್ರಿಟಿಷರ ಅಥವಾ ಅಮೇರಿಕನ್ನರ ಉಚ್ಚಾರಣೆಯ ಶೈಲಿಯನ್ನು ನಕಲು ಮಾಡುವುದನ್ನು ನಿಲ್ಲಿಸಿ. ಆಂಗ್ಲವನ್ನು ಭಾರತೀಯ ಉಚ್ಚಾರಣೆಯಲ್ಲಿಯೇ ಮಾತನಾಡಿ."
೭. "ನೀವೊಬ್ಬ ನಾಯಕನಾಗಿದ್ದರೆ, ನಿಮ್ಮ ಬಳಿ ಅಧಿಕಾರವಿದೆ ಎಂದಾಯಿತು. ನಿಮಗಿರುವ ಅಧಿಕಾರವನ್ನು ಜಾಣ್ಮೆಯಿಂದ ಬಳಸಿ & ನಿಮ್ಮ ಸಂಸ್ಥೆಯಲ್ಲಿ ಭಾರತೀಯ ಉಡುಗೆಯ ಶೈಲಿಯನ್ನು ಅಭ್ಯಸಿಸಿ."


೮. "ನೀವೊಬ್ಬ ನಾಯಕನಾಗಿದ್ದರೆ, ನಿಮ್ಮ ಬಳಿ ಅಧಿಕಾರವಿದೆ ಎಂದಾಯಿತು. ನಿಮಗಿರುವ ಅಧಿಕಾರವನ್ನು ಜಾಣ್ಮೆಯಿಂದ ಬಳಸಿ & ವಿದೇಶಿ ಮೂಲದ ನಿಮ್ಮ ಸ್ನೇಹಿತರಿಗೆ ಮತ್ತು ವ್ಯಾಪಾರದ ಪಾಲುದಾರರಿಗೆ ಭಾರತೀಯ ಉಡುಗೆಯ ಶೈಲಿಯನ್ನು ಪರಿಚಯಿಸಿ (ಖಂಡಿತ ಅವರದನ್ನು ಇಷ್ಟಪಡುತ್ತಾರೆ)."


೯. "ನೀವೊಬ್ಬ ನಾಯಕನಾಗಿದ್ದರೆ, ನಿಮ್ಮ ಬಳಿ ಅಧಿಕಾರವಿದೆ ಎಂದಾಯಿತು. ನಿಮಗಿರುವ ಅಧಿಕಾರವನ್ನು ಜಾಣ್ಮೆಯಿಂದ ಬಳಸಿ & ವಿದೇಶಿ ಮೂಲದ ನಿಮ್ಮ ಸ್ನೇಹಿತರು ಅಥವಾ ವ್ಯಾಪಾರದ ಪಾಲುದಾರರು ಭಾರತದಲ್ಲಿರುವ ನಿಮ್ಮ ಕಛೇರಿಗೆ ಬಂದಾಗ ಅವರಿಗೆ ಸ್ಥಳೀಯ ಅನ್ನಪಾನಗಳನ್ನು ನೀಡಿ (ಕಡಿಮೆ ಖಾರವನ್ನು ಹಾಕುವಂತೆ ಬಾಣಸಿಗನಿಗೆ ನೀವು ಹೇಳಬಹುದು).
  ಬಂದವರಿಗೆ ಸುಮ್ಮನೆ ಒಂದಿಷ್ಟು ಪಿಜ್ಜಾ/ಬರ್ಗರ್/ಮದ್ಯವನ್ನು ನೀಡಬೇಡಿ. ಅವರೆಲ್ಲ ತಮ್ಮ ದೇಶದಲ್ಲೂ ಅದನ್ನೇ ತಿಂದು-ಕುಡಿಯುತ್ತಾರೆ. ಆದ್ದರಿಂದ ಅವರಿಗೆ ಸ್ಥಳೀಯ ಆಹಾರದ ರುಚಿಯನ್ನು ತೋರಿಸಿ.
"
ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

೧೦. "ಪಾಶ್ಚಾತ್ಯ ಜೀವನಶೈಲಿಯನ್ನು ಹಿಂಬಾಲಿಸುವುದನ್ನು ನಿಲ್ಲಿಸಿ. ಭಾರತೀಯ ಜೀವನಶೈಲಿಯನ್ನು ಪ್ರಪಂಚಕ್ಕೆ ಪರಿಚಯಿಸಲು ಆರಂಭಿಸಿ."
ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

೧೧. "'ಪರಭಾಷಿಕರೊಂದಿಗೆ ವ್ಯವಹರಿಸಲು ಮಾತ್ರವೇ' ಆಂಗ್ಲವನ್ನು ಕಲಿಯಿರಿ/ಕಲಿಯಬಹುದು. 'ಆಂಗ್ಲವನ್ನೇ ನಿಮ್ಮ ಮಾತೃಭಾಷೆ ಮಾಡಿಕೊಳ್ಳಬೇಡಿ (ಏಕೆಂದರೆ ನಿಮಗೊಂದು ಮಾತೃಭಾಷೆ ಆಗಲೇ ಇದೆ)'."
ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

೧೨. "ನಿಮ್ಮ ಮಾತೃಭಾಷೆ ಗೊತ್ತಿಲ್ಲದ ಜನರೊಂದಿಗೆ ವ್ಯವಹರಿಸುತ್ತಿದ್ದರೆ ಮಾತ್ರವೆ ಆಂಗ್ಲವನ್ನು ಬಳಸಿ/ಬಳಸಬಹುದು.
  ನಾವು ಗಮನಿಸಿರುವಂತೆ ಸ್ವಲ್ಪ ಜನ (ಒಡಹುಟ್ಟಿದವರು, ಒಂದೇ ಭಾಷಾಮೂಲದ ಸ್ನೇಹಿತರು, ಇತ್ಯಾದಿ) ಕನ್ನಡ/ಹಿಂದಿ/ಇತ್ಯಾದಿ (ಸ್ಥಳೀಯ/ಮಾತೃಭಾಷೆ) ಅರಿತಿದ್ದರೂ ಸಹ ಆಂಗ್ಲದಲ್ಲಿ ಮಾತನಾಡುತ್ತಾರೆ.
  ಹೀಗೇಕೆ ಎಂದು ನಾವು ಕೆಲವರನ್ನು ವಿಚಾರಿಸಿದಾಗ ಅವರ ಉತ್ತರ - "ನಾವು ಮನೆಗಳಲ್ಲಿ ಆಂಗ್ಲವನ್ನು ಬಳಸಿದರೆ, ಮುಂದೆ ಹೊರಗಡೆ ಕೆಲಸ/ವಿದ್ಯಾಭ್ಯಾಸಕ್ಕೆ ಹೋದಾಗ ಆಂಗ್ಲವನ್ನು ಎದುರಿಸುವುದು ಸರಳವಾಗುತ್ತದೆ" ಎಂಬುದು!
  ಆದರೆ, 'ಮನೆಯಲ್ಲಿಯೇ ಆಂಗ್ಲವನ್ನು ಬಳಸುವುದು' ಎಂದರೆ ಅದರರ್ಥ 'ನೀವು ಕನ್ನಡವನ್ನು/ಸ್ಥಳೀಯ ಭಾಷೆಯನ್ನು ಆಂಗ್ಲದೊಂದಿಗೆ ಬದಲಿಸುತ್ತಿದ್ದೀರಿ' ಎಂದು (ಇದನ್ನೇ ಪರದೇಶಿಗಳು ನಮ್ಮಿಂದ ಬಯಸಿದ್ದು & ಬಯಸುತ್ತಿರುವುದು)!
  ಈ ಸನ್ನಿವೇಶದಲ್ಲಿ, ನಾವು ಫ್ರೆಂಚ್, ಸ್ಪ್ಯಾನಿಷ್, ಜರ್ಮನ್ (ಇತ್ಯಾದಿ) ಜನಗಳಿಂದ ಕಲಿಯುವುದಿದೆ.
  ಅವರೆಲ್ಲಾ ಸಂಯುಕ್ತ ಸಂಸ್ಥಾನದ (ಯುಕೆ) ಖಂಡದಲ್ಲಿ ಇದ್ದರೂ ಸಹ ಒಬ್ಬ ಫ್ರೆಂಚ್ ವ್ಯಕ್ತಿ ಇನ್ನೊಬ್ಬ ಫ್ರೆಂಚ್ ವ್ಯಕ್ತಿಯೊಂದಿಗೆ ಆಂಗ್ಲದಲ್ಲಿ ಮಾತನಾಡುವುದನ್ನು ಕಾಣಲು ಸಿಗುವುದಿಲ್ಲ. ಇದೇ ರೀತಿ ಸ್ಪ್ಯಾನಿಷ್, ಜರ್ಮನ್ ಮತ್ತಿತರ ಐರೋಪ್ಯರು ತಮ್ಮ-ತಮ್ಮ ಭಾಷೆಗಳಲ್ಲಿ ಮಾತನಾಡುತ್ತಾರೆಯೆ ವಿನಃ ಆಂಗ್ಲದಲ್ಲಿ ಅಲ್ಲ.
"

೧೩. "ಆಂಗ್ಲದ (ಅಥವಾ ಯಾವುದೇ ಪರದೇಶಿ ಭಾಷೆಯ) ಸಾಹಿತ್ಯ ಕೃತಿಗಳನ್ನು ಓದುವುದು ನಿಲ್ಲಿಸಿ. ಬದಲಿಗೆ ಕನ್ನಡದ (ಅಥವಾ ನಿಮ್ಮ ಸ್ಥಳೀಯ ಭಾರತೀಯ ಭಾಷೆಯ) ಕೃತಿಗಳನ್ನು ಓದಿ-ತಿಳಿಯಿರಿ. ಮತ್ತು ಕನ್ನಡದ (ಅಥವಾ ನಿಮ್ಮ ಸ್ಥಳೀಯ ಭಾರತೀಯ ಭಾಷೆಯ) ಸಾಹಿತಿಗಳನ್ನು ಗೌರವಿಸಿ & ಬೆಂಬಲಿಸಿ."

೧೪. "ಪರದೇಶಿ ಜೀವನ ಶೈಲಿಗಳನ್ನು (ಜಾತಿ, ಭಾಷೆ, ಸಿದ್ಧಾಂತಗಳನ್ನು) ಕಣ್ಣುಮುಚ್ಚಿ ಹಿಂಬಾಲಿಸಬೇಡಿ, ಈ ಪರದೇಶಿ ಜೀವನ ಶೈಲಿಗಳು ನಿಮ್ಮ ನಾಡು & ನಿಮ್ಮ ಜನಕ್ಕೆ ಏನೆಲ್ಲಾ ಚಿತ್ರಹಿಂಸೆಗಳನ್ನು ನೀಡಿವೆ ಎಂಬುದು ನೆನಪಿರಲಿ."
ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

೧೫. "ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ನೀವು ವಿದೇಶಕ್ಕೆ ಹೋದರೆ ಅಲ್ಲಿ ಹೇಗೆ ಕಾಳಜಿಯಿಂದ ಜೀವಿಸುವಿರೊ, ಹಾಗೆಯೇ ಇಲ್ಲೂ ಕಾಳಜಿಯಿಂದ ವರ್ತಿಸಿ. ಏಕೆಂದರೆ, ನಮ್ಮ ಕೆಲಜನರು ವಿದೇಶಗಳಿಗೆ ಹೋದಾಗ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸುತ್ತಾ ಅತೀ-ಕಾಳಜಿಯಿಂದ ಜೀವನ ನಡೆಸುತ್ತಾರೆ, ಅದೇ ಜನ ಮರಳಿ ಭಾರತಕ್ಕೆ ಬಂದತಕ್ಷಣ "ಪರವಾಗಿಲ್ಲ/ನಡೆಯುತ್ತೆ ಬಿಡಿ" ಎನ್ನುವಂತೆ ಜೀವಿಸಲು ಆರಂಭಿಸುತ್ತಾರೆ.
  ನಮ್ಮ ಯೋಚನಾ ವಿಧಾನವನ್ನು ಬದಲಿಸಲು ಇದು ಸಕಾಲ. 'ನಾನೊಬ್ಬ ಸ್ವಚ್ಛತೆಯನ್ನು ಕಾಪಾಡಿದರೆ ಇಡೀ ದೇಶ ಸ್ವಚ್ಛವಾಗಿಬಿಡುವುದೇನು' ಎನ್ನುವ ಋಣಾತ್ಮಕ ಆಲೋಚನೆಗಳನ್ನು ದೂರವಿಡಿ.
  "ಹನಿ-ಹನಿ ಕೂಡಿ ಹಳ್ಳ; ತೆನೆ-ತೆನೆ ಸೇರಿ ಬಳ್ಳ" ಎಂಬ ಗಾದೆಮಾತಿನಂತೆ ನಾನು ಜವಾಬ್ದಾರಿಯಿಂದ ವರ್ತಿಸಿ ಎಲ್ಲೆಂದರಲ್ಲಿ ಕಸಕಡ್ಡಿ ಬಿಸಾಕುವುದನ್ನು & ನನ್ನ ಸುತ್ತಲಿನ ಪ್ರಕೃತಿಯನ್ನು ಹಾಳುಮಾಡುವುದನ್ನು ನಿಲ್ಲಿಸದರೆ ಮಾತ್ರ ಸ್ವಚ್ಛ ಭಾರತದ ಕನಸು ನನಸಾಗುವುದು.
"
ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಕೊನೆಯಲ್ಲಿ, ಇವತ್ತು ನಮ್ಮ ನಾಡಿನ ನಾಯಕರಲ್ಲಿ ಒಬ್ಬರಾದ ಸಂಗೊಳ್ಳಿ ರಾಯಣ್ಣನ ಜನ್ಮದಿನ :) - ನಮ್ಮ ನಾಯಕನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು!

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು


ಉಲ್ಲೇಖಗಳು:
☛  ನದಿಗಳ ಸಂಘಟನೆಯು ೨ ವರ್ಷಗಳಲ್ಲಿ ಮಾಡಿದ ಸಾಧನೆ - ಸದ್ಗುರು
☛  ಭಾರತದ ಹಬ್ಬ
☛  ಈ ಸಲದ ಸ್ವಾತಂತ್ರ್ಯೋತ್ಸವ ವಿಶೇಷವಾದದ್ದು! ಮರುಒಂದಾದ ಭಾರತ!
☛  ಭಾರತದಲ್ಲಿ ಬಿರುಕು ಮೂಡಿಸುವ ಶಕ್ತಿಯ ವಿವಿಧ ರೂಪಗಳು!
☛  ಗೋವಾದ ಕರಾಳ ಅಧ್ಯಾಯ!
☛  ಇದು ಹೊಸ ಹಿಂದುಸ್ಥಾನ!
☛  ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು!
☛  ಮೂಢನಂಬಿಕೆಗಳು!
☛  ಮಾತೃಭೂಮಿಯ ಮೇಲಿನ ಮಮತೆ ಮುಗಿದ್ಹೋಯಿತೆ?!
☛  ಸದ್ಗುರುಗಳಿಂದ ಸ್ವಾತಂತ್ರ್ಯೋತ್ಸವದ ಸಂದೇಶ
☛  ಭಾರತೀಯ ಸಂಸ್ಕೃತಿಯ ಆಳ
☛  ನಾಡಿ ಸ್ತುತಿ | ನದಿಗಳ ಸಂಘಟನೆಯ ಮಂತ್ರ