ಭಾರತದ ವಸಾಹತುಶಾಹಿ ಗಣ್ಯರು - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ನಿಯಮಗಳಿಂದ ತುಂಬಿರುವ, ಸಂವಿಧಾನ ಎಂದು ಕರೆಯಲ್ಪಡುವ ಪುಸ್ತಕವನ್ನು ಇಂದು (ಜನೆವರಿ ೨೬) ನಮ್ಮ ನೆಲದ ಮೇಲೆ ಜಾರಿಗೊಳಿಸಲಾಯಿತು. ಭಾರತದ ಸಂವಿಧಾನದ ಕುರಿತ ಕೆಲಸತ್ಯಗಳನ್ನು ಇಂದು ತಿಳಿದುಕೊಳ್ಳೋಣ!



ಸಂವಿಧಾನ ರಚಿಸಲು ಬ್ರಿಟೀಷರಿಗೆ ನಿಯತ್ತಾಗಿರುವ ವ್ಯಕ್ತಿಯನ್ನೇ ಏಕೆ ಆಯ್ಕೆಮಾಡಲಾಯಿತು (ಸ್ಥಳೀಯ ಸಂಸ್ಕೃತಿಗೆ ನಿಯತ್ತಾಗಿರುವ ವ್ಯಕ್ತಿಯನ್ನು ಏಕೆ ಆಯ್ದುಕೊಳ್ಳಲಿಲ್ಲ)?
- ಬ್ರಿಟೀಷರಿಗೆ ನಿಯತ್ತಾಗಿರುವ ವ್ಯಕ್ತಿಯ ಮುಖಾಂತರ ಈ ನೆಲದ ನಿಯಮಗಳನ್ನು ರೂಪಿಸಿದರೆ, ಆ ಮೂಲಕ ಈ ನೆಲವನ್ನು ಬಿಟ್ಟುಹೋದ ಮೇಲೂ ಈ ನಿಯಮಗಳನ್ನು ಬಳಸಿ ಬ್ರಿಟೀಷರು ನಮ್ಮ ನಾಡಿನ ಮೇಲೆ ಹಿಡಿತ ಹೊಂದಿರಲು ಸಾಧ್ಯವಾಗುತ್ತದೆ.

ಏಕೆ ಈ ನಾಡಿನ ಸ್ಥಳೀಯ ಸಂಘಟನೆ-ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸದೆ ಸಂವಿಧಾನ ರಚನೆ ಮಾಡಲಾಯಿತು?
- ಏಕೆಂದರೆ ಈ ನಾಡಿನ ಸ್ಥಳೀಯ ಸಂಘಟನೆ-ಸಂಸ್ಥೆಗಳು ಬ್ರಿಟೀಷರ ಆಸಕ್ತಿಗಳಿಗೆ ವಿರುದ್ಧವಾಗಿವೆ ಮತ್ತು ಈ ನಾಡಿನ ಸ್ಥಳೀಯ ಸಂಘಟನೆ-ಸಂಸ್ಥೆಗಳು ಸಂವಿಧಾನವನ್ನು ಈ ನಾಡಿನ ಹಿತಾಸಕ್ತಿಗೆ ತಕ್ಕಂತೆ ರಚಿಸಲು ಒತ್ತಡ ಹೇರಬಹುದು.

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಯಾವುದೇ ಸರ್ಕಾರವೊಂದು ಈ ನೆಲದ ಜನರ ಪರವಾಗಿ ನಿಲ್ಲಬೇಕು ಮತ್ತು ಈ ನಾಡಿನ ಸೇವೆ ಮಾಡಬೇಕು ಎಂದು ನಾವೆಲ್ಲ (ಅಂದರೆ ಜನರೆಲ್ಲ) ಯೋಚಿಸುತ್ತಿರುವಾಗ, ಯಾವುದೇ ಸರ್ಕಾರವೊಂದು ಯಜಮಾನ ಮತ್ತು ಇಲ್ಲಿರುವ ಜನರೆಲ್ಲ ಜೀತದಾಳುಗಳು ಎನ್ನುವ ರೀತಿಯಲ್ಲಿ ಏಕೆ ಸಂವಿಧಾನವನ್ನು ರೂಪಿಸಲಾಗಿದೆ?
- ಏಕೆಂದರೆ... ನೀವು ಮನೆಯಿಂದ ಹೊರಗಡೆ ಬಹುದಿನಗಳ ಪ್ರವಾಸಕ್ಕೆ ಹೋಗುತ್ತಿದ್ದೀರಿ ಎಂದು ಭಾವಿಸಿದಾಗ, ನೀವು ಮರಳಿ ಮನೆಗೆ ಬರುವವರೆಗೆ ಇಲ್ಲಿರುವ ಮಕ್ಕಳೆಲ್ಲಾ ಈ ಮನೆಯನ್ನು ನೀವು ಬಯಸಿದಂತೆ ನೋಡಿಕೊಳ್ಳಬೇಕೆಂದು ನೀವು ಆಶಿಸುತ್ತೀರಿ. ಆಗ ನೀವು ನಿಯಮಗಳಿಂದ ತುಂಬಿರುವ ಪುಸ್ತಕವೊಂದು ರಚಿಸುತ್ತೀರಿ. ಮತ್ತು ನಿಮ್ಮ ಪುಸ್ತಕವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಈ ಮನೆಯಲ್ಲಿರುವ ಮಕ್ಕಳಿಗೆ ಆಗ್ರಹಿಸುತ್ತೀರಿ.
ಕೆಲ ಮಂದ ಬುದ್ಧಿಯ ಮಕ್ಕಳು ಎರಡು ಮಾತಾಡದೇ ನೀವು ಹೇಳಿದ್ದನ್ನೆಲ್ಲ ಕಣ್ಣುಮುಚ್ಚಿ ಪಾಲಿಸುತ್ತಾರೆ ಎನ್ನುವುದು ನಿಮಗೆ ತಿಳಿದೇ ಇದೆ. ಅಂತಹ ಮಕ್ಕಳನ್ನು ಹುಡುಕಿ ಅವರನ್ನು ನೀವು ಹಿಂದಿರುಗಿ ಬರುವವರೆಗೆ ಈ ಮನೆಯ ಮುಖಂಡರನ್ನಾಗಿ ಮಾಡುತ್ತೀರಿ. ಇದರಿಂದ ನೀವು ಮರಳಿ ಬರುವವರೆಗೆ ಅವರು ಈ ಮನೆಯನ್ನು ನಿಮಗೆ ಬೇಕಾದಂತೆ ಇಟ್ಟುಕೊಳ್ಳುತ್ತಾರೆ.

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಇಲ್ಲಿರುವ ಜನ ಕೆಟ್ಟವರು, ಅವರನ್ನು ಸರಿಪಡಿಸಲು ಸಂವಿಧಾನವೆಂಬ ಪುಸ್ತಕವೊಂದು ಬೇಕೇಬೇಕು ಎನ್ನುವ ಅರ್ಥದಲ್ಲಿ ಏಕೆ ಭಾರತದ ಸಂವಿಧಾನವನ್ನು ರಚಿಸಲಾಗಿದೆ/ರೂಪಿಸಲಾಗಿದೆ?
- ಏಕೆಂದರೆ... ನೀವು ಮನೆಯಿಂದ ಹೊರಗಡೆ ಬಹುದಿನಗಳ ಪ್ರವಾಸಕ್ಕೆ ಹೋಗುತ್ತಿದ್ದೀರಿ ಎಂದು ಭಾವಿಸಿದಾಗ, ಈ ಮನೆಯಲ್ಲಿರುವ ಮಕ್ಕಳು ಜ್ಞಾನ ಮತ್ತು ಬಲವನ್ನು ಹೆಚ್ಚಿಸಿಕೊಳ್ಳುವುದು ನಿಮಗೆ ಇಷ್ಟವಾಗುವುದಿಲ್ಲ. ಒಂದುವೇಳೆ ಈ ಮನೆಯಲ್ಲಿರುವ ಮಕ್ಕಳು ನಿಮ್ಮ ವಿರುದ್ಧ ಬೆಳೆದು ನಿಂತರೆ ನೀವು ಈ ಮನೆಯ ಮೇಲಿನ ಹಿಡಿತವನ್ನು ಸಂಪೂರ್ಣ ಕಳೆದುಕೊಳ್ಳುವಿರಿ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಆಗ ನೀವು ನಿಯಮಗಳಿಂದ ತುಂಬಿರುವ ಪುಸ್ತಕವೊಂದು ರಚಿಸುತ್ತೀರಿ.
"ತಾವು ಬಲಹೀನರು, ದರಿದ್ರರು, ಹಿಂದುಳಿದವರು ಮತ್ತು ನೀವು ಬರೆದಿಟ್ಟ ಪುಸ್ತಕವನ್ನು ಹಿಂಬಾಲಿಸಿದರೆ ಅವರೂ ನಿಮ್ಮಂತೆ ಬುದ್ಧಿಜೀವಿಗಳಾಗಬಹುದು" ಎಂದು ಈ ಮನೆಯಲ್ಲಿರುವ ಮಕ್ಕಳು ನಂಬುವಂತೆ ಮಾಡಿದರೆ ಅದು ನಿಮಗೆ ಈ ಮನೆಯ ಮೇಲಿನ ಹಿಡಿತ ಹಾಗೆಯೇ ಇರುವಂತೆ ಮಾಡುತ್ತದೆ.

"ಭಾರತೀಯರು ಬಲಹೀನರು, ದರಿದ್ರರು, ಹಿಂದುಳಿದವರು" ಎಂದು ಕಣ್ಣುಮುಚ್ಚಿ ಘೋಷಿಸಿದವರು/ಸಾರಿದವರು ಯಾರು?
- ಅದು ನಾವೇ, ಬ್ರಿಟೀಷರು. ಒಂದುವೇಳೆ ಹಿಂದುಸ್ಥಾನಿಗಳು ತಮ್ಮ ಸ್ವಂತ ನಾಯಕತ್ವದ ಮೇಲೆ ವಿಶ್ವಾಸ & ಸ್ವಾಭಿಮಾನವನ್ನು ಬೆಳೆಸಿಕೊಂಡರೆ ನಾವು (ಬ್ರಿಟೀಷರು) ಹಿಂದುಸ್ಥಾನದ ಮೇಲೆ ಹಿಡಿತವನ್ನು ಕಳೆದುಕೊಳ್ಳಬೇಕಾಗುತ್ತದೆ. ಅವರ(ಹಿಂದುಸ್ಥಾನಿಗಳ) ಆತ್ಮಸ್ಥೈರ್ಯ ಕಡಿಮೆಯಿರುವಾಗ ಮತ್ತು ಅವರು ಇರುವುದೇ ಪಾಶ್ಚಿಮಾತ್ಯರನ್ನು ಹಿಂಬಾಲಿಸಲು ಎಂದು ನಂಬಿಕೊಂಡಿರುವಾಗ ಹಿಂದುಸ್ಥಾನಿಗಳು ನಮಗೆ(ಬ್ರಿಟೀಷರಿಗೆ) ಚೆನ್ನಾಗಿ ಸೇವೆ ಮಾಡುತ್ತಾರೆ.

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

"ಈ ಸಂವಿಧಾನ ಯಾರಿಗೂ ಸರಿಹೊಂದುವುದಿಲ್ಲ ಹಾಗಾಗಿ ಇದನ್ನು ಸುಟ್ಟು ಹಾಕುವವರಲ್ಲಿ ನಾನೇ ಮೊದಲಿಗನಾಗಿರುತ್ತೇನೆ" ಎಂದು ಸ್ವತಃ ಸಂವಿಧಾನವನ್ನು ಬರೆದ ಬೆನೆಗಲ್ ನರಸಿಂಹ ರಾವ್ ಅವರೇ ಹೇಳುತ್ತಾರೆ!

ಸಂವಿಧಾನ ರಚನೆಯ ಹೊಣೆಹೊತ್ತ ಮಂಡಳಿಯನ್ನು ಸ್ವತಂತ್ರ ಭಾರತದಲ್ಲಿ ಆಯ್ಕೆಮಾಡಲಾಯಿತೆ?
- ಇಲ್ಲ. ಸಂವಿಧಾನ ರಚನೆಯ ಹೊಣೆಹೊತ್ತ ಮಂಡಳಿಯನ್ನು ಆ ಕಾಲದ ಬ್ರಿಟೀಷ್ ಹಿತಾಸಕ್ತಿಗಳಿಗೆ ತಕ್ಕಂತೆ ರಚಿಸಲಾಯಿತು.

ಭಾರತೀಯರು (ಭಾರತದ ಸಾಮಾನ್ಯ ಜನರು) "ನಾವು ಈ ಸಂವಿಧಾನವನ್ನು ಅಂಗೀಕರಿಸುತ್ತೇವೆ" ಎಂದು ದೃಢಪಡಿಸಿದರೆ?
- ಇಲ್ಲ. ಯಾರು ಸಂವಿಧಾನವನ್ನು ರಚಿಸಿದರೊ ಅವರೇ ಈ ಸಂವಿಧಾನವನ್ನು ಭಾರತದ ಜನರ ಪರವಾಗಿ ಅಂಗೀಕರಿಸಿದರು! ಶಾಲೆಯಲ್ಲಿ ಕೊಟ್ಟ ಮನೆಗೆಲಸವನ್ನು ನಾನೇ ಬರೆದು, ಅದಕ್ಕೆ ನಾನೇ ಅಂಕಗಳನ್ನು ಕೊಟ್ಟುಕೊಳ್ಳುವಂತೆ!

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಭಾರತದ ಸಂವಿಧಾನವನ್ನು ಸ್ವತಂತ್ರ ಭಾರತದ ಯಾವುದೇ ಸಂಸ್ಥೆಗಳು ಪರಿಶೀಲಿಸಿಲ್ಲ ಮತ್ತು ಅಂಗೀಕರಿಸಿಲ್ಲ! ಬ್ರೆಜಿಲ್, ಅಮೆರಿಕಾ ಮತ್ತಿತರ ದೇಶಗಳ ಸಂವಿಧಾನಗಳನ್ನು ಒಂದು ಮಂಡಳಿ ರಚಿಸಿ ಅದನ್ನು ಬೇರೆಯ ಸ್ವತಂತ್ರ ಮಂಡಳಿಗಳಿಂದ ಪರಿಶೀಲಿಸಿ ಆ ನಂತರ ಜನರ ಅನುಮೋದನೆ ಪಡೆದ ನಂತರವಷ್ಟೆ ಆಯಾ ಸಂವಿಧಾನಗಳನ್ನು ಆಯಾ ದೇಶಗಳ ಮೇಲೆ ಅವಲಂಭಿಸಲಾಗಿದೆ.
ಭಾರತದ ಸಂವಿಧಾನ ರಚನಾ ಮಂಡಳಿ ಪ್ರಪಂಚದ ಸಾಕಷ್ಟು ದೇಶಗಳನ್ನು ಭೇಟಿಮಾಡಿ ಅವರ ಸಂವಿಧಾನಗಳಲ್ಲಿರುವ ನಿಯಮಗಳನ್ನು ಪರಿಗಣಿಸುತ್ತದೆ ಆದರೆ ಏಕೆ "ಆ ದೇಶಗಳ ಸಂವಿಧಾನ ರಚನಾ ಪದ್ಧತಿಯನ್ನು" ಭಾರತದಲ್ಲಿ ಅನುಸರಿಸಲಿಲ್ಲ?!

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಂವಿಧಾನಕ್ಕೆ ಮಾಡಿದ ಸಾಕಷ್ಟು ತಿದ್ದುಪಡಿಗಳ ಬಗ್ಗೆ ನಿಮಗೆ ತಿಳಿದೇ ಇದೆ. ಆದರೆ ಕಾಂಗ್ರೆಸ್ ಪಕ್ಷ ಯಾವ ಮುಖ್ಯ ಕಾರಣಗಳಿಗೆ ಸಂವಿಧಾನವನ್ನು ಅಷ್ಟೊಂದು ಬಾರಿ ತಿದ್ದುಪಡಿ ಮಾಡಿತು?
- ಒಂದು ಗುಂಪಿಗೆ ಮೀಸಲಾತಿ ಕೊಟ್ಟು ಇನ್ನೊಂದು ಗುಂಪಿಗೆ ಕೊಡದೆ ಸಮಾಜದ ವಿವಿಧ ಸಮುದಾಯಗಳ ಮಧ್ಯೆ ಬೆಂಕಿ ಹಚ್ಚಲು. ಓಲೈಕೆ ರಾಜಕಾರಣ, ಅಧಿಕಾರ, ಇರೊ-ಬರೊ ಸಂಬಂಧಿಗಳ ಹೆಸರಲ್ಲೆಲ್ಲ ಕೋಟಿ-ಕೋಟಿ ಆಸ್ತಿ ಇವೇ ಇಟಲಿ ರಾಣಿಯ ಕಾಂಗ್ರೆಸ್ ಪಕ್ಷಕ್ಕಿರುವ ಮುಖ್ಯ ಧ್ಯೇಯಗಳು. ಒಂದುವೇಳೆ ಭಾರತವೇನಾದರೂ ಸಂಕಷ್ಟಕ್ಕೀಡಾಗಿ ದಿವಾಳಿಯಾದರೆ ಗಾಂಧಿ-ನೆಹರು-ಇಟಲಿ-ರಾಣಿಯ ಪರಿವಾರಕ್ಕೆ ಹಾರಿಹೋಗಿ ನೆಲೆಸಲು ಭೂಮಿಯ ಮೇಲೆ ಎಷ್ಟೋ ದೇಶಗಳಿವೆ.

ಆದರೆ ಹಿಂದುಸ್ಥಾನಿಗಳಿಗೆ ನೆಲೆಸಲು ಇರುವುದು ಇದೊಂದೇ ನೆಲ!



ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಸಾಕಷ್ಟು ಸಮಯದ ನಂತರ ನಮಗೆ ನಮ್ಮ ನೆಲ-ಜಲ-ಜನರ ಬಗ್ಗೆ ಕಾಳಜಿಯಿರುವ ದೇಶಾಭಿಮಾನಿ ಸರ್ಕಾರವೊಂದು ದೊರೆತಿದೆ. ತುಂಬಾ ಸಮಯದ ನಂತರ ದೊರಕಿರುವ ಈ ಸದಾವಕಾಶವನ್ನು ಸರಿಯಾಗಿ ಬಳಸಿಕೊಂಡು ಸಂವಿಧಾನದಲ್ಲಿ ಸೇರಿಸಿರುವ ತಪ್ಪುಗಳನ್ನು ಸರಿಪಡಿಸುವುದು ಜಾಣತನ.

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಜೈ ಹಿಂದ್!




  ಉಲ್ಲೇಖಗಳು/ಹೆಚ್ಚಿನ ಮಾಹಿತಿ