ನೀನೆ ರಾಮ, ಅಲ್ಲಾ, ಯೇಸು. ಆದರೆ..! - ಹಳತು ಹೊನ್ನು

ನೀನೆ ರಾಮ, ನೀನೆ ಶಾಮ;
ನೀನೆ ಅಲ್ಲಾ, ನೀನೆ ಯೇಸು!

...
ನನಗೇನು ಹೆಸರಿಲ್ಲಾ; ಹೆಸರಲ್ಲಿ ನಾನಿಲ್ಲಾ!
...
ಕಣಕಣ ಕಣದೊಳಗೆ ಕುಳಿತಿರುವೆ



ಒಂದು ಕಾಲದ ಈ ಸುಪ್ರಸಿದ್ಧ ಹಾಡು ನೆನಪಿದೆಯೆ?! ಈ ತರಹದ ಹಾಡುಗಳು ಹಿಂದುಸ್ಥಾನದಲ್ಲಿ ಮಾತ್ರ ಪ್ರಸಿದ್ಧಿ ಪಡೆಯಲು ಸಾಧ್ಯ! ನಿಮ್ಮ ಸ್ವಂತ ಸಂಶೋಧನೆ ನಡೆಸಿ "ಈ ತರಹದ ಎಷ್ಟು ಹಾಡುಗಳು (ಜಾತ್ಯಾತೀತ ಭಾವನೆಯನ್ನು ಪಸರಿಸುವ ಹಾಡುಗಳು) ವ್ಯಾಟಿಕನ್, ಇಟಲಿ, ಸೌದಿ, ಇರಾನ್, ಮತ್ತಿತರೆ ಏಕರೂಪವಾದಿ[?] ದೇಶಗಳಲ್ಲಿ ಪ್ರಸಿದ್ಧಿ ಪಡೆದಿವೆ" ಎಂದು ಲೆಕ್ಕ ಹಾಕಿನೋಡಿ.

ನಿಮ್ಮ ಸಂಶೋಧನೆ ಖಂಡಿತಾ ಸೊನ್ನೆಯಲ್ಲಿ ಅಂತ್ಯಗೊಳ್ಳುವುದು.


  • "ರಾಮ, ಅಲ್ಲಾ, ಯೇಸು ಎಲ್ಲವೂ ಇರುವ ಒಬ್ಬರೇ ದೇವರ ವಿವಿಧ ಪ್ರಕಾರಗಳು (ಅವತಾರಗಳು)" ಎಂದು ಹಿಂದುತ್ವವು ವಿಶ್ವಕ್ಕೆಲ್ಲ ತಿಳಿಸುತ್ತದೆ.
  • "ಮುಕ್ತಿಗೆ ಅನೇಕ ಮಾರ್ಗಗಳಿವೆ" ಎಂದು ಹಿಂದೂ ಪವಿತ್ರ ಗ್ರಂಥಗಳು ಸಾರಿ ಹೇಳುತ್ತವೆ.
  • "ದೇವನೊಬ್ಬ, ನಾಮ ಹಲವು" ಎಂದು ಹಿಂದೂ ಧರ್ಮಗುರುಗಳು ಜನತೆಗೆ ತಿಳಿಹೇಳುತ್ತಾರೆ.


... ಆದರೆ..,





ಈಗ ನಿಮಗೆ ನೈಜ ವ್ಯತ್ಯಾಸದ ಅರಿವಾಗುತ್ತಿದೆ ಎಂದು ಭಾವಿಸುತ್ತೇವೆ!

ಈ ತರಹದ ಎಲ್ಲಾ ನೈಜ ವ್ಯತ್ಯಾಸಗಳನ್ನು ಅರಿತಮೇಲೆಯೂ "ಹಿಂದೂಗಳು ಅಸಹಿಷ್ಣುಗಳು ಮತ್ತು ಏಕರೂಪವಾದಿಗಳು[?] ಮಾತ್ರ ಶಾಂತಿದೂತರು" ಎಂದು ನಮಗೆಲ್ಲ ಹೇಳಲಾಗುತ್ತದೆ!

  • ಹಿಂದೂಗಳನ್ನು ಅವಹೇಳನ ಮಾಡುವ ವರದಿಗಳನ್ನು ವಿಶ್ವಸಂಸ್ಥೆ ಪ್ರಕಟಿಸುತ್ತದೆ!
  • ಹಿಂದೂಗಳನ್ನು ಖಳನಾಯಕರಂತೆ ಬಿಂಬಿಸುವ ಚಿತ್ರಗಳನ್ನು ಹಾಲಿವುಡ್, ಬಾಲಿವುಡ್ ನಿರ್ಮಿಸುತ್ತವೆ!


"ಎಲ್ಲಾ ಜಾತಿಗಳೂ ಒಂದೇ (ಹಿಂದೂ, ಮುಸ್ಲಿಂ, ಕ್ರೈಸ್ತ)" ಎಂದು ಯಾವತ್ತೂ ಹೇಳಬೇಡಿ. ಹಿಂದೂಗಳಿಗೆ ಜಾತ್ಯಾತೀತತೆಯ ಪಾಠ ಮಾಡುವ ಮೊದಲು ಇತರರು (ಕ್ರೈಸ್ತರು, ಮುಸ್ಲೀಮರು, ಕಮ್ಯುನಿಸ್ಟರು, ಇತ್ಯಾದಿ) ಜಾತ್ಯಾತೀತತೆಯನ್ನು ಒಪ್ಪಿಕೊಳ್ಳುವರೆ ಎಂದು ಪರೀಕ್ಷಿಸಿ ನೋಡಿ.



ಎಲ್ಲಿಯವರೆಗೆ ಭೂಮಿಯ ಮೇಲೆ ಕನಿಷ್ಠ ಒಂದು ಜಾತಿ ತನ್ನ ಹಿಂಬಾಲಕರಿಗೆ "ನೀವಷ್ಟೇ ಸರಿ; ಮಿಕ್ಕವರೆಲ್ಲಾ ತಪ್ಪು" ಎಂಬ ಭಂಡತನವನ್ನು ಕಲಿಸಿಕೊಟ್ಟು ಜನರ ತಲೆಕೆಡಿಸುತ್ತಾ, ಅವರ ಮನದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಾ ಇರುವುದೊ, ಅಲ್ಲಿಯವರೆಗೆ ಈ ಭೂಮಿಯ ಮೇಲೆ "ಕೋಮುಸಂಘರ್ಷ ನಿಲ್ಲದು"!



ಆತ್ಮೀಯ ಹಿಂದೂಗಳೆ,

ಯಾರಾದರು ನಿಮಗೆ ಜಾತ್ಯಾತೀತತೆಯ ಬಗ್ಗೆ ಪಾಠ ಹೇಳಲು ಬಂದರೆ ಅಂಥವರಿಗೆ "ಮೊದಲು ವ್ಯಾಟಿಕನ್, ಸೌದಿ, ಇರಾನ್ಗಳು ಜಾತ್ಯಾತೀತ ದೇಶಗಳಾಗಿ ಬದಲಾಗಲಿ, ಆಮೇಲೆ ನೋಡೋಣ" ಎಂದು ಸರಿಯಾದ ಮರುತ್ತರ ನೀಡಿ ಕಳುಹಿಸಿ.

ಏಕೆಂದರೆ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಕೊಂದುಹಾಕಿ "ಜಾತ್ಯಾತೀತ" ಎಂಬ ಪದವನ್ನು ಹಿಂದುಸ್ಥಾನದ ಮೇಲೆ ಹೇರಿದರು.


ವ್ಯಾಟಿಕನ್ ಕ್ರೈಸ್ತ ದೇಶ, ಸೌದಿ-ಇರಾನ್ಗಳು ಮುಸ್ಲಿಂ ದೇಶಗಳಾಗಿ ಇರಬಹುದು ಎನ್ನುವುದಾದರೆ,
ಹಿಂದುಸ್ಥಾನ ಮಾತ್ರ ಏಕೆ ಹಿಂದೂರಾಷ್ಟ್ರ ಆಗಬಾರದು?!






  ಉಲ್ಲೇಖಗಳು/ಹೆಚ್ಚಿನ ಮಾಹಿತಿ